ಸರ್ಕಾರದ ನೀತಿ ನಿಯಮಗಳನ್ನು ಮೀರಿ ಶುಲ್ಕ ವಸೂಲಿ:ಖಾಸಗಿ ಶಾಲೆಗಳ ಧನದಾಹಕ್ಕೆ ಕಡಿವಾಣ ಹಾಕಿ:ಕರವೇ ಕನ್ನಡಿಗರ ಬಣ ಅಧ್ಯಕ್ಷ ಚಂದ್ರಶೇಖರ್

ನಗರ ಮತ್ತು ತಾಲ್ಲೂಕಿನಾದ್ಯಂತ ಕೆಲವು ಖಾಸಗಿ ಶಾಲೆಗಳು ಪೋಷಕರಿಂದ ಹೆಚ್ಚಿನ ಶುಲ್ಕ ಪಡೆಯುತ್ತಿದ್ದಾರೆ. ಆದರೂ ಅಧಿಕಾರಿಗಳ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಖಾಸಗಿ ಶಾಲೆಯ ಶುಲ್ಕವನ್ನು ನಿಯಂತ್ರಿಸುವ ಅಧಿಕಾರ ಇಲ್ಲವಾದಲ್ಲಿ ಲಿಖಿತ ರೂಪದಲ್ಲಿ ನೀಡಿ ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಚಂದ್ರಶೇಖರ್.

ತಾಲ್ಲೂಕಿನ ಹಲವು ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಮಾಡಿ ಎಗ್ಗಿಲ್ಲದಂತೆ ವಸೂಲಿ ಮಾಡುತ್ತಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಡಿಡಿಪಿಐ ಶ್ರೀಕಂಠಯ್ಯ ಹಾಗೂ ಬಿಇಒ ರಂಗಪ್ಪ ಅವರೊಂದಿಗೆ ಕರವೇ ಕನ್ನಡಿಗರ ಬಣದ ವತಿಯಿಂದ ನಗರದ ಸರ್ಕಾರಿ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಖಾಸಗಿ ಶಾಲೆಗಳಲ್ಲಿ ಸರಕಾರದ ಮಾನದಂಡಗಳು ಅನುಸರಿಸಲಾಗುತ್ತಿದ್ದೇಯೆ? ಕೆಲ ಖಾಸಗಿ‌ ಶಾಲೆಗಳಲ್ಲಿ ಕ್ರೀಡಾಂಗಣ ಇಲ್ಲ‌. ಮಕ್ಕಳನ್ನು ಕ್ರೀಡಾಂಗಣಕ್ಕೆ ಬೇರೆಡೆಗೆ ಕರೆದೊಯ್ಯುವ ಅವಶ್ಯಕತೆ ಇದೆ. ಕೆಲವು ಶಾಲೆಗಳು ಎಲ್ ಕೆಜಿಗೆ ಒಟ್ಟಿಗೆ ದುಡ್ಡುಕೊಟ್ಟರೆ ಎಸ್ಸೆಸ್ಸೆಲ್ಸಿ ವರೆಗೂ ಕಲಿಯಬಹುದು ಎಂದು ಹೇಳುತ್ತವೆ. ಆದರೆ ಮಧ್ಯದಲ್ಲಿ ಮಕ್ಕಳಿಗೆ ತೊಂದರೆಯಾದರೆ ಯಾರು ಹೊಣೆ. ಸದ್ಯ ಶಾಲೆಗಳಲ್ಲಿ ಸಮಸ್ಯೆಗಳ ಬಗ್ಗೆ ನಮಗೆ ತಿಳಿಯುವ ಮಾಹಿತಿ ಇಲಾಖೆಗೆ ಸಿಗುತ್ತಿಲ್ಲ ಯಾಕೆ. ಅಧಿಕಾರಿಗಳು
ಹೆಸರು ಉಳಿಯುವಂತ ಕೆಲಸ ಮಾಡಬೇಕು. ಆದಷ್ಟು ಬೇಗ ಈ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ‌ಕ್ರಮವಹಿಸಬೇಕು‌ ಎಂದರು.

ಡಿಡಿಪಿಐ ಶ್ರೀಕಂಠಯ್ಯ ಮಾತನಾಡಿ, ಸರ್ಕಾರದ ಮಾನದಂಡಗಳನ್ನು ‌ಪಾಲಿಸದ ಶಾಲೆಗಳ ಬಗ್ಗೆ ಕ್ರಮವಹಿಸಲಾಗುತ್ತದೆ. ಮಾನದಂಡವಿಲ್ಲದೆ
ಹಿಂದೆ ಅರಂಭವಾದ ಶಾಲೆಗಳ ಬಗ್ಗೆ ತಕ್ಷಣ ಮುಚ್ಚಲು ಸಾಧ್ಯವಿಲ್ಲ. ಅದಕ್ಕಾಗಿ ಆ ಶಾಲೆಗಳಿಗೆ ಸಭೆ ಕರೆದು ಸೂಚನೆ ನೀಡಲಾಗುತ್ತದೆ.

4 ತಾಲೂಕುಗಳ ಬಿಇಒಗಳ ಸಭೆ ನಡೆಸಲಾಗುತ್ತದೆ. ಇದರ ಬಗ್ಗೆ ಕ್ರಮವಹಿಸಲು ಸೂಚಿಸಲಾಗುತ್ತದೆ ಎಂದರು.

ಬಿಇಒ ರಂಗಪ್ಪ ‌ಮಾತನಾಡಿ,
ಶಾಲೆಗಳಲ್ಲಿ ಇಷ್ಟೆ ಶುಲ್ಕ ಪಡೆಯಬೇಕು ಎಂದು ಸರ್ಕಾರದ ಯಾವುದೇ ಮಾನದಂಡವಿಲ್ಲ. ‌ಶಾಲೆಗಳು ಹೆಚ್ಚಿನ ಶುಲ್ಕ ಪಡೆಯುವ ಮಾಹಿತಿ ಬಂದರೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತದೆ.
ನಿಯಮಾನುಸಾರ ‌ಇಲ್ಲದ ಶಾಲೆಗಳ ಸಭೆ ಕರೆದು ಅವರಿಗೆ ನೋಟಿಸ್ ನೀಡಿ ಕ್ರಮವಹಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮವಹಿಸಲಾಗುತ್ತದೆ ಎಂದರು.

ಈ ವೇಳೆ ಕನ್ನಡಿಗರ ಕರವೇ ರಾಜ್ಯ ಕಾರ್ಯದರ್ಶಿ ಆರ್ ರಮೇಶ್, ರಾಜ್ಯ ಖಜಾಂಚಿ ಚೇತನ್ ಗೌಡ, ತಾಲೂಕು ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ, ಕಾರ್ಮಿಕರ ಘಟಕದ ಮುಖಂಡರು ಹಾಜರಿದ್ದರು.

Ramesh Babu

Journalist

Recent Posts

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ: ಅ.21 ರಿಂದ ಅ.23 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2026ರ ಸಂಬಂಧ ಅಕ್ಟೋಬರ್ 23 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ…

2 hours ago

ಸಮಾಜಸೇವೆ ಮೂಲಕ ಹುಟ್ಟುಹಬ್ಬ ಆಚರಣೆ ಎಲ್ಲರಿಗೂ ಮಾದರಿ: ಸಂಜೀವ್ ನಾಯಕ್

ದೊಡ್ಡಬಳ್ಳಾಪುರ: ಅದ್ದೂರಿ ಆಚರಣೆಗಳಿಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸುವುದು ಇತರರಿಗೂ ಮಾದರಿಯಾಗಲಿದೆ ಎಂದು ಕನ್ನಡ ಪಕ್ಷದ ರಾಜ್ಯ…

3 hours ago

ನಾಡಕಚೇರಿ, ಕಾವೇರಿ ತಂತ್ರಾಂಶಕ್ಕೆ ತಾಂತ್ರಿಕ ಗ್ರಹಣ! ಸರ್ವರ್ ಸಮಸ್ಯೆಯಿಂದ ಸರ್ಕಾರಿ ಸೇವೆಗಳಿಗೆ ಬ್ರೇಕ್‌; ಕಚೇರಿಗಳಿಗೆ ಅಲೆದು ಹೈರಾಣಾದ ಜನರು

ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ, ತ್ವರಿತವಾಗಿ ತಲುಪಿಸಬೇಕೆಂಬ ಉದ್ದೇಶದಿಂದ ಜಾರಿಗೆ ತಂದಿರುವ ಡಿಜಿಟಲ್ ವ್ಯವಸ್ಥೆಗಳೇ ಇದೀಗ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿವೆ.…

4 hours ago

ದೊಡ್ಡಬಳ್ಳಾಪುರದಲ್ಲಿ 4 ಲಕ್ಷ ಮೌಲ್ಯದ ಗಾಂಜಾ ವಶ: ಆರೋಪಿ ಬಂಧನ

ದೊಡ್ಡಬಳ್ಳಾಪುರ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ,…

6 hours ago

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

9 hours ago

ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ: ಎಚ್.ಡಿ.ಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ

ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ…

21 hours ago