ಸರಣಿ ಸಮಬಲ ಸಾಧಿಸಿದ ಭಾರತ

ಲಕ್ನೊ : ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದ ಭಾರತ ಹಾಗೂ ಪಂದ್ಯ ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳವ ತವಕದಲ್ಲಿದ್ದ ನ್ಯೂಜಿಲೆಂಡ್ ಎರಡೂ ತಂಡಗಳು ಬೌಲಿಂಗ್ ಸ್ನೇಹಿ ಪಿಚ್ ನಲ್ಲಿ ತೀವ್ರ ಹೋರಾಟ ನಡೆಸಿದರೂ ಸಹ ಕೊನೆಗೆ ವಿಜಯಲಕ್ಷ್ಮಿ ಭಾರತಕ್ಕೆ ಒಲಿಯುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಿತು.

ಲಕ್ನೊ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಎದುರಾಳಿ ತಂಡಕ್ಕೆ ಬೌಲಿಂಗ್ ಗೆ ಆಹ್ವಾನಿಸಿತು, ಬೌಲಿಂಗ್ ಸ್ನೇಹಿ ಪಿಚ್ ಲಾಭ ಪಡೆದ ಭಾರತ ಎದುರಾಳಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಆರಂಭಿಕ ಆಟಗಾರರಾದ ಫಿನ್ ಅಲೆನ್ (11), ಕಾನ್ವೆ (11) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು, ನಂತರ ಬಂದ ಚಾಂಪೆನ್, ಫಿಲಿಪ್ಸ್, ಬ್ರೆಸ್ವೆಲ್ ಹಾಗೂ ಮಿಚೆಲ್ ಪ್ರತಿರೋಧ ತೋರಲಿಲ್ಲ, ನಾಯಕ ಸ್ಯಾಂಟ್ನರ್ (19) ತಂಡದ ಪರವಾಗಿ ಅತಿ ಹೆಚ್ಚು ರನ್ ಗಳಿಸಿ ತಂಡದ ಮೊತ್ತವನ್ನು 99 ಕ್ಕೆ ತಲುಪಿಸುವ ಮೂಲಕ ಎದುರಾಳಿಗಳಿಗೆ ಸವಾಲೆಸೆದರು.

ಭಾರತದ ಪರವಾಗಿ ಉತ್ತಮ ಬೌಲಿಂಗ್ ಮಾಡಿದ ಅಶ೯ದೀಪ್ ಸಿಂಗ್ ಎರಡು ವಿಕೆಟ್, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಚಹಲ್, ವಾಶಿಂಗ್ಟನ್ ಸುಂದರ್, ದೀಪಕ್ ಹೂಡಾ ತಲಾ ಒಂದು ವಿಕೆಟ್ ಪಡೆದುಕೊಂಡರು.

ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೂ ಸ್ಪಿನ್ನರ್ ಗಳು ಕಾಟ ಕೊಟ್ಟರು, ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (11), ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (19) ರನ್ ಗಳಿಸಿದರೆ ನಂತರ ಬಂದ ತ್ರಿಪಾಠಿ (13) ರನ್ ಗಳಿಸಿದರೆ, ವಾಶಿಂಗ್ಟನ್ ಸುಂದರ್ (10) ರನ್ ಗಳಿಸಿ ನಿರಾಸೆ ಮೂಡಿಸಿದರು.

ನಂತರ ಜೊತೆಯಾದ ಹಾರ್ದಿಕ್ ಪಾಂಡ್ಯ (15) ಹಾಗೂ ಸೂರ್ಯ ಕುಮಾರ್ ಯಾದವ್ (26)ರನ್ ಉತ್ತಮ ಜೊತೆಯಾಟದಿಂದಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು, ನ್ಯೂಜಿಲೆಂಡ್ ಪರವಾಗಿ ಮಿಚೆಲ್ ಬ್ರೆಸ್ವೆಲ್ ಹಾಗೂ ಈಶ್ ಸೌಧಿ ತಲಾ ಒಂದು ವಿಕೆಟ್ ಪಡೆದುಕೊಂಡರು.

ಎರಡು ರನೌಟ್ ಮಾಡಿ ಭಾರತದ ಮೇಲೆ ಒತ್ತಡ ಹೇರಿ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ದು ಉತ್ತಮ ಪೈಪೋಟಿ ನೀಡಿದರು. ತಂಡವನ್ನು ಗೆಲುವಿನ ದಡ ಸೇರಿಸಿದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *