ಸಂಭ್ರಮದ ಮುತ್ಯಾಲಮ್ಮ ತಾಯಿ ಜಾತ್ರಾ ಮಹೋತ್ಸವ

ಮೇ.23ರ ಬೆಳಗ್ಗೆ 11:30ಕ್ಕೆ ದೇವಾಲಯದಿಂದ ಹೊರಟ ದೇವಿಯ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಮಂಗಳವಾದ್ಯಗಳೊಂದಿಗೆ ಭಾಗವಹಿಸಿದ್ದ ಡೊಳ್ಳು ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆ, ವೀರಗಾಸೆ ಕಲಾ ತಂಡಗಳು ಉತ್ಸವಕ್ಕೆ ಮೆರುಗು ನೀಡಿದ್ದವು. ಮುತ್ಯಾಲಮ್ಮ ಸೇವಾ ದತ್ತಿ ಜಾತ್ರಾ ಮಹೋತ್ಸವದ ನೇತೃತ್ವವಹಿಸಿತ್ತು.

ಜಾತ್ರೆ ಅಂಗವಾಗಿ ದೇವಾಲಯದ ಸುತ್ತಲಿನ ಗ್ರಾಮಗಳಾದ ದರ್ಗಾಜೋಗಿಹಳ್ಳಿ, ರೋಜಿಪುರ, ಕುರುಬರಹಳ್ಳಿ, ನಾಗಸಂದ್ರ, ಕೊಡಿಗೇಹಳ್ಳಿ ಸೇರಿದಂತೆ ನಗರ ಹಾಗೂ ತಾಲ್ಲೂಕಿನ ಗ್ರಾಮಸ್ಥರು ಹೊಂಬಾಳೆಯಲ್ಲಿ ಸಿಂಗರಿಸಿಕೊಂಡು ಬಂದಿದ್ದ ವಿವಿಧ ಮಾದರಿಯ ಆರತಿಗಳನ್ನು ದೇವಿಗೆ ಬೆಳಗಿದರು.

ನಾಗಸಂದ್ರ, ದರ್ಗಾಜೋಗಿಹಳ್ಳಿ, ಕೊಡಿಗೆಹಳ್ಳಿ, ರೋಜಿಪುರ ಗ್ರಾಮಗಳಿಂದ ಜಾತ್ರೆಗೆ ವಿಶೇಷ ರಥಗಳೊಂದಿಗೆ ಮಹಿಳೆ ಯರು ಆರತಿಗಳೊಂದಿಗೆ ಆಗಮಿಸಿದ್ದರು. ಮುತ್ಯಾಲಮ್ಮ ದೇಗುಲದ ಸಮೀಪವಿರುವ ನವಗ್ರಹ ದೇವಾಲಯ ಹಾಗೂ ದೊಡ್ಡಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮೇ.24ರಂದು ಹಗಲು ಪರಿಷೆ ನಡೆಯಲಿದೆ. ರಥೋತ್ಸವದಲ್ಲಿ ಶಾಸಕ ಧೀರಜ್ ಮುನಿರಾಜು ಭಾಗವಹಿಸಿ ಪೂಜೆ ಸಲ್ಲಿಸಿಸರು. ಬಳಿಕ ಮಾತನಾಡಿದ ಅವರು ದೇವತಾ ಕಾರ್ಯಕಾರ್ಯಗಳಿಂದ ಮಾನವ ಕುಲಕ್ಕೆ ನೆಮ್ಮದಿ ಸಿಗುತ್ತದೆ.

ಪೂರ್ವಜರ ಕಾಲದಿಂದಲೂ ನಡೆಸಿಕೊಂಡಿ ಬಂದಿರುವ ಸಂಪ್ರದಾಯಗಳು ಇಂದಿಗೂ ಮುಂದುವರೆಯುತ್ತಿರುವುದು ಸಂತೋಷದ ವಿಚಾರ. ಜಾತ್ರಾ ಮಹೋತ್ಸವಗಳು ಕೇವಲ ಉತ್ಸವಕ್ಕೆ ಸೀಮಿತವಾಗದೆ ಸ್ನೇಹ, ಸಂಬಂಧ ಬೇಸುಗೆಗು ಕಾರಣಾವಾಗುತ್ತದೆ. ಇದರಿಂದ ಹಲವು ವರ್ಷಗಳಿಂದ ಕಳೆದುಕೊಂಡಿರುವ ಪ್ರೀತಿ, ವಿಶ್ವಾಸವು ಮರಳಿ ದೊರಯಲಿದೆ. ನಾಡಿಗೆ ಪ್ರಕೃತಿ ವಿಕೋಪದಿಂದ ಯಾವುದೇ ಅನಾಹುತಗಳು ಆಗದಂತೆ ದೇವರಲ್ಲಿ ಪ್ರಾರ್ಥನೆ ಮಾಡಲಾಯಿತು ಎಂದರು.

ದೊಡ್ಡಬಳ್ಳಾಪುರದಲ್ಲಿ ನಗರ ದೇವತೆ ಮುತ್ಯಾಲಮ್ಮ ಜಾತ್ರಾ ಮಹೋತ್ಸವಕ್ಕೆ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಹನುಮಂತ, ಉಪಾಧ್ಯಕ್ಷ ನಾಗೇಶ್, ಗೌರವಾಧ್ಯಕ್ಷ ಹನುಮಂತರಾವ್, ಕಾರ್ಯದರ್ಶಿ ಪ್ರಭಾಕರ್, ಖಜಾಂಚಿ ಮಲ್ಲಣ್ಣ, ಡಿ.ಎನ್ ತಿಮ್ಮರಾಜು, ಅಪ್ಪಿ ವೆಂಕಟೇಶ್, ಜೆ.ಕುಮಾರ್, ಎಲ್ಲಾ ಸದಸ್ಯರು, ಭಕ್ತಾದಿಗಳು ಭಾಗಿಯಾಗಿದ್ದರು.

Ramesh Babu

Journalist

Recent Posts

ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳ ಸರಣಿ: ಜನರಲ್ಲಿ ಆತಂಕ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಮುಂದುವರಿದಿದ್ದು, ಎರಡು ದಿನಗಳ ಅಂತರದಲ್ಲಿ ಎರಡು ಮನೆಗಳ ಕಳ್ಳತನ ಹಾಗೂ ಬೈಕ್ ಕಳವು…

32 seconds ago

ರೈತರಿಗೆ ನೋವಾಗುವ ಯಾವುದೇ ತೀರ್ಮಾನ ಇಲ್ಲ; ಕಾವೇರಿ ಬಿಕ್ಕಟ್ಟಿಗೆ ಮೇಕೆದಾಟು ಒಂದೇ ಶಾಶ್ವತ ಪರಿಹಾರ- ಸಚಿವ ಚಲುವರಾಯಸ್ವಾಮಿ

ರೈತರಿಗೆ ನೋವಾಗುವ ಯಾವುದೇ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ರೈತರ ಸಹಕಾರವಿದ್ದರೆ, ಅವರಿಗೆ ಅಗತ್ಯವಿರುವ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದು…

4 hours ago

ಒಂದೇ ದಿನ ಪ್ರತ್ಯೇಕ ಘಟನೆ: ಮೂವರು ಬಜರಂಗದಳ ಕಾರ್ಯಕರ್ತರು ಸಾವು

ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…

6 hours ago

ಒಂದೇ ದಿನ ಪ್ರತ್ಯೇಕ ಘಟನೆ: ಮೂವರು ಬಜರಂಗದಳ ಕಾರ್ಯಕರ್ತರು ಸಾವು

ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…

6 hours ago

ಎಸ್ ಐ ಆರ್…..

ನಾವು ಅಕ್ರಮ ವಲಸಿಗರಲ್ಲ, ವಂಚಕರಲ್ಲ, ಈ ಮಣ್ಣಿನ ಮೂಲ ನಿವಾಸಿಗಳು. ದಯವಿಟ್ಟು ನಮ್ಮ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಪ್ರಶ್ನಿಸಬೇಡಿ. ನಾವು ಭಾರತೀಯರು......…

12 hours ago

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

24 hours ago