ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಾರ್ಕೆಟ್‌ಪಲ್ಲಿ ಮಂಡಲದಲ್ಲಿ ವಾರ್ಷಿಕ ಚೆರುವುಗಟ್ಟುಜಾತರ ಆಚರಣೆಯ ಅಂಗವಾಗಿ ಪೊಲೀಸ್ ಅಧಿಕಾರಿಗಳು ಅಗ್ನಿಕುಂಡದ ಮೇಲೆ ಬರಿಗಾಲಿನಲ್ಲಿ ನಡೆಯುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
“ಮೂಢನಂಬಿಕೆಗಳ” ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಮಾಡಲಾಗುತ್ತದೆ ಎಂದು ಕೆಲವರು ವರದಿ ಮಾಡಿದ್ದಾರೆ. ಆದರೆ ಅದಕ್ಕೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಮತ್ತು ಅಧಿಕೃತವಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ; ಇದು ಅವರ “ವೈಯಕ್ತಿಕ ವಿಷಯ” ಎಂದು ಸ್ಪಷ್ಟಪಡಿಸಲಾಗಿದೆ.
ಶ್ರೀ ಪಾರ್ವತಿ ಜಡಲ ರಾಮಲಿಂಗೇಶ್ವರ ಸ್ವಾಮಿ ಜಾತ್ರೆಯ ಸಂದರ್ಭದಲ್ಲಿ ಭಕ್ತರು ಕಲ್ಲಿದ್ದಲಿನ ಮೇಲೆ ನಡೆಯುವ ಆಚರಣೆಯೇ ಅಗ್ಗಿಗುಂಡಲು (ಬೆಂಕಿ ನಡಿಗೆ). ಇದರಲ್ಲಿ ಪೊಲೀಸ್ ಅಧಿಕಾರಿಗಳು ಸಮವಸ್ತ್ರದಲ್ಲಿ ಹೆಜ್ಜೆ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
ಚೆರುವುಗಟ್ಟು ಜಾತ್ರೆಗೆ ಫೈರ್ವಾಕಿಂಗ್ ಸಾವಿರಾರು ಭಕ್ತರನ್ನು ಸೆಳೆಯುತ್ತದೆ. ದೇವಾಲಯದ ಅರ್ಚಕರ ವೈದಿಕ ಸ್ತೋತ್ರ ಪಠಣಗಳ ನಡುವೆ ಬೆಟ್ಟದ ದೇಗುಲದಲ್ಲಿ ಮುಂಜಾನೆ ಧಾರ್ಮಿಕ ವಿಧಿವಿಧಾನಗಳು ಜರುಗಿದವು.