ಸಂಗೀತ, ನಾಟಕಗಳ ಮೂಲಕ ಜನ ಮಾನಸದಲ್ಲಿ ಸದಾಕಾಲ ಉಳಿದುಕೊಂಡ ವ್ಯಕ್ತಿತ್ವ ಠಾಗೋರ್- ಪ್ರೊ. ಡಾ.ಎಂ.ಚಿಕ್ಕಣ್ಣ

ಬಂಗಾಳಿ ಮಹಾನ್ ವಿದ್ವಾಂಸರಾಗಿದ್ದ ಠಾಗೋರ್ ಅವರು ಬಂಗಾಳಿ ಭಾಷೆಯಲ್ಲಿ ಹಲವು ಕಾದರಂಬರಿಗಳನ್ನು ಬರೆದಿದ್ದಾರೆ, ಅಲ್ಲದೆ ಅವರು ಸಂಗೀತಕಾರರಾಗಿ ಮತ್ತು ನಾಟಕ ರಚಿಸುವ ಮೂಲಕ ಅವರು ಜನ ಮಾನಸದಲ್ಲಿ ಸದಾಕಾಲ ಉಳಿದುಕೊಳ್ಳುವ ವ್ಯಕ್ತಿತ್ವದವರು ಎಂದು ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಚಿಕ್ಕಣ್ಣ ಹೇಳಿದರು.

 ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜು, ಸಾಂಸ್ಕೃತಿಕ ಘಟಕ, ಐ.ಕ್ಯೂ.ಎ.ಸಿ   ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಠಾಗೋರ್ ನೆನಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತೀಯ ಸಾಂಪ್ರದಾಯಿಕ, ಶಾಸ್ತ್ರೀಯ ಕಠೋರತೆಯ ಚೌಕಟ್ಟಿನಿಂದ ಹೊರ ಬಂದ ಟಾಗೋರ್‌ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದ ಅವರು, ಕಾವ್ಯಕ್ಕೆ ಹೆಸರು ವಾಸಿಯಾದರೂ ಕಾದಂಬರಿಗಳು, ಪ್ರಬಂಧಗಳು, ಸಣ್ಣ ಕಥೆಗಳು, ಪ್ರವಾಸ ಕಥನಗಳು, ನಾಟಕಗಳು, ಮತ್ತು ಸಾವಿರಾರು ಗೀತೆಗಳನ್ನೂ ರಚನೆ ಮಾಡಿದ್ದಾರೆ ಎಂದರು.

ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ಬಾಬುಸಾಬಿ ಮಾತನಾಡಿ, ಗೀತಾಂಜಲಿ (ಗೀತೆಗಳು), ಗೋರ (ಸುಂದರ ಮುಖಿ) ಮತ್ತು ಘರೇ ಬೈರೆ(ಮನೆ ಮತ್ತು ಪ್ರಪಂಚ) ಇವರ ಹೆಸರಾಂತ ಕೃತಿಗಳು. ಅವರು ರಚಿಸಿದ ಕವನಗಳು, ಸಣ್ಣ ಕಥೆಗಳು, ಮತ್ತು ಕಾದಂಬರಿಗಳು ಅವುಗಳ ಸಾಹಿತ್ಯಕ್ಕೆ, ಆಡುಮಾತಿನ ಪ್ರಯೋಗಕ್ಕೆ, ವಿಚಾರಶೀಲ ವಾಸ್ತವಿಕತೆಗೆ ಮತ್ತು ತತ್ವಶಾಸ್ತ್ರದ ಅವಲೋಕನಕ್ಕೆ ಪ್ರಶಂಸನೀಯವಾಗಿವೆ ಎಂದರು.

ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಮಧುಶ್ರೀ  ಪ್ರಾಸ್ತಾವಿಕವಾಗಿ ಮಾತನಾಡಿ, ಕಥೆ, ಕಾದಂಬರಿಗಳನ್ನ ಮಾತ್ರವಲ್ಲದೆ ಠಾಗೋರ್‌ ರಚಿಸಿದ ಎರಡು ಗೀತೆಗಳಿಗೆ ರಾಷ್ಟ್ರ ಮನ್ನಣೆ ಸಿಕ್ಕಿದೆ. ‘ಜನ ಗಣ ಮನ’ ಭಾರತದ ರಾಷ್ಟ್ರಗೀತೆಯಾದರೆ. ‘ಅಮರ್ ಶೋನರ್ ಬಾಂಗ್ಲಾ’ ಬಾಂಗ್ಲಾದೇಶದ ರಾಷ್ಟ್ರಗೀತೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಕೆ. ದಕ್ಷಿಣ ಮೂರ್ತಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಕಾಶ್ ಸಿ.ಪಿ, ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಪಿ. ಚೈತ್ರ, ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಶ್ವೇತ, ಎನ್.ಎಸ್.ಎಸ್ ಅಧಿಕಾರಿಗಳಾದ ಲಕ್ಷ್ಮೀಶ, ಪ್ರಾಧ್ಯಾಪಕರಾದ ಡಾ.ತಾವರೇನಾಯ್ಕ್, ಸ್ವಾತಿ, ಕಿರಣ್, ವೆಂಕಟೇಶ್, ಬಿ. ಶ್ರೀನಿವಾಸ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *