ಮೂರು ತಿಂಗಳ ಹಿಂದೆ ತಾನು ಮಾಡದ ತಪ್ಪಿಗೆ ಕೇಸ್ ಹಾಕಿಸಿಕೊಂಡು, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ಅಪರಾಧಿಗಳಂತೆ ಫೋಟೋ ಬಂದ ಹಿನ್ನೆಲೆ, ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನೇಣಿಗೆ ಶರಣಾದ ಕುಶಾಲನಗರದ ವಿನಯ್…..
ಸಾಮಾಜಿಕ ಜಾಲತಾಣದ ಗ್ರೂಪಿನಲ್ಲಿ ಅಡ್ಮಿನ್ ಗಳಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸಿ ಯಾರೋ ಹಾಕಿದ ಪೋಸ್ಟಿಗೆ, ಕೇಸು ಹಾಕಿಸಿಕೊಂಡು, ಕೆಲವು ಮಾಧ್ಯಮಗಳಲ್ಲಿ ಮತ್ತು ಹಲವು ಗ್ರೂಪ್ಗಳಲ್ಲಿ ಫೋಟೋ ಹಾಕಿ ತೇಜೋವದೆ ಸತತವಾಗಿ ಮಾಡುತ್ತಿರುವ ಬಗ್ಗೆ ಮನನೊಂದು ಇಂದು ಬೆಳಗಿನ ಜಾವ ಸಾಮಾಜಿಕ ಜಾಲತಾಣದ ಗ್ರೂಪಿನಲ್ಲಿ ತನಗಾದ ನೋವಿನ ಎಲ್ಲಾ ವಿಚಾರಗಳನ್ನು ತಿಳಿಸಿ, ನನ್ನಿಂದಾದರೂ ಕೊಡಗಿನಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಲಿ, ಇಲ್ಲಸಲ್ಲದಕೆಲ್ಲ ಕೇಸು ಜಡಿದು ಹಲವರ ಬಾಳನ್ನು ಹಾಳು ಮಾಡುವುದು ತಪ್ಪಲಿ ಎಂದು ಬರೆದು ಸದಸ್ಯರೆಲ್ಲರಿಗೂ ಗುಡ್ ಬೈ ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೋಮವಾರಪೇಟೆ ಗೋಣಿಮರೂರು ಗ್ರಾಮದ ವಿನಯ್ (36) (ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗಿ) ಎಂಬುವರು ಕೊಡಗಿನ ಸಮಸ್ಯೆಗಳು ಎಂಬ ವ್ಯಾಟ್ಸಪ್ ಗ್ರೂಪಿನ ಅಡ್ಮಿನ್ ಆಗಿದ್ದರು. ಮಡಿಕೇರಿಯ ಮೂರ್ನಾಡು ರಸ್ತೆಯ ಶೌಚಾಲಯದ ಅವ್ಯವಸ್ಥೆಯ ಚಿತ್ರದೊಂದಿಗೆ ಪೊನ್ನಣ್ಣನವರ ಭಾವಚಿತ್ರ ಅಳವಡಿಸಿ ಆ ಗ್ರೂಪಿನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದನ್ನು ಗಮನಿಸಿದ ಕಾಂಗ್ರೆಸ್ ಪಕ್ಷದ ಪ್ರಮುಖರು ಪೊಲೀಸರಿಗೆ ದೂರು ನೀಡಿ ಇನ್ನೊಬ್ಬರು ಅಡ್ಮಿನ್ ಸೇರಿದಂತೆ, ಪೋಸ್ಟ್ ಮಾಡಿದ ವ್ಯಕ್ತಿಯನ್ನು ಹಾಗೂ ಇಬ್ಬರು ಅಡ್ಮಿನ್ ಗಳ ವಿರುದ್ಧ ದೂರು ದಾಖಲಪಡಿಸಲಾಯಿತು. ನಂತರ ಇವರುಗಳು ನಿರೀಕ್ಷಣ ಜಾಮೀನು ಪಡೆದುಕೊಂಡಿದ್ದರು. ಆದರೂ ಕೂಡ ಈಗಲೂ ಹಲವು ಗ್ರೂಪ್ ಗಳಲ್ಲಿ ಮತ್ತು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋಗಳನ್ನು ಹಾಕಿದ ಕಿಡಿಗೇಡಿಗಳು, ಮತ್ತು ಇವರ ವಿರುದ್ಧ ಕೆಟ್ಟ ಅಭಿಪ್ರಾಯ ಬರುವ ರೀತಿಯಲ್ಲಿ ಪೋಸ್ಟ್ಗಳು ಬರುತ್ತಿದ್ದು, ಇದರಿಂದ ಅವಮಾನ ಹಾಗೂ ಸ್ನೇಹಿತರು ಕುಟುಂಬಸ್ಥರು ಎಲ್ಲರಿಂದ ದೂರ ವಾಗಲು ಕಾರಣವಾದ್ದರಿಂದ ಮಾನಸಿಕವಾಗಿ ಬಳಲಿದ ವಿನಯ್, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪ್ರಕಟಿಸಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತನ್ನ ಪತ್ರದಲ್ಲಿ ತನಗಾದ ನೋವಿಗೆ ಕಾರಣರಾದ ಅವರ ಹೆಸರನ್ನು ಉಲ್ಲೇಖಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕೊಡಗಿನಲ್ಲಿ ಇನ್ನು ಮುಂದೆ ಯಾರಿಗೂ ಕೂಡ ನನಗಾದ ಅನ್ಯಾಯ ಆಗಬಾರದು ಎಂದು ವಿನಂತಿಸಿಕೊಂಡಿದ್ದಾನೆ.
ಡೆತ್ ನೋಟ್ ವಿವರ…
ಎಲ್ಲರಿಗೂ ನನ್ನ ಕೊನೆಯ ನಮಸ್ತೆ,.
ನಾನು ವಿನಯ್ KS,
2 ತಿಂಗಳಿನಿಂದ ನನ್ನ ಮನಸ್ಸೇ ಹತೋಟಿಗೆ ಬರುತಿಲ್ಲ, ಯಾರೋ ಒಬ್ಬರು “ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು” whatsapp ಗ್ರೂಪ್ನಲ್ಲಿ ಹಾಕಿದ whatsapp ಮೆಸೇಜ್ ಗೆ ಅಡ್ಮಿನ್ನ ಆದ ನಮ್ಮನ್ನು ( ನನ್ನ ಅಡ್ಮಿನ್ ಮಾಡಿದ್ದು 5 ದಿನಗಳ ಹಿಂದೆ) ಹೊಣೆ ಮಾಡಿ, ರಾಜಕೀಯ ಪ್ರೇರಿತ FIR ಹಾಕಿ ಸಮಾಜಕ್ಕೆ ನಮ್ಮನ್ನು ಕಿಡಿಗೇಡಿಗಳು ಅಂತ ಪರಿಚಯಿಸಿ, ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದವರು ನನ್ನ ಸಾವಿಗೆ ನೇರ ಹೊಣೆ.
ನಮ್ಮ ಮೇಲೆ FIR ಹಾಕಿ ಕಿಡಿಗೇಡಿಗಳು ಅಂತ ಇಡೀ ಕೊಡಗಿಗೆ ವೈರಲ್ ಮಾಡಿದ್ದು ಕೂಡಾ ಒಬ್ಬ ವ್ಯಕ್ತಿ, ಅದು ಕೂಡಾ ನಮ್ಮ ಫೋಟೋ ಹಾಕಿ, ನಮ್ಮ ಫೋಟೋವನ್ನು ನಮ್ಮ ಪರ್ಮಿಷನ್ ಇಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹೇಗೆ ಉಪಯೋಗಿಸುತಾರೆ? ಅದು ಕೂಡಾ ಆರೋಪ ಸಬೀತು ಆಗದೇ, ಅದನ್ನು ನೋಡಿದ ನಮ್ಮ ಮನೆಯವರು ಹಾಗೂ ಸಂಬಧಿಕರಿಗೆ ಹೇಗೆ ಅನ್ನಿಸಿರಬಹುದು ಅಂತ ನೀವೇ ಊಹಿಸಿಕೊಳ್ಳಿ.
FIR ಆದ ದಿನದಿಂದ ಜಾಮೀನು ಸಿಗುವ ತನಕ ನಾನು ನನ್ನ ಅಮ್ಮನ ಜೊತೆ ನೇ ಮಾತಾಡಿಲ್ಲ.ಈ thenneera Maheena ನ ಕಾರಣಕ್ಕಾಗಿ ಜೀವ ಕಳೆದುಕೊಳ್ಳುತಿರುವ ವ್ಯಕ್ತಿ ನಾನು ಮೊದಲಿಗನಲ್ಲ.ಅವರನ್ನೇ ಕೇಳಿ, ಅವರ ಮಡದಿ ಆಸ್ಪತ್ರೆಗೆ ಸೇರಿದ ದಿನವೇ ಇನ್ನೊಂದು ಆತ್ಮಹತ್ಯೆ ನಡೆಯಿತು. ಆ ಆತ್ಮಹತ್ಯೆಗೂ maheena ಹಾಗೂ ಅವನ ಮಡದಿಗೆ ಏನು ಸಂಬಂಧ ಅಂತ,,, ಆ ಆತ್ಮಹತ್ಯೆಯ ತನಿಖೆ ಆಗಬೇಕು.
ಸಂಬಂಧ ಪಟ್ಟ ಅಧಿಕಾರಿಗಳು ಆ ಆತ್ಮಹತ್ಯೆಯ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಆಗಬೇಕು.ಆ ಗ್ರೂಪ್ನಲ್ಲಿ ಇರುವ ಯಾರನ್ನು ಬೇಕಾದರೂ ಕೇಳಿ, ನನ್ನ ಒಂದು ಮೆಸೇಜ್ ಕೂಡಾ ಯಾರ ತೇಜೋವಧೆ ಮಾಡುವ ಹಾಗೆ ಇರಲಿಲ್ಲ. ನಾವು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದಕ್ಕಾಗಿ ಕೆಲವು ರಾಜಕೀಯ ವಿರೋಧಿಗಳು ಷಡ್ಯಂತ್ರ ಮಾಡಿ ನನ್ನ ಮೇಲೆ FIR ಹಾಕಿದರು.
ನಂತರ ಜಾಮೀನು ಸಿಕ್ಕಿದ ನಂತರ ಕೂಡಾ ನನ್ನ cousin ಹಾಗೂ ಸ್ನೇಹಿತರಿಗೆ call ಮಾಡಿ, ಅವರ ಮನೆಗೆ ಪೊಲೀಸ್ ಹೋಗಿ ನನ್ನ ಅರೆಸ್ಟ್ ಮಾಡಲು ಹುಡುಕಾಟ ನಡೆಸಿದರು ಮಡಿಕೇರಿಯ ಪೊಲೀಸ್ ನವರು.ಶುಕ್ರವಾರ ಜಾಮೀನು ಸಿಕ್ಕಿದರು ಕೂಡಾ ಶನಿವಾರ ನನ್ನ ಸ್ನೇಹಿತನ ಮನೆಗೆ ಹೋಗಿ ನನ್ನ ಬಗ್ಗೆ ವಿಚಾರಿಸುವ ಅವಶ್ಯಕತೆ ಏನಿತ್ತು? ಇದೆಲ್ಲಾ ವಿರಾಜಪೇಟೆಯ MLA ಆದ ಪೊನ್ನಣ್ಣ ನ ಆದೇಶ ಅಂತ ಸ್ವಂತ ಮಡಿಕೇರಿಯ ಒಬ್ಬ ಪೊಲೀಸ್ ಪೇದೆ ಹೇಳಿದರು.
ನಂತರ ನನ್ನ ಸ್ನೇಹಿತನಿಗೆ MLA ಪೊನ್ನಣ್ಣ ವಿನಯ್ ಅನ್ನೋ ಒಬ್ಬ call ಮಾಡಿದ್ದ ನನಗೆ ಹಾಗೂ ಕೊಡವ ಹಾಗೂ ಗೌಡ conflict ಬಗ್ಗೆ ನನ್ನ ಜೊತೆ ಮಾತಾಡಿದ್ದು ಅಂತ ಸುಳ್ಳು ಆರೋಪ ಮಾಡಿದ್ದಾರೆ. ನಾನು call ಮಾಡಿದ್ದೇ ಆದಲ್ಲಿ call ರೆಕಾರ್ಡ್ ತೋರಿಸಲಿ.
ನಾನು ಮೆಸೇಜ್ ಮಾಡಿದ್ದು ನಿಜ, ಅದು ಕೂಡಾ ಯಾರೋ ಕಳಿಸಿದ ಆಕ್ಷೇಪರ್ಹ voice ಮೆಸೇಜ್ ಅವರಿಗೆ ಕಳಿಸಿ, ಅವರಿಗೆ ವಿಷಯ ತಿಳಿಸಿದ್ದು, ಅದರ screenshot ಕೂಡಾ ಕಳಿಸಿದ್ದೇನೆ.
ಆದರೆ ಅದರ ಬಗ್ಗೆ FIR ಮಾಡದೆ ಯಾರೋ ಹಾಕಿದ ಫೋಟೋ ಗೆ ನಮ್ಮ ಮೇಲೆ FIR ಹಾಕಿದ್ದು ಯಾವ ನ್ಯಾಯ??? ನಾನು ಕುಶಾಲನಗರದ gvt ಹಾಸ್ಪಿಟಲ್ ಬಗ್ಗೆ ಗ್ರೂಪ್ನಲ್ಲಿ ಕೇಳಿದಕ್ಕೆ ಮಡಿಕೇರಿಯ MLA ಮಂಥರ್ ಗೌಡ ನನಗೆ call ಮಾಡಿ ಹಾಗೆಲ್ಲ ಗ್ರೂಪ್ನಲ್ಲಿ ಯಾಕೆ ಮೆಸೇಜ್ ಹಾಕ್ತಿಯ ಅಂತ ಅವರೇ ನಂಗೆ ಗದರಿದ್ದಾರೆ.
ಏನಿದ್ರೂ ನನಗೆ ಹೇಳು, ಗ್ರೂಪ್ನಲ್ಲಿ ಹಾಕಿದ್ರೆ ಸರಿ ಇರಲ್ಲಾ ಅಂತ ನನಗೆ ಹೇಳಿದ್ದಾರೆ. ಪೂರಕ ಸಾಕ್ಷಿ whatsapp call ರಿಜಿಸ್ಟರ್ screenshot ಕಳಿಸಿದ್ದೇನೆ. ಅದರಲ್ಲಿ ನೀವೇ ನೋಡಿ ನಾನು ಅವರಿಗೆ call ಮಾಡಿದ್ದಾ ಅಥವಾ ಅವರು ನನಗೆ call ಮಾಡಿದ್ದಾ ಅಂತ.
ಬೇಕಾದರೆ ಅವರ whatsapp call ಚೆಕ್ ಮಾಡಿ.ನನ್ನ whatsapp call ರಿಜಿಸ್ಟರ್ ಲಿ ಕೂಡಾ ಇದೆ.ಅದಲ್ಲದೇ, ಹರೀಶ್ ಪೂವಯ್ಯ ( 9481068881) ಇವನು ಮಾರ್ಚ್ 11 ಕ್ಕೆ ಪೆರ್ಮೆರ ಕೊಡವ ಹಾಗೂ ನಂಗ ಕೊಡಗ್ ರ ಕೊಡವ ಮಕ್ಕಳ ಗ್ರೂಪ್ನಲ್ಲಿ ಪುನಃ ಪುನಃ ನಮ್ಮ ಫೋಟೋ ಹಾಕಿ ಕಿಡಿಗೇಡಿಗಳು ಅಂತ ನಮ್ಮ ತೇಜವಧೆ ಮಾಡುತಿದ್ದಾರೆ.
ಇದಕೆಲ್ಲ ಕಾರಣ Tenneera Maheena. ಅವನು ಬರೆದ ಆರ್ಟಿಕಲ್ ನ ಕೆಲವು ರಾಜಕೀಯ ಪ್ರೇರಿತ ಜನರು ಸೋಶಿಯಲ್ ಮೀಡಿಯಾ ಲಿ ಶೇರ್ ಮಾಡಿ ನಮ್ಮ ತೇಜೋ ವಧೆ ಮಾಡುತಿದ್ದಾರೆ. ಅದು ಕೂಡಾ ಜಾಮೀನು ಆಗಿ, FIR ಮೇಲೆಯೇ ಮಾನ್ಯ ಹೈ ಕೋರ್ಟ್ ಇಂದ ತಡೆ ಬಂದ ಮೇಲೆ ಕೂಡಾ ಇವರು ನಮ್ಮನ್ನು ಕಿಡಿಗೇಡಿಗಳು ಅಂತ ಕರೆಯೋದು ಎಷ್ಟು ಸರಿ. ಕೆಲವು ಮೂಲಗಳಿಂದ ತಿಳಿದ ವಿಷಯ ಏನೆಂದರೆ, ನಮ್ಮ ಮೇಲೆ ರೌಡಿ ಶೀಟರ್ open ಮಾಡುವ ಹುನ್ನಾರ ಕೂಡಾ ನಡೆದಿದೆ.
ಇವರಿಗೆಲ್ಲಾ ಸರಿಯಾದ ಶಿಕ್ಷೆ ಆಗಬೇಕು. ಆಗಲೇ ನನ್ನ ಸಾವಿಗೆ ನ್ಯಾಯ ದೊರಕುವುದು.
ಕರ್ನಾಟಕ BJP ಕುಟುಂಬಕ್ಕೆ ಹಾಗೂ ಕಾರ್ಯಕರ್ತರಲ್ಲಿ ನನ್ನ ಒಂದು ಬೇಡಿಕೆ,
ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ನನ್ನ ಕುಟುಂಬಕ್ಕೆ ನಿಮ್ಮ ಕೈಲಾದಷ್ಟು ಸಾಮಾಜಿಕವಾಗಿ, ಹಾಗೂ ಆರ್ಥಿಕವಾಗಿ ( ಪ್ರತೀ ಒಬ್ಬರು ಒಂದು ರೂಪಾಯಿ ಕೊಟ್ಟರೂ ಅದು ನನ್ನ ಮಡದಿಯ ಹಾಗೂ ಮಗಳ ಭವಿಷ್ಯಕ್ಕೆ ಸಹಾಯವಾಗುತ್ತೆ) ಸಹಾಯ ಮಾಡಿ ನನ್ನ ತಾಯಿ, ಮಡದಿ, ಮಗಳು ಹಾಗೂ ನಮ್ಮ ಕುಟುಂಬಕ್ಕೆ ನನ್ನ ಸಾವಿನ ಸಮಯದಲ್ಲಿ tourcher ಕೊಡದೆ ಎಲ್ಲಾ ಕಾರ್ಯ ಸುಸೂತ್ರವಾಗಿ ನಡೆಯಲು ಸಹಾಯ ಮಾಡಿ.
ಇದು ನನ್ನ ಕಳಕಳಿಯ ವಿನಂತಿ. ಯಾರೂ ಕೂಡಾ ನನ್ನ ಸಾವಿಗೆ ರಜೆ ಹಾಕಿ ದೂರದೂರಿಂದ ಬರುವ ಅವಶ್ಯಕತೆ ಇಲ್ಲಾ. ನೀವೆಲ್ಲಿದಿರೋ ಅಲ್ಲಿಂದಲೇ ನಮ್ಮ ಕುಟುಂಬಕ್ಕೆ ಆಶೀರ್ವದಿಸಿ.
ಚಲನ್ ಅಣ್ಣ, ವಿಷ್ಣು ಅಣ್ಣ, ಹಾಗೂ ಸಚಿನ್ ಅಣ್ಣ ನನ್ನ ಮನೆಯವರೊಂದಿಗೆ ನಿಂತು ಎಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಡಿ.
ನನ್ನ ಮೇಲೆ FIR ಹಾಕಿದಾಗ ನನ್ನ ಬೆಂಬಲಕ್ಕೆ ನಿತ್ತಂತಹ ಪ್ರತಾಪ್ ಸಿಂಹ, KG ಬೋಪಯ್ಯ, ಅಪ್ಪಚ್ಚು ರಂಜನ್, MP, ಚಲನ್, ಸಚಿನ್, ರಾಕೇಶ್ ದೇವಯ್ಯ, ಅಡ್ವೋಕೇಟ್ ನಿಶಾಂತ್, ಅಡ್ವೋಕೇಟ್ ಮೋಹನ್, ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು. 🙏🏻🙏🏻
ನನ್ನ ಸಾವು ಮುಂದೆ ಆಗುವ ರಾಜಕೀಯ ಪ್ರೇರಿತ FIR ಗೆ ಒಂದು ಪಾಠವಾಗಬೇಕು ಹಾಗೂ ಪೊಲೀಸ್ ನವರು ಸ್ವಲ್ಪ ವಿಚಾರ ಮಾಡಿ FIR ಹಾಕಬೇಕು. ಯಾರೋ ಒಬ್ಬರು ದೂರು ದಾಖಳಿಸಿದರು ಅಂತ ಸುಖಾ ಸುಮ್ಮನೆ FIR ಹಾಕುವುದು ಎಷ್ಟು ಸರಿ???
ಈ ಮೆಸೇಜ್ ಅನ್ನು ಎಲ್ಲಾ ಸಾಮಾಜಿಕ ಜಾಲತಣದಲ್ಲಿ ಹಾಕಿ. ಇದರಿಂದಾಗಿ ಅಮಾಯಕರ ಮೇಲೆ ರಾಜಕೀಯ ಪ್ರೇರಿತ FIR ಹಾಕುವುದು ಕೊನೆಗೊಳ್ಳಲಿ.
ನಾನು ನಮ್ಮ ಮನೆಯವರಿಗೆ ಏನೂ ಬರೆಯುತಿಲ್ಲ, ಯಾಕೆಂದರೆ ನನಗೆ ಅವರಿಗೆ ಏನು ಹೇಳುವುದೆಂದು ತಿಳಿಯುತಿಲ್ಲ.
ಎಲ್ಲರೂ ಯೋಚಿಸಬಹುದು ಘಟನೆ ಆಗಿ ಇಷ್ಟು ದಿನ ಆದ ಮೇಲೆ ಇವನಿಗೆ ಏನಾಯಿತು ಅಂತ, ನಾನು ಒಮ್ಮೆ ನನ್ನ ಮನೆಗೆ ಹೋಗಿ ಬರೋದನ್ನ ಕಾಯುತಿದ್ದೆ. ನನ್ನ ಮನೆಗೆ ಹೋಗಿ ಎಲ್ಲಾ ಕುಟುಂಬದವರ ಜೊತೆ ಕಳೆದ ಒಳ್ಳೆಯ ಸಮಯದ ನೆನಪಿನಲ್ಲಿ ನಾನು ವಿದಾಯ ಹೇಳುತಿದ್ದೇನೆ.
ಸಾಧ್ಯವಾದರೆ ಎಲ್ಲರೂ ನನ್ನನ್ನು ಕ್ಷಮಿಸಿಬಿಡಿ.
ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಹೋಗುತಿದ್ದೇನೆ.
ಇಂತಿ ನಿಮ್ಮ
VINAY KS