ರಾಯಚೂರು ಜಿಲ್ಲೆ ಮಾನ್ವಿ ತಾ. ಗೋರ್ಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಮಾಟಮಂತ್ರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಾಲೆಯ ತರಗತಿಗಳ ಕೋಣೆ, ಸಿಬ್ಬಂದಿ ಕೋಣೆ ಹಾಗೂ ಕಾರ್ಯಾಲಯಕ್ಕೆ ಮಾಟಮಂತ್ರ ಮಾಡಲಾಗಿದೆ.
ತೆಂಗಿನಕಾಯಿ, ನಿಂಬೆಹಣ್ಣು ಹಾಗೂ ಕುಂಕುಮ ಹಾಕಿ ಬಾಗಿಲು ಬೀಗಕ್ಕೆ ಪೂಜೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ..
ಶಾಲೆಗೆ ಮಾಟ ಮಂತ್ರ ಮಾಡಿರುವುದನ್ನು ಕಂಡ ಶಿಕ್ಷಕರು ಮತ್ತು ಮಕ್ಕಳು ಭಯಗೊಂಡು ತರಗತಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ..
ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಾಟಮಂತ್ರಕ್ಕೆ ಬಳಸಿದ ತೆಂಗಿನಕಾಯಿ, ನಿಂಬೆಹಣ್ಣು ತೆಗೆದು ಹಾಕಿ ಮಕ್ಕಳು ಮತ್ತು ಶಿಕ್ಷಕರಿಗೆ ಧೈರ್ಯ ತುಂಬಿದ್ದಾರೆ.
ಶಾಲೆಗೆ ಮಾಟಮಂತ್ರ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.