ಸಮುದಾಯ ಸಂಘಟನೆಯಿಂದ ಸೌಹಾರ್ದ ಸಂಕ್ರಾಂತಿ ಆಚರಣೆ

ಕೋಲಾರ: ನಗರದ ಗಾಂಧಿವನದಲ್ಲಿ ಸೋಮವಾರ ಸಮುದಾಯ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು ಬೆಲ್ಲವನ್ನು ಪರಸ್ಪರ ಹಂಚಿ ತಿನ್ನುವ ಮೂಲಕ ಸೌಹಾರ್ದ ಸಂಕ್ರಾಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಕೆ.ಎಸ್ ಗಣೇಶ್ ಮಾತನಾಡಿ ದೇಶದಲ್ಲಿ ಸೌಹಾರ್ದ, ಸಮೃದ್ದಿ, ಸಾಮರಸ್ಯಕ್ಕೆ ಕೋಮುವಾದವು ಅಡ್ಡಿಯಾಗಿದೆ ಕೋಮುವಾದದಿಂದ ಜಾತ್ಯಾತೀತವಾದಕ್ಕೆ ದೇಶವನ್ನು ತರಬೇಕಾಗಿದೆ ಸೌಹಾರ್ದತೆಯಿಂದ ಎಲ್ಲರ ಮನಸ್ಸನ್ನು ಗೆಲ್ಲಬೇಕು ಈ ಆಚರಣೆ ಬರಿ ಹಬ್ಬಕ್ಕೆ ಮಾತ್ರವೇ ಸೀಮಿತಗೊಳಿಸದೇ ಪ್ರತಿಯೊಂದು ವಿಚಾರದಲ್ಲೂ ಸೌಹಾರ್ದತೆಯನ್ನು ಸಾರುವ ಆಚರಣೆಗಳ ಮೂಲಕ ನಿಜವಾದ ಭಾರತವನ್ನು ಸೌಹಾರ್ದ ಕಾರ್ಯಕ್ರಮಗಳಿಂದ ಹೊಸತನವನ್ನು ಕಟ್ಟಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜೆಎಂಎಸ್ ಮುಖಂಡರಾದ ವಿ.ಗೀತಾ ಮಾತನಾಡಿ ಭಾರತ ದೇಶವು ವಿವಿಧತೆಯನ್ನು ಹೊಂದಿದ್ದು ವಿಭಿನ್ನ ನಡೆ.ಭಾಷೆ, ಧರ್ಮ, ಜಾತಿಗಳ ಮೂಲಕ ಹೋಗುತ್ತಾ ಇದ್ದರು ಇತ್ತೀಚೆಗೆ ಕೆಲವರು ಒಂದು ಧರ್ಮಕ್ಕೆ ಸೀಮಿತಗೊಳಿಸಲು ಹೊರಟಿದ್ದಾರೆ ಸೌಹಾರ್ದ ನಾಡಿನಲ್ಲಿ ಮೂಲಭೂತವಾದವನ್ನು ಹಿಮ್ಮೆಟ್ಟಿಸಬೇಕು ಹಳೆ ಮತದ ಕೊಳೆಯನ್ನು ತೊಡೆಯಬೇಕು. ಸ್ವಾರ್ಥ, ದ್ವೇಷದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಜಾತಿ, ಧರ್ಮ, ಲಿಂಗ ಎಲ್ಲಾ ರೀತಿಯ ಭೇದವನ್ನು ಮೀರಿ ನಾವು ಮನುಜ ಮತ ವಿಶ್ವಪಥದತ್ತ ಹೋಗಲು ಇಂತಹ ಸೌಹಾರ್ದತೆಯ ಸಣ್ಣ ಸಣ್ಣ ಕಾರ್ಯಕ್ರಮವೇ ಸೌಹಾರ್ದ ಭಾರತ ಕಟ್ಟಲು ದಾರಿ ಎಂದರು.

ದೇಶದಲ್ಲಿ ಅಯೋಧ್ಯೆಯ ರಾಮಮಂದಿರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಾ ಇದ್ದು ನಮ್ಮನ್ನು ಆಳುವ ಸರಕಾರ ಮಂದಿರಕ್ಕಿಂತ ಉದ್ಯೋಗ ಶಿಕ್ಷದ ಬಗ್ಗೆ ಅಲೋಚಿಸಬೇಕಾಗಿದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯಗಳನ್ನು ಜಾರಿ ಮಾಡಬೇಕು ಹೊರತು ಒಂದು ಧರ್ಮ ಜಾತಿಗೆ ದೇಶವನ್ನು ಸೀಮಿತಗೊಳಿಸಬಾರದು ಸೌಹಾರ್ದತೆಗಾಗಿ ಜ.30 ರಂದು ದೇಶಾದ್ಯಂತ ಮಾನವ ಸರಪಳಿ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಲಾಗುತ್ತಿತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರು ಭಾಗವಹಿಸುವಂತೆ ಮನವಿ ಮಾಡಿದರು

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಅಬ್ಬಣಿ ಶಿವಪ್ಪ, ವಿಜಯಕೃಷ್ಣ, ಗಾಂಧಿನಗರ ಸುಬ್ರಮಣಿ, ಕೆ.ವಿ ಮಂಜುನಾಥ್, ಭೀಮರಾಜ್, ಸಲ್ಲಾವುದ್ದೀನ್ ಬಾಬು, ಅಪ್ರೋಜ್ ಪಾಷ, ಎಂ.ವಿ ನಾರಾಯಣಸ್ವಾಮಿ, ಕೊಂಡರಾಜನಹಳ್ಳಿ ಮಂಜುಳ, ಮಹಮ್ಮದ್ ಮುಸ್ತಫಾ, ಆನಂದ್ ಕುಮಾರ್, ಸತೀಶ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *