ದೊಡ್ಡಬಳ್ಳಾಪುರ : ಆಶ್ರಯ ಯೋಜನೆಯಡಿಯಲ್ಲಿ ಗ್ರಾಮದ ಬಡ ಕುಟುಂಬಗಳಿಗೆ ನಿವೇಶನ ಕಲ್ಪಿಸುವ ಸಲುವಾಗಿ ರಾಮಯ್ಯನ ಪಾಳ್ಯದ ಸರ್ಕಾರಿ ಜಾಗದ ಸರ್ವೇ ಕಾರ್ಯವನ್ನು ಅಧಿಕಾರಿಗಳು ನಡೆಸಿದರು.
ಸ್ಥಳೀಯ ಗ್ರಾಮಸ್ಥರು ಹಾಗೂ ವಕೀಲರಾದ ಚಂದ್ರಶೇಖರ್ ಮಾತನಾಡಿ, ತಾಲ್ಲೂಕಿನ ರಾಮಯ್ಯನ ಪಾಳ್ಯದ (ದಿನ್ನೆ )ಬಳಿ ಸರ್ವೇ ನಂ 22 ರ ಸರ್ಕಾರಿ ಗೋಮಾಳ ಜಾಗ ಕುರಿತಂತೆ ಸರ್ವೇ ಮಾಡಿ ನಮ್ಮ ಗ್ರಾಮದ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಹಾಗೂ ಪಂಗಡ ಸೇರಿದಂತೆ ಹಿಂದುಳಿದ ವರ್ಗದ ಹಲವು ಕುಟುಂಬಗಳು ನಿವೇಶನ ರಹಿತರಾಗಿದ್ದು, ಸ್ಥಳೀಯ ಬಡ ಕುಟುಂಬಗಳಿಗೆ ನಿವೇಶನ ಕಲ್ಪಿಸುವಂತೆ ಕೋರಿ ಹಲವು ಬಾರಿ ಸರ್ಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಪಂಚಾಯಿತಿ ಮಟ್ಟದ ಅಧಿಕಾರಿಗಳು ತಾಲೂಕಿನ ದಂಡಾಧಿಕಾರಿಗಳಿಗೆ ಸರ್ಕಾರಿ ಸರ್ವೇ ಮಾಡಿಸುವಂತೆ ಕೋರಿದ್ದು , ಅಂತೆಯೇ ಇಂದು ತಾಲೂಕು ಆಡಳಿತ ವತಿಯಿಂದ ನಮ್ಮ ರಾಮಾಯಣ ಪಾಳ್ಯ ಗ್ರಾಮದ ದಿಣ್ಣೆಯ ಬಳಿ ಸರ್ವೆ ನಡೆಯುತ್ತಿದೆ,
ಸ್ಥಳೀಯವಾಗಿ ಭೂಮಿಯ ಬೇರೆ ಹೆಚ್ಚಾಗಿದ್ದು , ಇದನ್ನು ಅರಿತ ಕೆಲವು ಭೂಗಳ್ಳರು ಸರ್ಕಾರಿ ಗೋಮಾಳ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸುವ ಮೂಲಕ ಮಾರಾಟಕ್ಕೆ ಮುಂದಾಗಿದ್ದಾರೆ ,ಸ್ಥಳೀಯ ಗ್ರಾಮಸ್ಥರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ಹಾಗೂ ಭೂಗಳ್ಳರ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಈ ಸರ್ಕಾರಿ ಸರ್ವೆ ನಡೆಯುತ್ತಿದ್ದು , ಅಧಿಕಾರಿಗಳು ತ್ವರಿತಗತಿಯಲ್ಲಿ ಸರ್ಕಾರಿ ಜಾಗದ ಸರ್ವೆ ವರದಿ ಸಲ್ಲಿಸುವ ಮೂಲಕ ಸ್ಥಳೀಯ ಕುಟುಂಬಗಳಿಗೆ ನಿವೇಶನ ಕಲ್ಪಿಸಬೇಕೆಂದು ಮನವಿ ಮಾಡಿದರು.
ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯ ರಘು ಕುಮಾರ್ ಮಾತನಾಡಿ ಸ್ಥಳೀಯ ನಿವಾಸಿಗಳಿಗೆ ನಿವೇಶನ ಕಲ್ಪಿಸುವಂತೆ ಕೋರಿ ಹಲವು ಬಾರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ, ಇತ್ತೀಚಿನ ದಿನಗಳಲ್ಲಿ ಸ್ಥಳೀಯವಾಗಿ ಭೂಮಿ(ಜಮೀನು ) ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು ಇದನ್ನು ಅರಿತ ಕೆಲವರು ಸರ್ಕಾರಿ ಗೋಮಾಳ ಜಾಗಕ್ಕೆ ನಕಲಿ ದಾಖಲಾತಿ ಸೃಷ್ಟಿಸಿಕೊಂಡು ಮಾರಾಟ ಮಾಡಲು ಮುಂದಾಗಿದ್ದಾರೆ , ಸರ್ಕಾರಿ ಜಾಗವನ್ನು ಆಶ್ರಯ ಯೋಜನೆ ಅಡಿ ಸ್ಥಳೀಯ ಕುಟುಂಬಗಳಿಗೆ ಹಂಚಿಕೆ ಮಾಡುವ ನಿಟ್ಟಿನಲ್ಲಿ ಈ ಸರ್ವೇ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವಕೀಲ ಚಂದ್ರಶೇಖರ್, ಸದಸ್ಯರು ರಘುಕುಮಾರ್, ಮಣಿ ಜಿ ಗೋವಿಂದರಾಜು, ನಾರಾಯಣಪ್ಪ, ನಾಗೇಶ್, ನಾಗರಾಜು, ಮುರುಗೇಶ್, ಗಂಗಾಧರ್ ಗ್ರಾಮಲೆಕ್ಕಾಧಿಕಾರಿ ಗುರುಪ್ರಸಾದ್, ಸರ್ವೇಯರ್ ಪ್ರಕಾಶ್ ರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.