ಲಕ್ನೊ : ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದ ಭಾರತ ಹಾಗೂ ಪಂದ್ಯ ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳವ ತವಕದಲ್ಲಿದ್ದ ನ್ಯೂಜಿಲೆಂಡ್ ಎರಡೂ ತಂಡಗಳು ಬೌಲಿಂಗ್ ಸ್ನೇಹಿ ಪಿಚ್ ನಲ್ಲಿ ತೀವ್ರ ಹೋರಾಟ ನಡೆಸಿದರೂ ಸಹ ಕೊನೆಗೆ ವಿಜಯಲಕ್ಷ್ಮಿ ಭಾರತಕ್ಕೆ ಒಲಿಯುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಿತು.
ಲಕ್ನೊ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಎದುರಾಳಿ ತಂಡಕ್ಕೆ ಬೌಲಿಂಗ್ ಗೆ ಆಹ್ವಾನಿಸಿತು, ಬೌಲಿಂಗ್ ಸ್ನೇಹಿ ಪಿಚ್ ಲಾಭ ಪಡೆದ ಭಾರತ ಎದುರಾಳಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಆರಂಭಿಕ ಆಟಗಾರರಾದ ಫಿನ್ ಅಲೆನ್ (11), ಕಾನ್ವೆ (11) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು, ನಂತರ ಬಂದ ಚಾಂಪೆನ್, ಫಿಲಿಪ್ಸ್, ಬ್ರೆಸ್ವೆಲ್ ಹಾಗೂ ಮಿಚೆಲ್ ಪ್ರತಿರೋಧ ತೋರಲಿಲ್ಲ, ನಾಯಕ ಸ್ಯಾಂಟ್ನರ್ (19) ತಂಡದ ಪರವಾಗಿ ಅತಿ ಹೆಚ್ಚು ರನ್ ಗಳಿಸಿ ತಂಡದ ಮೊತ್ತವನ್ನು 99 ಕ್ಕೆ ತಲುಪಿಸುವ ಮೂಲಕ ಎದುರಾಳಿಗಳಿಗೆ ಸವಾಲೆಸೆದರು.
ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೂ ಸ್ಪಿನ್ನರ್ ಗಳು ಕಾಟ ಕೊಟ್ಟರು, ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (11), ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (19) ರನ್ ಗಳಿಸಿದರೆ ನಂತರ ಬಂದ ತ್ರಿಪಾಠಿ (13) ರನ್ ಗಳಿಸಿದರೆ, ವಾಶಿಂಗ್ಟನ್ ಸುಂದರ್ (10) ರನ್ ಗಳಿಸಿ ನಿರಾಸೆ ಮೂಡಿಸಿದರು.
ನಂತರ ಜೊತೆಯಾದ ಹಾರ್ದಿಕ್ ಪಾಂಡ್ಯ (15) ಹಾಗೂ ಸೂರ್ಯ ಕುಮಾರ್ ಯಾದವ್ (26)ರನ್ ಉತ್ತಮ ಜೊತೆಯಾಟದಿಂದಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು, ನ್ಯೂಜಿಲೆಂಡ್ ಪರವಾಗಿ ಮಿಚೆಲ್ ಬ್ರೆಸ್ವೆಲ್ ಹಾಗೂ ಈಶ್ ಸೌಧಿ ತಲಾ ಒಂದು ವಿಕೆಟ್ ಪಡೆದುಕೊಂಡರು.
ಎರಡು ರನೌಟ್ ಮಾಡಿ ಭಾರತದ ಮೇಲೆ ಒತ್ತಡ ಹೇರಿ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ದು ಉತ್ತಮ ಪೈಪೋಟಿ ನೀಡಿದರು. ತಂಡವನ್ನು ಗೆಲುವಿನ ದಡ ಸೇರಿಸಿದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿ. ಶಾಂತಕುಮಾರ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಾಂಗ್ರೆಸ್…
ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ದರ್ಗಾಜೋಗಿಹಳ್ಳಿ ಸಮೀಪದ ಹೋಟೆಲ್ ನಲ್ಲಿ…
ಡಿಪಿಎಲ್ ಸೀಸನ್-1 ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ನ್ನು ಮೇ.9 ಮತ್ತು 10ರಂದು ಆಯೋಜನೆ ಮಾಡಲಾಗಿದೆ...…
ಭಾಷೆ, ಪ್ರಾದೇಶಿಕತೆ, ರಾಷ್ಟ್ರೀಯತೆ ಮತ್ತು ಧರ್ಮದ ಸಂಘರ್ಷ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಸ್ವಾರ್ಥದ ಅನುಕೂಲಕರ ರಾಜಕೀಯ..... ಕನ್ನಡ ತಾಯಿ…
ಇಂದು ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಅದೇರೀತಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ…
ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…