ಸಭೆಗಳಲ್ಲಿ ವೈಯಕ್ತಿಕ ವಿಚಾರಗಳು ಬಿಟ್ಟು ಅಭಿವೃದ್ಧಿಗೆ ಸಹಕಾರಿಸಲು ನಸೀರ್ ಅಹಮದ್ ಕಿವಿಮಾತು

ಕೋಲಾರ: ನಗರಸಭೆ ಸದಸ್ಯರು ಸಭೆಗಳಲ್ಲಿ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಅರೋಪ ಮತ್ತು ಪತ್ಯಾರೋಪ ಮಾಡೋದು ಬಿಟ್ಟು ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಸೀರ್ ಅಹಮದ್ ತಿಳಿಸಿದರು

ನಗರಸಭೆಯ ಸಭಾಂಗಣದಲ್ಲಿ ಶನಿವಾರ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ನಗರದ ಅಭಿವೃದ್ದಿ ವಿಚಾರವಾಗಿ ನಿಮ್ಮಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇರುತ್ತದೆ ನಮ್ಮಲ್ಲಿ ಎಷ್ಟೇ ವ್ಯತ್ಯಾಸಗಳು ಇದ್ದರೂ ಸರಿಪಡಿಸಿಕೊಂಡು ಹೋಗಬೇಕು ಎಲ್ಲರಿಗೂ ಮಾತಾಡುವ ಅವಕಾಶವಿರುತ್ತದೆ ಅವಕಾಶಕ್ಕೆ ಕಾಯಬೇಕು ಅದು ಬಿಟ್ಟು ಎಲ್ಲರೂ ಎದ್ದು ನಿಂತು ಏರುಧ್ವನಿಯಲ್ಲಿ ಮಾತಾಡಿ ಸಭೆಗೆ ಅಗೌರದ ತರುವ ನಿಟ್ಟಿನಲ್ಲಿ ನಡೆದುಕೊಳ್ಳಬಾರದು ಎಂದರು‌

ಸಭೆ ಪ್ರಾರಂಭವಾಗುತ್ತಿದ್ದಂತೆ ನಗರಸಭೆ ಸದಸ್ಯ ಮುಬಾರಖ್ ಮಾತನಾಡಿ ಕೋಲಾರ ನಗರಕ್ಕೆ ಕುಡಿಯುವ ನೀರಿಗಾಗಿ ಯರಗೋಳ್ ಯೋಜನೆಯಲ್ಲಿ ನಗರಸಭೆಯಿಂದ ನೂರಾರು ಅನುದಾನ ವಿನಿಯೋಗಿಸಿ ಕಾಮಗಾರಿಯನ್ನು ಅನುಷ್ಠಾನಕ್ಕೆ ತರಲಾಗಿದೆ ಓವರ್ ಟ್ಯಾಂಕ್ ನಿರ್ಮಾಣವಾಗಿ ಸಮರ್ಪಕ ಬಳಕೆಯಾಗುತ್ತಿಲ್ಲ ಹಣ ಮಾತ್ರ ವರ್ಷದಿಂದ ವರ್ಷಕ್ಕೆ ಟೆಂಡರ್ ಹಣ ಏರಿಕೆಯಾಗಿದೆ ಸಂಬಂದಪಟ್ಟ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆಯನ್ನು ಸಹ ಮಾಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ದ ಆರೋಪಿಸಿದರು

ಇದಕ್ಕೆ ಸಭೆಯಲ್ಲಿನ ಸದಸ್ಯರು ಧ್ವನಿಗೂಡಿಸಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಯರಗೋಳ್ ಯೋಜನೆಯ ಬಳಕೆ ನಿರ್ವಹಣೆ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲು ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್ಸಿಗಳು ತಿಳಿಸಿದರು

ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಜನನ ಮರಣ ಪ್ರಮಾಣ ಪತ್ರ ವಿರತರಣೆ ಮಾಡುತ್ತಿದ್ದ ಸಿಬ್ಬಂದಿಯು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ಧಾರೆ ಎಂದು ಲಿಖಿತ ರೂಪದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಸಲ್ಲಿಸಿದ್ದರು ಇದರನ್ವಯ ಅವರನ್ನು ಕೆಲಸದಿಂದ ತೆಗೆಯಲಾಗಿದೆ ಇದರಿಂದ ಜನನ ಮರಣ ಪ್ರಮಾಣ ಪತ್ರ ಸಮರ್ಪಕವಾಗಿ ಸಾರ್ವಜನಿಕರಿಗೆ ವಿತರಣೆಯಾಗದೆ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂದು ನಗರಸಭೆ ಸದಸ್ಯರು ಸಭೆಯಲ್ಲಿ ಆರೋಪಿಸಿದರು. ಕೂಡಲೇ ಆ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಪೌರಾಯುಕ್ತರಿಗೆ ಸೂಚಿಸಿದರು.

ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ವಿಷಯ ಪ್ರಸ್ಥಾಪಿಸಿದರು ಕೂಡಲೇ ಸದಸ್ಯ ರಾಕೇಶ್ ಮಾತನಾಡಿ ಮಹಾನಗರ ಪಾಲಿಕೆ ಮಾಡುವುದನ್ನು ನಾವು ಎಲ್ಲರೂ ಸ್ವಾಗತ ಮಾಡುತ್ತೇವೆ ಆದರೆ ಈಗಾಗಲೇ ನಗರಸಭೆ ವ್ಯಾಪ್ತಿಗೆ ಕೆಲವು ಹಳ್ಳಿಗಳನ್ನು ಸೇರಿಸಿಕೊಂಡು ವರ್ಷಗಳೇ ಕಳೆದಿದೆ ಆದರೆ ಅದನ್ನು ನಗರಸಭೆ ವಶದಲ್ಲಿ ದಾಖಲೆಗಳು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ ಮೊದಲು 5ಕೀ.ಮಿ ವ್ಯಾಪ್ತಿಗೆ ಒಳಪಟ್ಟಿರುವ ಪ್ರದೇಶದಲ್ಲಿರುವ ಎಲ್ಲಾ ಖಾತೆಗಳನ್ನು ಪಂಚಾಯಿತಿಯಿಂದ ನಗರಸಭೆ ವಶಕ್ಕೆ ಪಡೆದುಕೊಳ್ಳುವಂತೆ ಸೂಚಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಜಾಹೀರಾತು ನಾಮಫಲಕಗಳು ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೇ ತೆರಿಗೆಯನ್ನು ಪಾವತಿಸದೇ ಕಟ್ಟಲಾಗುತ್ತಿದೆ ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಬ್ಯಾನರ್ ಅಳವಡಿಕೆ ವಿಚಾರವಾಗಿ ಕಡ್ಡಾಯವಾಗಿ ನಗರಸಭೆಯಿಂದ ಅನುಮತಿ ಪಡೆದ ನಂತರ ಅಳವಡಿಸುವಂತೆ ಸೂಚಿಸಬೇಕು ಇದರಿಂದ ನಗರಸಭೆಗೆ ಆದಾಯ ಹೆಚ್ಚುತ್ತದೆ ಎಂದು ಸದಸ್ಯರು ಸಭೆಯಲ್ಲಿ ತಿಳಿಸಿದರು

ಇದಕ್ಕೆ ಪೌರಾಯುಕ್ತ ಪ್ರಸಾದ್ ಮಾತನಾಡಿ ಕೆಲವರು ಅನುಮತಿ ಪಡೆದಿದ್ದಾರೆ ಜನಪ್ರತಿನಿಧಿಗಳು ಒತ್ತಡ ತರದೇ ಹೋದರೆ ನಿಮಯಗಳ ಪ್ರಕಾರ ಜಾಹೀರಾತು ಅಳವಡಿಸಲು ಕ್ರಮ ವಹಿಸಲಾಗುತ್ತದೆ ಎಂದರು

ಆಶ್ರಯ ಯೋಜನೆಯಲ್ಲಿ 100 ಎಕರೆ ಜಮೀನನ್ನು ಗುರುತಿಸಿ ೧೫ ಸಾವಿರ ನಿವೇಶನ ರಹಿತ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಆಗ ಮಾತ್ರ ಜನಪ್ರತಿನಿಧಿಯಾಗಿ ಆಯ್ಕೆ ಯಾಗದ್ದಕ್ಕೂ ಸಾರ್ಥವಾಗುತ್ತದೆ ಎಂದಾಗ ಕೂಡಲೇ ಆ ಬಗ್ಗೆ ಗಮನ ಹರಿಸುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ಉತ್ತರಿಸಿದರು.

ಪೌರಾಯುಕ್ತ ಪ್ರಸಾದ್ ಗೆ ಶಾಸಕ ಕೊತ್ತೂರು ವಾರ್ನಿಂಗ್.
ನಗರಸಭೆಯ ಸಾಮಾನ್ಯ ಸಭೆ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಒಳಗಡೆ ಬಂದರೆ ಹೇಗೆ ಸಭೆ ನಡೆಯುತ್ತದೆ ಸಭೆ ನಡೆಯುವಾಗ ಸದಸ್ಯರು ಜನಪ್ರತಿನಿಧಿಗಳು ಅಧಿಕಾರಿಗಳು ಸಿಬ್ಬಂದಿ ಅಷ್ಟೇ ಇರಬೇಕು ಎಂದು ಎಷ್ಟು ಬಾರಿ ಹೇಳಿದರೂ ನೀವು‌ಕೇಳಲ್ಲ ಇದು ನಿಮಗೆ ಕೊನೆ ವಾರ್ನಿಂಗ್ ಮುಂದಿನ‌ ಸಭೆಗಳಲ್ಲಿ ಇದು ಮುಂದುವರೆಯಬಾರದು.

ನಗರಸಭೆ ಸ್ಥಾಯಿ ಸಮಿತಿ ರಚನೆ ವಿಷಯವಾಗಿ ಬಾರಿ ಗದ್ದಲ ಉಂಟಾಗಿತ್ತು ಅವಿರೋಧವಾಗಿ ಸ್ಥಾಯಿ ಸಮಿತಿ ರಚನೆಗೆ ಸಹಮತ ಸಿಗದ ಹಿನ್ನೆಲೆ ಚುನಾವಣೆ ಮೂಲಕ ರಚನೆಗೆ ಮುಂದಾಗಬೇಕಾಯಿತು ಸಭೆಯಲ್ಲಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಮುಂದಿನ ಸಭೆಯಲ್ಲಿ ಸ್ಥಾಯಿ ಸಮಿತಿ ವಿಷಯ ನಡೆಸೋಣ ಎಂದಾಗ ಹಾಗ ಮಧ್ಯೆ ಪ್ರವೇಶಿಸಿದ ಸದಸ್ಯರು ಬಹುಮತದ ಆಧಾರದಲ್ಲಿ ಸಭೆಯ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು ಕ್ರಮೇಣ ನಸೀರ್ ಅಹಮದ್, ಕೊತ್ತೂರು ಮಂಜುನಾಥ್, ಅನಿಲ್ ಕುಮಾರ್, ನಿಯಮಾನುಸಾರ ಪ್ರಕಾರ ಆಯ್ಕೆ ಮಾಡಿಕೊಳ್ಳಲಿ ಎಂದು ಸಭೆಯಿಂದ ಹೊರನಡೆದರು ಕ್ರಮೇಣ ಸಂಜೆ ಚುನಾವಣಗೆ ಪೌರಾಯುಕ್ತ ಪ್ರಸಾದ್ ಕ್ರಮ ಕೈಗೊಳ್ಳಲಾಯಿತು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಗೀತ ಜಗದೀಶ್, ಎಂಎಲ್ಸಿ ಅನೀಲ್ ಕುಮಾರ್, ಪೌರಾಯುಕ್ತ ಪ್ರಸಾದ್ ಸೇರಿದಂತೆ ನಗರಸಭೆ ಸದಸ್ಯರು ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!