ಕೋಲಾರ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಎರಡು ದಿನಗಳ ಚುನಾವಣಾ ಸುಧಾರಣೆಯ ಕಾರ್ಯಾಗಾರದಲ್ಲಿ ಕೋಲಾರದ ಜಿಲ್ಲೆಯಿಂದ ಮಾಜಿ ಸಭಾಪತಿ ವಿ ಆರ್.ಸುದರ್ಶನ್ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಯು ಪಕ್ಷದ ಅಭ್ಯರ್ಥಿ ಕಲ್ಲಂಡೂರು ಡಾ ಕೆ.ನಾಗರಾಜ್ ಭಾಗವಹಿಸಿದ್ದರು
ಕಾರ್ಯಾಗಾರದಲ್ಲಿ ಮುಂಬರುವ ಚುನಾವಣೆಗಳು ಪಾರದರ್ಶಕತೆ, ಭ್ರಷ್ಟಾಚಾರ ರಹಿತ ಹಣ ಮತ್ತು ಹೆಂಡ ಹಂಚದೆ ಚುನಾವಣೆ ನಡೆಯಬೇಕು, ಕಡ್ಡಾಯ ಮತದಾನ, ಉತ್ತಮ ಶಿಕ್ಷಣ, ಆರೋಗ್ಯ, ಸಾವಯವ ಕೃಷಿ, ಪರಿಸರಕ್ಕೆ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು ಎಂದು ನಿರ್ಧರಿಸಲಾಯಿತು ಇದೇ ಸಂದರ್ಭದಲ್ಲಿ ಸರ್ವೋದಯ ( ಶಿಕ್ಷಣ,ಆರೋಗ್ಯ, ಕೃಷಿ, ಆಡಳಿತ, ಪರಿಸರ ) ಸಂಘಟನೆಯ ರೂಪುರೇಷೆಗಳ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಂಘಟನೆಗೆ ಒತ್ತು ನೀಡಲು ಕಾರ್ಯಾಗಾರದಲ್ಲಿ ತೀರ್ಮಾನಿಸಲಾಯಿತು.
ಕಾರ್ಯಾಗಾರದಲ್ಲಿ ಬಂದಿಮಟ್ಟಿ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಮಾಜಿ ಶಾಸಕ ಮಹಿಮ ಜೆ ಪಟೇಲ್, ಅಳಂದ ಶಾಸಕ ಬಿ.ಆರ್ ಪಾಟೀಲ್, ಹೊಸದುರ್ಗ ಶಾಸಕ ಗೋವಿಂದಪ್ಪ, ಮಾಜಿ ಸಭಾಪತಿ ಬಿ.ಎಲ್ ಶಂಕರ್, ಮಾಜಿ ಶಾಸಕರಾದ ಎ.ಟಿ ರಾಮಸ್ವಾಮಿ, ಮುಖ್ಯಮಂತ್ರಿ ಚಂದ್ರು, ವೈ.ಎಸ್.ವಿ ದತ್ತ, ಎಂಪಿ ನಾಡಗೌಡ, ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ, ಪಾಣಿ ಪಟೇಲ್, ತೇಜಸ್ವಿ ಪಟೇಲ್, ಬಿಜೆಪಿ ಮುಖಂಡರಾದ ಸಿಂಧೂರಮೇಶ್, ಬೈರೇಗೌಡ, ಅನೇಕ ರೈತ ಮುಖಂಡರು, ನಿವೃತ್ತ ನ್ಯಾಯಾಧೀಶರು, ವೈದ್ಯರು, ಶಿಕ್ಷಣ ತಜ್ಞರು, ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.