ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಅದ್ಧೂರಿ ಸ್ವಾಗತ ಕೋರಿದ ಮಜರಾಹೊಸಹಳ್ಳಿ ಗ್ರಾಮಸ್ಥರು

ಸಂವಿಧಾನ ಜಾರಿಗೆ ಬಂದು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆ ಹಾಗೂ ಭಾತೃತ್ವ ಭಾವನೆಯನ್ನು  ಜನತೆಯಲ್ಲಿ ಮೂಡಿಸಲು ಹೊರಟಿರುವ ಸಂವಿಧಾನ ಜಾಗೃತಿ ಜಾಥಾವು ತಾಲೂಕಿನಲ್ಲಿ 7ನೇ ದಿನಕ್ಕೆ ಕಾಲಿಟ್ಟಿದ್ದು, ಜಾಗೃತಿ ರಥವು ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರದೇಶಗಳಲ್ಲಿ ಸಂಚರಿಸಿ ಸಂವಿಧಾನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಅದೇ ರೀತಿ ಗುರುವಾರ ತಾಲೂಕಿನ ಮಜರಾಹೊಸಹಳ್ಳಿ ಗ್ರಾಮಸ್ಥರು ಹಾಗಾ ಗ್ರಾಮ ಪಂಚಾಯಿತಿ ಪಿಡಿಒ ರವೀಂದ್ರ ಅವರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸಂಭ್ರಮದ ಅದ್ಧೂರಿ ಕೋರಿದರು.

ಈ ವೇಳೆ ಗ್ರಾಪಂ ಪಿಡಿಒ ರವೀಂದ್ರ ಮಾತನಾಡಿ, ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಎಷ್ಟು ಮುಖ್ಯವೋ ಕರ್ತವ್ಯ ಕೂಡ ಅಷ್ಟೇ ಮುಖ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದರು.

ಮಜರಾಹೋಸಹಳ್ಳಿ ಗ್ರಾಮಕ್ಕೆ ಜಾಗೃತಿ ಜಾಥಾ ಆಗಮಿಸುತ್ತಿದ್ದಂತೆ ಸ್ಥಬ್ಧಚಿತ್ರ ರಥಕ್ಕೆ ಮೇಲೆ ಪುಷ್ಪ ಮಳೆ ಸುರಿಸುವ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಲಾ ಮಕ್ಕಳು ವೆಲ್ ಕಮ್ ನಾಮಫಲಕ ಹಿಡಿದು ಸ್ವಾಗತಿಸಿದ್ದು ವಿಶೇಷವಾಗಿತ್ತು. ರಾಷ್ಟ್ರ ನಾಯಕರ ವೇಷಧರಿಸಿದ ಮಕ್ಕಳು, ನಮ್ಮ ಸಂವಿಧಾನ ನಮ್ಮ ಹೆಮ್ಮೆ, ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬಿತ್ಯಾದಿ ಸಂವಿಧಾನ ಕುರಿತು ಭಿತ್ತಿಪತ್ರ ಹಿಡಿದು ಜಾಗೃತಿ ಮೂಡಿಸಿದರು.

ಈ ವೇಳೆ ನಿಕಟ ಪೂರ್ವ ಗ್ರಾ.ಪಂ ಅಧ್ಯಕ್ಷ ವಿಜಿಕುಮಾರ್ ಉಪಾಧ್ಯಕ್ಷರಾದ ಲಕ್ಷಮ್ಮ ಸದಸ್ಯರಾದ ಸಂದೇಶ್, ನಾರಾಯಣಪ್ಪ, ಮಾರಪ್ಪ, ದೇವರಾಜು ಸೇರಿದಂತೆ ಗ್ರಾಮದ ಗಣ್ಯರು ಉಪಸ್ಥತರಿದ್ದರು.

Leave a Reply

Your email address will not be published. Required fields are marked *