ಕೋಲ್ಕತ್ತ : ಹನ್ನೆರಡು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ ಐಪಿಎಲ್ ಸೀಸನ್ ನ ಮೊದಲ ಶತಕ ಬಾರಿಸಿದ ಹೈದರಾಬಾದ್ ಸನ್ ರೈಸರ್ಸ್ ತಂಡದ ಹ್ಯಾರಿ ಬ್ರೂಕ್ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ತಂದು ಕೊಟ್ಟರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ (9) ಬೇಗನೆ ವಿಕೆಟ್ ಒಪ್ಪಿಸಿದರು, ನಂತರ ಬಂದ ತ್ರಿಪಾಠಿ (9) ಬೇಗನೆ ಪೆವಿಲಿಯನ್ ಸೇರಿದರು.
ಆರಂಭಿಕ ಆಟಗಾರನಾಗಿ ಬಂದಿದ್ದ ಹ್ಯಾರಿ ಬ್ರೂಕ್ (100) ಶತಕ ಬಾರಿಸುವ ಮೂಲಕ ತಂಡದ ಮೊತ್ತವನ್ನು 228 ರನ್ ಗಳಿಸಲು ನೆರವಾದರು, ನಾಯಕ ಮಾಕ್ರಮ್ (50), ಅಭಿಷೇಕ್ ಶರ್ಮಾ (32) ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.
ಬೃಹತ್ ಮೊತ್ತ ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ಆರಂಭಿಕ ಆಘಾತ ಅನುಭವಿಸಿತು, ಭರವಸೆಯ ಆಟಗಾರ ಗುಬಾ೯ಜ್ (0) ಭುವನೇಶ್ವರ್ ಅವರಿಗೆ ವಿಕೆಟ್ ಒಪ್ಪಿಸಿದರು, ಎನ್ ಜಗದೀಶನ್ (36) ರನ್ ಗಳಿಸಿದರೆ ವೆಂಕಟೇಶ್ ಅಯ್ಯರ್ (10), ಸುನೀಲ್ ನರೇನಾ (0), ಪೆವಿಲಿಯನ್ ಸೇರಿದರು.
ನಾಯಕ ನಿತೀಶ್ ರಾಣ ಐದು ಬೌಂಡರಿ ಹಾಗೂ ಆರು ಸಿಕ್ಸರ್ ಸಿಡಿಸುವ ಮೂಲಕ (75) ರನ್ ಹಾಗೂ ಕಳೆದ ಪಂದ್ಯದ ಹೀರೋ ರಿಂಕೂ ಸಿಂಗ್ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ (58) ರನ್ ಗಳಿಸಿ ಗೆಲುವಿನ ಸನಿಹ ಬಂದರೂ ಸಹ ಗೆಲ್ಲಲು ಸಾಧ್ಯವಾಗಲಿಲ್ಲ, ಹೈದರಾಬಾದ್ ಸನ್ ರೈಸರ್ಸ್ 23 ರನ್ ಗೆಲುವು ಸಾಧಿಸಿದರು.
ಸನ್ ರೈಸರ್ಸ್ ತಂಡದ ಪರವಾಗಿ ಜಾನಿಸ್ ಹಾಗೂ ಮಾಕ೯ಂಡೇಯಾ ತಲಾ ಎರಡು ವಿಕೆಟ್ ಪಡೆದರೆ ಭುವನೇಶ್ವರ್ ಕುಮಾರ್, ನಟರಾಜನ್ ಹಾಗೂ ಉಮ್ರಾನ್ ಮಲ್ಲಿಕ್ ತಲಾ ಒಂದು ವಿಕೆಟ್ ಪಡೆದುಕೊಂಡರು, ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಹ್ಯಾರಿ ಬ್ರೂಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.