ಸಮಸ್ಯೆಗೆ ಮೊದಲ ಆದ್ಯತೆ ನೀಡಿ: ಅಧಿಕಾರಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ತಾಕೀತು

ಕೋಲಾರ: ನಗರಸಭೆ ಸದಸ್ಯರು ನಗರದ ಜನತೆಯ ಆಶೀರ್ವಾದದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅವರನ್ನು ಗೌರವಯತವಾಗಿ ನಡೆದುಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಅದನ್ನು ಅರಿತು ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡುವಂತೆ ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ನಗರಸಭೆಯ ಆವರಣದಲ್ಲಿ
ಫಲಾನುಭವಿಗಳಿಗೆ ತ್ರಿಚಕ್ರವಾಹನ ವಿತರಿಸಿ ಮಾತನಾಡಿದ ಅವರು, ನಗರಸಭೆ ಸದಸ್ಯರ ಜವಾಬ್ದಾರಿ ಶಾಸಕರಿಗಿಂತ ಹೆಚ್ಚು ಇರುತ್ತದೆ. ಏನೇ ಸಮಸ್ಯೆ ಎದುರಾದರು ಜನ ಮೊದಲು ಸಂಪರ್ಕಿಸುವುದು ನಗರಸಭೆ ಸದಸ್ಯರನ್ನು. ಹೀಗಾಗಿ ಸಾರ್ವಜನಿಕರ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತಂದಾಗ ಅಧಿಕಾರಿಗಳು ಕಾಳಜಿಯಿಂದ ಬಗೆಹರಿಸಬೇಕು ಎಂದರು.

ಕೋಲಾರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ೧೫ನೇ ಹಣಕಾಸು ಯೋಜನೆಯಲ್ಲಿ ಸುಮಾರು 8.14 ಕೋಟಿ ಮಂಜೂರಾಗಿದ್ದು, ಕ್ರಿಯಾಯೋಜನೆ ತಯಾರಿಸಿ ಆದ್ಯತೆ ಮೇರೆಗೆ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ಸದಸ್ಯರು ಸಹಕಾರ ನೀಡಬೇಕು. ನಗರದಲ್ಲಿ ಸ್ವಚ್ಚತೆ ಸಮಸ್ಯೆಯಿದೆ ಏಪ್ರಿಲ್, ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿಗೆ ಮಳೆಯಾಗುವ ಸಾಧ್ಯತೆಯಿದೆ. ಕೋಲಾರ ನಗರಸಭೆ ಸದಸ್ಯರು, ಮುಳಬಾಗಿಲು ಸದಸ್ಯರಿಗಿಂತ 10 ಹೆಜ್ಜೆ ಮುಂದಿದ್ದು, ಉತ್ತಮ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ನಗರಸಭೆ ಎಂದರೆ ಸ್ವಚ್ಚಗೊಳಿಸುವುದು ಎಂದು ಅರ್ಥ. ಅದನ್ನು ಸಮರ್ಥಿಸಿಕೊಂಡು ಹೋಗುವುದು ಅಧಿಕಾರಿಗಳು ಮತ್ತು ಸದಸ್ಯರ ಕೆಲಸ. ಯಾವುದೇ ವಾರ್ಡಿನಲ್ಲಿ ಯುಜಿಡಿ, ನೀರು, ರಸ್ತೆ, ಚರಂಡಿ ಸಮಸ್ಯೆಯಿದ್ದರೆ ಪ್ರಮಾಣಿಕವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಪೌರಾಯುಕ್ತ ಶಿವಾನಂದ, ಸದಸ್ಯರಾದ ಅಂಬರೀಶ್, ಎಸ್.ಆರ್.ಮುರಳೀಗೌಡ, ರಾಕೇಶ್, ಷರೀಪ್, ಗುಣಶೇಖರ್ ಮುಂತಾದವರು ಇದ್ದರು

Leave a Reply

Your email address will not be published. Required fields are marked *