ವಿದ್ಯಾರ್ಜನೆಗಾಗಿ ಕಾದಿರುವ ಪುಟಾಣಿಗಳಿಗೆ ಶಾಲೆಯ ಬಾಗಿಲು ತೆಗೆದಿದೆ, ತೊದಲು ನುಡಿಯುತ್ತಿದ್ದ ಮಕ್ಕಳು ಅಕ್ಷರಗಳ ಉಚ್ಛಾರಣೆ, ಬರೆಯಲು ಪ್ರಾರಂಭಸಿದ್ದಾರೆ.
ನಗರದ ನ್ಯಾಷನಲ್ ಪ್ರೈಡ್ ಶಾಲೆಯ ಮೊದಲ ದಿನವಾದ ಇಂದು ಶಾಸ್ತ್ರಬದ್ದವಾಗಿಯೇ ಆರಂಭಿಸಲಾಗಿದೆ, ಶಾಸ್ತ್ರಿಗಳ ಸಮ್ಮುಖದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು, ಹಿಂದೂ,ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಕ್ಕಳು ಸಹ ಸಾಮೂಹಿಕ ಅಕ್ಷರಾಭ್ಯಾಸದಲ್ಲಿ ಭಾಗವಹಿಸುವ ಮೂಲಕ ಭಾವಕೈತೆ ಸಾರಿದರು.
ಜ್ಞಾನದ ದೇವತೆ ಸ್ವರತಿಯ ಅಶೀರ್ವಾದದೊಂದಿಗೆ ವಿದ್ಯೆ ಕಲಿಕೆಯನ್ನ ಆರಂಭಿಸುವ ಧಾರ್ಮಿಕ ಆಚರಣೆಯೇ ಅಕ್ಷರಾಭ್ಯಾಸ. ಸಾಮಾನ್ಯವಾಗಿ ಶೃಂಗೇರಿಯ ಶಾರದಾಂಬೆಯ ಸನ್ನಿಧಿಯಲ್ಲಿ ತಮ್ಮ ಮಕ್ಕಳ ಅಕ್ಷರಾಭ್ಯಾಸವನ್ನ ಮಾಡುತ್ತಾರೆ, ಈ ಪರಂಪರೆಯನ್ನೇ ಈ ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಅಕ್ಷರಾಭ್ಯಾಸವನ್ನ ಸಾಮೂಹಿಕವಾಗಿ ಮಾಡಲಾಗಿತು.
ಮಕ್ಕಳ ಜೊತೆ ಕುಳಿತ ಪೋಷಕರು ಸ್ಲೇಟ್ ನಲ್ಲಿ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು, ಮೊದಲ ಅಕ್ಷರವಾಗಿ ಮಕ್ಕಳು ಕನ್ನಡ ವರ್ಣಮಾಲೆಯ ಅ ಆ ಇ ಈ ನ್ನ ಸ್ಲೇಟ್ ನಲ್ಲಿ ಬರೆದು ಶಾಸ್ತ್ರೋಕ್ತವಾಗಿ ಮೊದಲ ದಿನ ಆರಂಭಿಸಿದರು.
ದೊಡ್ಡಬಳ್ಳಾಪುರ ನಗರದಲ್ಲಿ ಇದೇ ಮೊದಲ ಬಾರಿಗೆ ಅಕ್ಷರಾಭ್ಯಾಸ ಆಚರಣೆಯನ್ನ ಪ್ರಾರಂಭಿಸಲಾಗಿದೆ, ಈ ಕುರಿತು ಮಾತನಾಡಿದ ಶಾಲೆಯ ಕಾರ್ಯದರ್ಶಿಗಳಾದ ಸತೀಶ್, ನಮ್ಮದು ಸರ್ವ ಧರ್ಮ ಸಮನ್ವಯ ಶಾಲೆಯಾಗಿದೆ. ಇಲ್ಲಿ ಮುಸ್ಲಿಂ ಮಕ್ಕಳು ಶ್ಲೋಕವನ್ನ ಕಲಿತ್ತಾರೆ, ಹಿಂದೂ ಮಕ್ಕಳು ದುವಾ ಕಲಿತ್ತಾರೆ ಹಾಗೇಯೇ ಕ್ರಿಶ್ಚಿಯನ್ ಧರ್ಮದ ಬೈಬಲ್ ನಲ್ಲಿರುವ ಪ್ರಾರ್ಥನೆಯನ್ನು ಮಕ್ಕಳಿಗೆ ಹೇಳಿ ಕೊಡಲಾಗುತ್ತಿದೆ ಎಂದರು.
ಶಾಲೆಗೆ ಬಂದ ಮಕ್ಕಳು ಮೊದಲ ಬಾರಿಗೆ ತರಗತಿಯೊಳಗೆ ಹೆಜ್ಜೆ ಇಡುತ್ತಿದ್ದಾರೆ, ಈ ದಿನವನ್ನ ಪೋಷಕರಿಗೆ ಸದಾ ನೆನೆಪಿನ ದಿನವನ್ನಾಗಿ ಮಾಡಲು ನ್ಯಾಷನಲ್ ಪ್ರೈಡ್ ಶಾಲೆ ಮುಂದಾಗಿದೆ, ಮಕ್ಕಳು ತರಗತಿಯೊಳಗೆ ಇಡುತ್ತಿರುವ ಮೊದಲ ಹೆಜ್ಜೆಯ ಫೂಟ್ ಪ್ರಿಂಟ್ ತೆಗದುಕೊಂಡು ತರತಿಯಲ್ಲಿ ದಾಖಲು ಮಾಡಲಾಗುತ್ತಿದೆ, ಶಾಲೆಯ ಮೊದಲ ದಿನವಾದ ಇಂದು ಮಕ್ಕಳ ಜೊತೆಯಲ್ಲಿ ಬಂದ ಪೋಷಕರು ಅಕ್ಷರಭ್ಯಾಸದಲ್ಲಿ ಭಾಗಿಯಾಗಿದ್ದರ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.