ಕೋಲಾರ: ಹಿಂದಿನ ಕಾಲದಿಂದ ನಡೆದುಕೊಂಡು ಬರುತ್ತಿರುವ ಜಾನಪದ ಕಲೆಗಳು, ಸಂಸ್ಕೃತಿಯ ಸಂಪ್ರದಾಯ ಪದ್ದತಿಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸವನ್ನು ನಾವು ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ತಿಳಿಸಿದರು.
ನಗರದ ಬಂಗಾರಪೇಟೆ ವೃತ್ತದ ಅಂಬೇಡ್ಕರ್ ನಗರದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ವಾರ್ಷಿಕೋತ್ಸವ ಹಾಗೂ ಹೂವಿನ ಕರಗ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿನ ಜಾನಪದ ಕಲೆಗಳಿಗೆ ಅದರದೇ ಆದ ಇತಿಹಾಸ ಮತ್ತು ಪರಂಪರೆಯ ಜೊತೆಗೆ ಸಂಸ್ಕೃತಿ ಇದೆ. ಈ ಪರಂಪರೆಗಳು ಮೌಲ್ಯಯುತವಾಗಿದ್ದು, ಅವುಗಳನ್ನು ಆಚರಣೆ ಮಾಡಿಕೊಂಡು ಹೋದಾಗ ಮಾತ್ರವೇ ಅವು ಜೀವಂತವಾಗಿ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಪಿವಿಸಿ ಕೃಷ್ಣಪ್ಪ, ಕೆಪಿಸಿಸಿ ಕಾರ್ಯದರ್ಶಿ ಕಾರ್ತಿಕ್, ನಗರಸಭೆ ಸದಸ್ಯೆ ಅಪೂರ್ವ ರಾಮಚಂದ್ರ ಮಾಜಿ ಸದಸ್ಯ ರಮೇಶ್ ಮುಖಂಡರಾದ ಮುರಳಿಗೌಡ, ಮಲೇಷಿಯಾ ರಾಜಕುಮಾರ್, ಅಕ್ರಂ, ವೈ ಶಿವಕುಮಾರ್, ಜನಪನಹಳ್ಳಿ ನವೀನ್ ಕುಮಾರ್, ರಾಮಚಂದ್ರ, ಸೇರಿದಂತೆ ವಿನಾಯಕ ಮಿತ್ರ ಬಳಗ, ಅಂಬೇಡ್ಕರ್ ನಗರದ ಹಿರಿಯರ ಮತ್ತು ಕಿರಿಯರ ಮಿತ್ರ ಬಳಗದವರು ಈ ಸಂದರ್ಭದಲ್ಲಿ ಇದ್ದರು