ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆಯುತ್ತಿದ್ದು ಎಲ್ಲಾ ಜಾತಿ ವರ್ಗಗಳಿಗೆ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಹ ಸಾಮಾಜಿಕ ನ್ಯಾಯದ ಅಡಿಯಲ್ಲಿ ನೂತನವಾಗಿ ಸದಸ್ಯರನ್ನು ನೇಮಕ ಮಾಡುವ ಮೂಲಕ ತಾನೊಂದು ಮಾದರಿಯ ಸರ್ಕಾರವಾಗಿದೆ ಎಂಬುದನ್ನು ನಿರೂಪಿಸಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯ ಕೋಟೆ ಬಿ.ಟಿ ಚಂದ್ರಶೇಖರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದವರಿಗೆ ಅವಕಾಶಗಳು ತಾನಾಗಿಯೇ ಸಿಗುತ್ತವೆ ಎಂಬುದಕ್ಕೆ ಇವತ್ತಿನ ನೇಮಕವೇ ಉದಾಹರಣೆಯಾಗಿವೆ ನೂತನವಾಗಿ ಸದಸ್ಯರಾಗಿ ನೇಮಕ ಮಾಡಲು ಸಹಕರಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಅನಿಲ್ ಕುಮಾರ್ ಸೇರಿದಂತೆ ಆಯ್ಕೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಇದೇ ಸಂದರ್ಭದಲ್ಲಿ ಧನ್ಯವಾದಗಳು ತಿಳಿಸಿದರು.
ಮತ್ತೊಬ್ಬ ಸದಸ್ಯ ಗಾಂಧಿನಗರ ಅನಿಲ್ ಕುಮಾರ್ ಮಾತನಾಡಿ ಕಾಂಗ್ರೆಸ್ ಸರ್ಕಾರವು ಕುಡಾ ಅಧ್ಯಕ್ಷರಾಗಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿದೆ ಸದಸ್ಯರಾಗಿ ತಿಗಳ, ಯಾದವ, ಎಸ್ಸಿ, ಒಕ್ಕಲಿಗ ಸೇರಿದಂತೆ ಎಲ್ಲರಿಗೂ ಅವಕಾಶ ನೀಡಲಾಗಿದೆ ಮುಂದೆ ನಗರದ ಸಮಗ್ರ ಅಭಿವೃದ್ಧಿಗೆ ಪ್ರಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿ ಮಾದರಿಯಾಗಿಸುವುದೇ ನಮ್ಮ ಸಮಿತಿಯ ಗುರಿಯಾಗಿದೆ ಎಂದು ತಿಳಿಸಿದರು.
ಸದಸ್ಯ ಕಿಲಾರಿಪೇಟೆ ಮಣಿ ಮಾತನಾಡಿ ಕುಡಾ ಬಡಾವಣೆಯು ಪ್ರಾರಂಭವಾಗಿ ಸುಮಾರು 30 ವರ್ಷಗಳಾಗಿದ್ದು ಅಭಿವೃದ್ಧಿ ಕೊರತೆಯಾಗಿದೆ ಕೂಡಲೇ ಸರ್ಕಾರದಿಂದ ಅನುದಾನದ ಜೊತೆಗೆ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಅವರ ಸಲಹೆ ಸೂಚನೆಗಳನ್ನು ಪಡೆದು ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಕೂಡಲೇ ಅಧಿಕಾರಿಗಳ ಸಭೆ ಕರೆದು ಖಾಲಿ ನಿವೇಶನಗಳ ಮಾಹಿತಿ ಪಡೆದು ಮಾರಾಟದ ಬಗ್ಗೆ ಚರ್ಚಿಸಲಾಗುತ್ತದೆ ಮುಂದಿನ ದಿನಗಳಲ್ಲಿ ಹೊಸ ಬಡಾವಣೆಗೂ ಸಹ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸದಸ್ಯೆ ಜ್ಯೋತಿ ಬ್ಯಾಂಕ್ ಮುನಿಯಪ್ಪ ಇದ್ದರು.