ಸಮಯಕ್ಕೆ ಸರಿಯಾಗಿ ಬಾರದ ಬಸ್ ಗಳು: ವಿದ್ಯಾರ್ಥಿಗಳು, ಸಾರ್ವಜನಿಕರ ಪರದಾಟ

ಇತ್ತೀಚೆಗೆ ನೆಲಮಂಗಲದಿಂದ ದೊಡ್ಡಬಳ್ಳಾಪುರ ಕಡೆಗೆ ಬರುವ ಬಸ್ ಗಳು ವಿಳಂಬ ಮಾಡುತ್ತಿದ್ದು, ಇದರಿಂದ ಮಧುರೆ ಹೋಬಳಿಯ ಸಾರ್ವಜನಿಕರು‌ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಕಾಡನೂರು ಕೈಮರದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದೂ ಸಹ ಸುಮಾರು ಎರಡು ಗಂಟೆ ಕಾದು ಕುಳಿತರು ಸಹ ಸೂಕ್ತ ಸಮಯಕ್ಕೆ ಬಸ್ ಗಳು ಬಂದಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ರೋಗಿಗಳು ಪರದಾಡಿದರು. ಸುಮಾರು ಎರಡು ಗಂಟೆಗಳು ಕಾಯುವಿಕೆ ನಂತರ ಒಂದು ಕೆಎಸ್ ಆರ್ ಟಿಸಿ ಬಂದರೂ ನಿಂತುಕೊಳ್ಳಲು ಜಾಗವಿಲ್ಲದೇ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಹೇಗೋ ಬಸ್ ಹಿಡಿದು ಹೋಗೋಣ ಎಂದರೆ ಜಾಗವಿಲ್ಲ. ಬಸ್ ಹತ್ತಲು ಹೋದಾಗ ಜಾರಿ ಬೀಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ ಎಂದು ವಿದ್ಯಾರ್ಥಿಯೊಬ್ಬ ತನ್ನ ಅಳಲು ತೋಡಿಕೊಂಡರು.

ಇನ್ನಾದರೂ ಸಮಯಕ್ಕೆ ಸರಿಯಾಗಿ ಬಸ್ ಗಳು ಬರುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದರು.

Ramesh Babu

Journalist

Recent Posts

ಮಳೆ, ಗಾಳಿ ಅವಾಂತರ: ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಕುಂಟನಹಳ್ಳಿ, ಹುಸ್ಕೂರು ದಾರಿ ಬಂದ್

ನಿನ್ನೆ ರಾತ್ರಿ ಸುರಿದ ಮಳೆ, ಭೀಕರ ಗಾಳಿ ಅವಾಂತರದಿಂದಾಗಿ ತಾಲೂಕಿನಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು, ಮರಗಳು, ಮನೆಗಳ ಮೇಲ್ಛಾವಣಿಗಳು,…

7 hours ago

ಆನ್‌ಲೈನ್ ಗೇಮ್ ನಿಷೇಧ: ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಜಾರಿ: ಕಾಯ್ದೆ ಉಲ್ಲಂಘಿಸಿದರೆ ಭಾರೀ ದಂಡ ಮತ್ತು ಕಠಿಣ ಶಿಕ್ಷೆ ನಿಗದಿ

ದೇಶದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಆನ್‌ ಲೈನ್ ಜೂಜಾಟ ಮತ್ತು ಹಣದ ಆಟಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸದಾಗಿ…

8 hours ago

ಹೊಸಕೋಟೆ ಹೊರವಲಯದ ನೂತನ ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ವ್ಹೀಲಿಂಗ್ ಹುಚ್ಚಾಟ: ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಖಾಕಿ ಪಾಠ

ಸಿಲಿಕಾನ್ ಸಿಟಿ ಹೊರವಲಯದಲ್ಲಿ ಯುವಕರಿಂದ ಡೆಡ್ಲಿ ವ್ಹೀಲಿಂಗ್ ನಡೆದಿದೆ.. ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಹೊಸಕೋಟೆ ಸಂಚಾರಿ ಪೊಲೀಸರು ಬಿಸಿ…

9 hours ago

ಬಿರುಗಾಳಿ ಸಹಿತ ಮಳೆ: ನೆಲ ಕಚ್ಚಿದ ಫಸಲಿಗೆ ಬಂದಿದ್ದ  ಬಾಳೆ ಬೆಳೆ: ಲಕ್ಷಾಂತರ ರೂ. ನಷ್ಟ: ಸಂಕಷ್ಟದಲ್ಲಿ ರೈತ

ರಾತ್ರಿ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿದ್ದು, ಇದರಿಂದ ಹಲವು ಕಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ…

12 hours ago

ಮಳೆ, ಗಾಳಿ ಅವಾಂತರ: ವಿದ್ಯುತ್ ತಂತಿ ಮೇಲೆ ಬಿದ್ದ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಭಾರೀ ಗಾತ್ರದ ಝಿಂಕ್ ಅಲ್ಯೂಮಿನಿಯಮ್ ಶೀಟ್‌: ರಸ್ತೆಗೆ ಅಡ್ಡಲಾಗಿ ಬಿದ್ದ 7 ವಿದ್ಯುತ್ ಕಂಬಗಳು

ನಿನ್ನೆ ರಾತ್ರಿ ಭಾರೀ ಗಾಳಿ, ಮಳೆಗೆ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಝಿಂಕ್ ಅಲ್ಯೂಮಿನಿಯಮ್ ಶೀಟ್‌ಗಳು ಹಾರಿ ವಿದ್ಯುತ್ ತಂತಿಗಳ ಮೇಲೆ…

12 hours ago

ಬಿರುಗಾಳಿ ಸಹಿತ ಜೋರು ಮಳೆ: ಧರೆಗುರುಳಿದ 2 ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ), 9 ವಿದ್ಯುತ್ ಕಂಬಗಳು: ತಪ್ಪಿದ ಭಾರೀ ಅನಾಹುತ

ಇಂದು ಸಂಜೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಭಾರೀ ಮಳೆ ಅವಾಂತರದಿಂದಾಗಿ ಕೆಲವೆಡೆ ಅನಾಹುತಗಳು ಸಂಭವಿಸಿವೆ... ದೊಡ್ಡಬಳ್ಳಾಪುರ ತಾಲೂಕಿನ…

23 hours ago