ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದ ಸಚಿವ ಸಂಪುಟದಲ್ಲಿ ಮಂತ್ರಿ ಗಿರಿ ಪಡೆದ ನಂತರ ಟೆಂಪಲ್ ರನ್ ಶುರು ಮಾಡಿರುವ ಸಚಿವ ಡಾ.ಜಿ.ಪರಮೇಶ್ವರ್.
ಇಂದು ಸಂಜೆ ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ, ಅರ್ಚನೆ ಮಾಡಿಸಿ ದೇವರ ಕೃಪೆಗೆ ಪಾತ್ರರಾದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು,ಇಂದು ಎರಡನೇ ಹಂತದಲ್ಲಿ ಒಟ್ಟು 24 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇನ್ನೂ ಅಧಿಕೃತವಾಗಿ ಖಾತೆ ಹಂಚಿಕೆ ಮಾಡದ ಕಾಂಗ್ರೆಸ್, ಕೆಲವೇ ಕ್ಷಣಗಳಲ್ಲಿ ಖಾತೆ ಹಂಚಿಕೆ ಪಟ್ಟಿ ಹೊರಬೀಳಲಿದೆ. ಒಳ್ಳೆ ಖಾತೆ ಸಿಗಬೇಕೆಂದು ದೇವರ ಮೊರೆ ಹೋದ ಸಚಿವ ಡಾ.ಜಿ.ಪರಮೇಶ್ವರ್.
ಸಚಿವರಿಗೆ ಘಾಟಿ ಕ್ಷೇತ್ರದಲ್ಲಿ ಮದುವೆ ಆಮಂತ್ರಣ ಇದ್ದಿದ್ದರಿಂದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವ ವಧು-ವರರಿಗೆ ಆಶೀರ್ವದಿಸಿದ ನಂತರ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದಿದ್ದಾರೆ ಎನ್ನಲಾಗಿದೆ.