
ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ದಾಖಲಾತಿ ಶುಲ್ಕವನ್ನು. ಹಿಂತಿರುಗಿಸಿಲು ಶುಕ್ರವಾರ ಭಾರತ ವಿಧ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಸಂಘಟನೆಯಿಂದ ಕುಲ ಸಚಿವರಾದ ಕುಮುದ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಅಂಬ್ಲಿಕಲ್ ಶಿವಪ್ಪ ಮಾತನಾಡಿ ಸಮಾಜ ಕಾರ್ಯ ವಿಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದ್ವಿತೀಯ ವರ್ಷದ ವಿದ್ಯಾರ್ಥಿಗಳ 2022ನೇ ಸಾಲಿನಲ್ಲಿ ಬೆಂಗಳೂರು ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ದಾಖಲಾತಿ ಸಂದರ್ಭದಲ್ಲಿ ದಾಖಲಾತಿಗಾಗಿ ಸಿಬ್ಬಂದಿ ವರ್ಗದವರು ಸರಕಾರ ನಿಗಧಿ ಪಡಿಸಿದ 330 ರೂಗಳನ್ನು ಪಾವತಿಸಿಕೊಂಡಿದ್ದಾರೆ ಸರ್ಕಾರದಿಂದ ವಿದ್ಯಾರ್ಥಿ ವೇತನ ಬಂದ ಮೇಲೆ ನೀವು ದಾಖಲಾತಿ ಶುಲ್ಕವನ್ನು ಪಾವತಿಸಬೇಕೆಂದು ಮೌಖಿಕ ಮಾಹಿತಿ ನೀಡಿದ್ದರು ಅದರಂತೆ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದಲ್ಲಿ 13,367 ರೂಗಳು ಹಾಗೆಯೇ ದ್ವಿತೀಯ ವರ್ಷದಲ್ಲಿ 12641 ರೂಗಳು ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿ ವೇತನವಾಗಿ ಜಮೆಯಾಗಿದೆ ಆದರೆ ಕಲಿತಾ ಶುಲ್ಕ ಪಾವತಿಸುವಂತೆ ಒತ್ತಾಯ ಮಾಡತ್ತಾ ಇದ್ದಾರೆ ಎಂದು ಆರೋಪಿಸಿದರು,
ವಿಭಾಗದ ಸಂಯೋಜಕರು ಹಾಗೂ ಅಧ್ಯಾಪಕರು ತರಗತಿಯಲ್ಲಿ ಹಣ ಪಾವತಿಸುವ ವಿಚಾರವಾಗಿ ಚರ್ಚಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಗ್ರಾಮೀಣ ಕಲಿಕಾ ಶಿಬಿರದ ಹಣ ಪ್ರಥಮ ವರ್ಷ 4500 ರೂಗಳು ಹಾಗೂ ಬುಡಕಟ್ಟು ಭೇಟಿಯ ದ್ವೀತಿಯ ವರ್ಷ 4500 ರೂಗಳನ್ನು ಮತ್ತು ದಾಖಲಾತಿಯ ಸಮಯದಲ್ಲಿ ಪಾವತಿಸಿದ ಮೊದಲನೇ ವರ್ಷದ ಪ್ರವೇಶ ಶುಲ್ಕ 330 ಮತ್ತು ಎರಡನೇ ವರ್ಷದ ಪ್ರವೇಶ ಶುಲ್ಕ 330 ರೂಗಳು ಮತ್ತು ವಿದ್ಯಾರ್ಥಿ ಗುರುತಿನ ಚೀಟಿ 121 ರೂಗಳನ್ನು ಒಟ್ಟು ಸೇರಿ ಎರಡು ವರ್ಷಗಳಿಗೆ 9781 ಹಣವನ್ನು ವಿದ್ಯಾರ್ಥಿಗಳ ಕೈಯಿಂದ ಪಾವತಿ ಮಾಡಿಕೊಂಡಿವುದನ್ನು ಎಸ್ಎಫ್ಐ ವಿರೋಧ ಮಾಡುತ್ತದೆ ಎಂದರು
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ರವರಿಗೆ ಮೂರು ಬಾರಿ ಕಾಲೇಜಿನ ವಿದ್ಯಾರ್ಥಿಗಳು ಮನವಿ ಪತ್ರದೊಂದಿಗೆ ತಿಳಿಯ ಪಡಿಸಲಾಗಿದೆ ಅವರು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿ ಪೂರ್ಣ ದಾಖಲಾತಿ ಶುಲ್ಕವನ್ನು ಪಾವತಿಸಲು ತಿಳಿಸಿದ್ದರು ಈಗ ವಿದ್ಯಾರ್ಥಿಗಳಿಗೆ ಬಂದಿರುವ ವಿದ್ಯಾರ್ಥಿ ವೇತನದಲ್ಲಿ ಕಾಲೇಜಿನ ವೆಚ್ಚಗಳ ದಾಖಲಾತಿ ಶುಲ್ಕವನ್ನು ಪಾವತಿಸಲು ಸಾಧ್ಯವಾಗಲ್ಲ ಹಾಗಾಗಿ ತಾವುಗಳು ಈ 24 ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ದಾಖಲಾತಿ ಶುಲ್ಕವಾದ 26,008 ರೂಗಳಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಕ್ಕಾಗಿ ವೆಚ್ಚ ಮಾಡಿರುವ ಹಣ 9,781 ರೂಗಳನ್ನು ಹೊರತುಪಡಿಸಿ ಉಳಿದ ಮೊತ್ತವನ್ನು 16,227 ರೂ.ಗಳನ್ನು ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯಕ್ಕೆ ಪಾವತಿಸಿಕೊಂಡು ವಿದ್ಯಾರ್ಥಿಗಳ ನಾಲ್ಕು ಸೆಮಿಸ್ಟರ್ನ ಅಂಕಪಟ್ಟಿಗಳನ್ನು ನೀಡಿ ಅವರ ಮುಂದಿನ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳು ಭರತ್ ಕುಮಾರ್, ಎಸ್ ತಿಮ್ಮರಾಜು, ಆರ್,ಅಶೋಕ್ ಕುಮಾರ್, ಎಂ,ಪ್ರದೀಪ್ ಕುಮಾರ್, ವೈ ಕಾರ್ತಿಕ್, ಎಂ,ಸಂಧ್ಯಾಕ್ಷಯ, ಜೆ ಎಂ ಶಿರೀಷಾ, ಆರ್ ಸುಷ್ಮಾ, ಲಕ್ಕ್ಮೀ, ಎಸ್ ಎಂ ನಿರ್ಮಲ, ಮುಂತಾದವರು ಭಾಗವಹಿಸಿದ್ದರು,