ಸಂವಿಧಾನ ರಕ್ಷಿಸುವ ಕಾಂಗ್ರೆಸ್ ಪಕ್ಷ ನಿಮ್ಮ ಆಯ್ಕೆಯಾಗಿರಲಿ: ಮಂಜುನಾಥ್ ಅದ್ದೆ

ದೊಡ್ಡಬಳ್ಳಾಪುರ: ತತ್ವ ಸಿದ್ದಾಂತದಲ್ಲಿ ಸಮಾನತೆ ಬಯಸುವ, ಸಂವಿಧಾನ ರಕ್ಷಣೆ ಮಾಡುವ ಕಾಂಗ್ರೆಸ್ ಪಕ್ಷವನ್ನು ಪ್ರತಿಯೊಬ್ಬರು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ತಾಲೂಕು ಉಸ್ತುವಾರಿ ಮಂಜುನಾಥ್ ಅದ್ದೆ ತಿಳಿಸಿದರು.

ಪಬ್ಲಿಕ್ ಮಿರ್ಚಿ ವೆಬ್ ನ್ಯೂಸ್ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಜನರನ್ನು ಬೆತ್ತಲೆಗೊಳಿಸಲಾಗುತ್ತಿದೆ, ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಿ ಆಡಳಿತ ಜಾರಿಗೆ ಬರಲಿದೆ. ಸಾಮಾನ್ಯ ಪ್ರಜೆಗಳಿಗೆ ಕೇವಲ ಚೀನಾ, ಪಾಕಿಸ್ತಾನ ಎಂದು ಹೇಳಿ ಮರಳು ಮಾಡಲಾಗುತ್ತಿದೆ, ಸರ್ಕಾರದ ವಿರುದ್ಧ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ, ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ಸಿಗೆ ಮತ ನೀಡಿ ಎಂದರು.

ವೈದಿಕ ಸಂಸ್ಕೃತಿಯ ಬಗ್ಗೆ ಹರಿಹಾಯ್ದ ಅವರು, ಮಹಿಳೆಯರನ್ನು ಕೇವಲ ಭೋಗದ ವಸ್ತುವನ್ನಾಗಿ ನೋಡಲಾಗುತ್ತಿದೆ, ದುಡಿಯುವ ವರ್ಗದ ಮನೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚು. ಸಾಂಸ್ಕೃತಿಕ ಹಾಗೂ ಸಾಮಾಜಿಕ ಭಾರ ಹೆಚ್ಚಾಗಿರುತ್ತವೆ. ಆದರೆ ವೈದಿಕ ಧರ್ಮದಲ್ಲಿ ಮಹಿಳೆಯರನ್ನು ತುಚ್ಛವಾಗಿ ನೋಡಲಾಗುತ್ತಿದೆ ಎಂದರು.

ಸಂಘ ಪರಿವಾರ ಈ ನೆಲದ ದ್ರೋಹಿ ಎಂದ ಅವರು, ಅನೇಕ ಸಂಸ್ಕ್ರತಿಗಳು ಸೇರಿ ಒಂದು ರಾಷ್ಟವಾಗಿದೆ. ಆದ್ದರಿಂದಲೇ ಗಣರಾಜ್ಯೋತ್ಸವವನ್ನು ಆಚರಿಸುವುದು, ಏಕ ಭಾರತ ಶ್ರೇಷ್ಠ ಭಾರತ ಎಂದು ಹೇಳುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ವೈದಿಕ ಸಂಸ್ಕೃತಿಯನ್ನು ಹೇರುವ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಮಾನತೆ ಸಾಧಿಸಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಇಪ್ಪತ್ತು ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದರು, ಏಕಸ್ವಾಮ್ಯ ಕೊನೆಗಾಣಿಸಿ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಜಾರಿಗೆ ತಂದರು, ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಹೂಡಿಕೆ ಹಿಂತೆಗೆತ ಮಾಡಲು ಪತ್ರಕರ್ತ ಅರುಣ್ ಶೌರಿ ಅವರನ್ನು ಸಚಿವರನ್ನಾಗಿ ನೇಮಕ ಮಾಡಿದ್ದು ದುರಾದೃಷ್ಟಕರ ಎಂದು ತಿಳಿಸಿದರು.

ಸಂವಿಧಾನವನ್ನು ಕಲ್ಯಾಣ ರಾಜ್ಯದ ಕನಸನ್ನು ಹೊತ್ತು ರಚಿಸಲಾಗಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರದಲ್ಲಿ ಹೂಡಿಕೆಯನ್ನು ಹಿಂತೆಗೆತಗೊಳ್ಳಲಾಯಿತು, ಜಿಎಸ್ ಟಿ ಹೇರಿಕೆ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಹಾಗೂ ಅನಿಲ ಬಾವಿಗಳನ್ನು ಅಂಬಾನಿಗೆ ಮಾರಿದ್ದು ಕೇಂದ್ರ ಸರ್ಕಾರದ ಸಾಧನೆಯಾಗಿದೆ. 2013 ರಲ್ಲಿ 480 ರೂಪಾಯಿ ಇದ್ದ ಸಿಲಿಂಡರ್ ಬೆಲೆ ಈಗ 1150 ರೂಪಾಯಿಯಾಗಿದ್ದು ಜನರ ಸಂಪತ್ತು ಬಂಡವಾಳಶಾಹಿಗಳಿಗೆ ತಲುಪುತ್ತಿದೆ, ಜನರ ದೃಷ್ಟಿಯಲ್ಲಿ ಹೇಡಿ ಸರ್ಕಾರವಾಗಿದೆ ಎಂದು ಹೇಳಿದರು.

ರಾಷ್ಟ್ರಗೀತೆಯನ್ನು ರಚಿಸಿದ್ದ ರವೀಂದ್ರನಾಥ್ ಟ್ಯಾಗೋರ್ ಅವರು ಅಂಗ, ವಂಗ, ಕಳಿಂಗ ಮುಂತಾದ ಪ್ರಾಂತ್ಯಗಳಿಂದ ಕೂಡಿದ್ದರೂ ಬಹುತ್ವದಲ್ಲಿ ಭಾರತವನ್ನು ಕಾಣಬೇಕು, ಏಕತೆಯನ್ನು ಸಾಧಿಸಬೇಕು, ಏಕತೆಯೇ ಭಾರತದ ಬಲ ಎಂದು ನಂಬಿದ್ದರು. ಆದರೆ ಗಣಕೂಟವನ್ನು ಭಂಜಿಸಬೇಕು ಎಂಬುದು ಬಿಜೆಪಿಯ ಅಜೆಂಡಾವಾಗಿದೆ ಎಂದು ತಿಳಿಸಿದರು.

ದೇಶದ ಶೇಕಡಾ 90 ರಷ್ಟು ಜನರನ್ನು ಮತ್ತೆ ಶೋಷಣೆಗೆ ಗುರಿ ಮಾಡಬೇಕು ಎಂಬುದು ಬಿಜೆಪಿಯ ಗುರಿಯಾಗಿದೆ, ಶೇಕಡಾ 10 ಮೀಸಲಾತಿ ಅಗತ್ಯವಿರಲಿಲ್ಲ, ರೈತರು, ಹಿಂದುಳಿದ ವರ್ಗಗಳು, ಮಹಿಳೆಯರು ಹಾಗೂ ಕುಶಲಕರ್ಮಿಗಳನ್ನು ಧಿಕ್ಕರಿಸಿದ್ದಾರೆ, ಸಂಸತ್ ನಲ್ಲಿ ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಬೇಕು ಎಂದಾಗ ವಿರೋಧಿಸಿದ್ದು ಇದೇ ಬಿಜೆಪಿಯ ಹಿರಿಯ ನಾಯಕರು ಎಂದರು.

ಬಹುತ್ವ ಭಾರತದ ಮೇಲೆ ಸದ್ದಿಲ್ಲದೆ ದಾಳಿ ನಡೆಯುವ ಕೆಲಸವಾಗುತ್ತಿದೆ, ಪಠ್ಯ ಪುಸ್ತಕ ರಚನಾ ಸಮಿತಿಗೆ ರೋಹಿತ್ ಚಕ್ರತೀರ್ಥರನ್ನು ನೇಮಕ ಮಾಡಿ ಕನ್ನಡದ ಆಸ್ಮಿತೆಯಾಗಿರುವ ಕನಕದಾಸರು, ಕುವೆಂಪು ಅವರ ಪಠ್ಯಗಳನ್ನು ಕೈಬಿಟ್ಟರು, ಬಸವಣ್ಣ ಹಾಗೂ ಅಕ್ಕಮಹಾದೇವಿ ಅವರ ವಚನಗಳನ್ನು ತಿರುಚುವ ಕೆಲಸ ಮಾಡಿದರು, ಅವರ ಬದಲಿಗೆ ಚಾಣಕ್ಯ ಹಾಗೂ ಸಾವರ್ಕರ್ ಅವರ ಪಠ್ಯ ಸೇರಿಸಲು ಮುಂದಾದರು. ಇದು ಆರ್ ಎಸ್ಎಸ್ ಸಿದ್ಧಾಂತವನ್ನು ಜಾರಿಗೊಳಿಸುವ ಹುನ್ನಾರ ಎಂದು ದೂರಿದರು.

1925 ರಲ್ಲಿ ಹುಟ್ಟಿಕೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಾತಿವ್ಯವಸ್ಥೆ ಹಾಗೂ ತಾರತಮ್ಯ ಹೆಚ್ಚಾಗಬೇಕು ಎಂದು ಬಯಸಿದ್ದಾರೆ ಆದರೆ ಎಲ್ಲರೂ ಸಮಾನರಾಗಿರಬೇಕು ಹಾಗೂ ಜಾತ್ಯತೀತ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ನಮ್ಮ ಸಂವಿಧಾನ ತಿಳಿಸುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Ramesh Babu

Journalist

Recent Posts

ಎಸ್ ಐ ಆರ್…..

ನಾವು ಅಕ್ರಮ ವಲಸಿಗರಲ್ಲ, ವಂಚಕರಲ್ಲ, ಈ ಮಣ್ಣಿನ ಮೂಲ ನಿವಾಸಿಗಳು. ದಯವಿಟ್ಟು ನಮ್ಮ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಪ್ರಶ್ನಿಸಬೇಡಿ. ನಾವು ಭಾರತೀಯರು......…

1 hour ago

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

13 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

17 hours ago

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

20 hours ago

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…

22 hours ago

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

1 day ago