ದೊಡ್ಡಬಳ್ಳಾಪುರ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಸಚಿವೆ ಲಕ್ಷೀ ಹೆಬ್ಬಾಳ್ಕರ್ ಮಾಡಿರುವ ಆರೋಪಕ್ಕೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜು ತಿರುಗೇಟು ಕೊಟ್ಟಿದ್ದಾರೆ.
ರವಿ ಅಣ್ಣ ಅಲ್ಲಿ ಆ ಮಾತು ಹೇಳಿದ್ದಾರೋ ಬಿಟ್ಟಿದ್ದಾರೋ ಅದನ್ನ ನ್ಯಾಯಾಂಗ ತನಿಖೆ ಮಾಡುತ್ತದೆ. ಅವರು ಅವಹೇಳನಕಾರಿ ಮಾತು ಆಡಿದ್ದರೆ ಅವರಿಗೆ ಶಿಕ್ಷೆ ಆಗುತ್ತದೆ. ಇಲ್ಲ ಸುಳ್ಳು ಆಪಾದನೆ ಮಾಡಿರೋದಿಕ್ಕೆ ಇವರಿಗೆ ಶಿಕ್ಷೆ ಆಗುತ್ತದೆ ಎಂದು ಹೇಳಿದರು.
ಒಂದು ಅವರ ಆರೋಪದ ಮಾತಿನಿಂದ ಅವರನ್ನ ಕಾನೂನಾತ್ಮಕವಾಗಿ ನಡೆಸಿಕೊಂಡರೇ..? ಅಲ್ಲಿ ಇದ್ದಂತಹ ಐಪಿಎಸ್ ಆಫಿಸರ್ ಗೆ ಗೊತ್ತಿಲ್ವಾ..? ಒಬ್ಬ ಎಂಎಲ್ಸಿನಾ ಜನ ಪ್ರತಿನಿಧಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಬೇಕು ಎಂದು..? ಏಕೆ ಅವರು ಬೆಳಗಾಂ ಕೋರ್ಟ್ ಗೆ ಕರೆದುಕೊಂಡು ಹೋದರು…? ಸಂಜೆ 5ರನಂತರ ಕೋರ್ಟ್ ಜಾಮೀನು ಕೊಡುದಿಲ್ಲ ಎಂದು ತೀರ್ಮಾನಿಸಿ ಮೂರು ದಿನ ಜೈಲಿನಲ್ಲಿ ಕೂರಿಸಿಬಿಡೋಣ ಎಂದು, ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ, ಬೆಳಗಾವಿ ಸುತ್ತಾಮುತ್ತಾ ಸುಮಾರು 12ತಾಸು 480ಕಿಮೀ ಸುತ್ತಿ ಸಮಯ ವ್ಯರ್ಥ ಮಾಡಿದ್ದಾರೆ.. ಇದಕ್ಕೆ ಜನ ಹಾಗೂ ಬಿಜೆಪಿ ಕಾರ್ಯಕರ್ತರ ಆಕ್ರೋಶವ್ಯಕ್ತಪಡಿಸಲಾಗುತ್ತಿದೆ. ಘಟನೆಯನ್ನು ಕಾಂಗ್ರೆಸ್ ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ನವರು ದ್ವೇಷದ ರಾಜಕಾರಣ ಪ್ರಾರಂಭ ಮಾಡಿದ್ದಾರೆ. ನಾನೊಬ್ಬ ಶಾಸಕ ನನ್ನ ಮೇಲೆ ಏಳು ಕೇಸ್ ಹಾಕ್ತಿರಾ. ಕಾಂಗ್ರೆಸ್ ನಾ ಎಂಎಲ್ಎ ಮಗ ಯುವ ಘಟಕದ ಅಧ್ಯಕ್ಷ ಅವನೊಬ್ಬ ರೌಡಿ ಶೀಟರ್ ಅವರ ಮೇಲೆ ಯಾವದೇ ಕೇಸ್ ಬೀಳೋದಿಲ್ಲ ಏಕೆ…? ಈ ಎಲ್ಲಾ ಬೆಳವಣಿಗೆಗಳನ್ನು ಜನ ಸೂಕ್ಷ್ಮವಾಗಿ ಗಮನ ಹರಿಸುತ್ತಿದ್ದಾರೆ. ಇದಕ್ಕೆಲ್ಲಾ ಜನ ತಕ್ಕ ಪಾಠ ಕಲಿಸುತ್ತಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ ಮಾಡಬಾರದೇ, ಪಿಎಸ್ಐ ಹಾಗೂ ಕೆಪಿಎಸ್ಸಿ ಪರೀಕ್ಷೆ ಒಂದೇ ದಿನ ನಡೆಸಿದರೆ ಉದ್ಯೋಗ ಆಕಾಂಕ್ಷಿಗಳಿಗೆ ತೊಂದರೆ ಆಗೋದಿಲ್ಲವೇ ಇದರ ವಿರುದ್ಧ ಪ್ರತಿಭಟನೆ ಮಾಡಬಾರದೇ ಇದಕ್ಕೆ ನಮ್ಮ ಮೇಲೆ ಕೇಸ್ ಹಾಕ್ತೀರಾ ಎಂದು ಪ್ರಶ್ನೆ ಮಾಡಿದರು.
ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಬೇಕೆ ಹೊರೆತು ಅಧಿಕಾರಕ್ಕಾಗಿ ದ್ವೇಷದ ರಾಜಕಾರಣ ಮಾಡಬಾರದು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಿದ್ಧಾಂತವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಎಲ್ಲರೂ ಕಲಿಯಬೇಕು ಎಂದು ಹೇಳಿದರು.
ಅಧಿಕಾರವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಬಹುದು ಎಂದು ನನಗೆ ಅಂದರೆ 32 ವರ್ಷದ ಯುವ ಶಾಸಕನಾದ ನನಗೆ ಕಾಂಗ್ರೆಸ್ ಕಲಿಸಿಕೊಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.