ಚೆನ್ನೈನ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ (GHPU)ಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ(ಗೌರವ ಪ್ರಶಸ್ತಿ)ಯನ್ನು ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಜಿ.ಎನ್ ರಂಗಪ್ಪನವರು ಪಡೆದಿದ್ದಾರೆ.
ಜಿ.ಎನ್ ರಂಗಪ್ಪನವರು ಮಾಡಿದಂತಹ ಸಮಾಜ ಸೇವೆ, ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ, ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ಇತರೆ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ಸಾಧನೆ ಹಾಗೂ ಇನ್ನಿತರೆ ಸಾಧನೆಗಳನ್ನು ಗುರುತಿಸಿ ಈ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತ ಜಿ.ಎನ್ ರಂಗಪ್ಪ ಮಾತನಾಡಿ, ನಾನು ಗೌರವ ಡಾಕ್ಟರೇಟ್ ಪ್ರಶಸ್ತಿ(ಗೌರವ ಪ್ರಶಸ್ತಿ) ಪಡೆದಿರುವುದಕ್ಕೆ ಸಂತಸ ತಂದಿದೆ. ನಾನು ಮಾಡಿದಂತಹ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದಕ್ಕೆ ಸಹಕರಿಸಿದ ನನ್ನ ಹಿತೈಶಿಗಳು ಸೇರಿದಂತೆ ಎಲ್ಲರಿಗೂ ವಂದನೆಗಳನ್ನು ತಿಳಿಸುತ್ತೇನೆ. ನನ್ನ ಈ ಸಮಾಜ ಸೇವೆಯನ್ನು ಮುಂದುವರಿಸುತ್ತೇನೆ ಎಂದರು.
ನಂತರ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಆರ್.ವಿ.ಮಹೇಶ್ ಕುಮಾರ್ ಮಾತನಾಡಿ, ಜಿ.ಎನ್ ರಂಗಪ್ಪನವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಭಾಗದಲ್ಲಿ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಇವರು ರಾಜಕೀಯ, ಸಮಾಜ ಸೇವೆ, ದೇವಾಲಯಗಳ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಕೈಂಕರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಚೆನ್ನೈನ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ (GHPU)ಯು ಗೌರವ ಡಾಕ್ಟರೇಟ್ ಪ್ರಶಸ್ತಿ(ಗೌರವ ಪ್ರಶಸ್ತಿ)ಯನ್ನು ನೀಡಿ ಗೌರವಿಸಿರುವುದು ಬಹಳ ಸಂತಸ ತಂದಿದೆ. ಇವರು ಮುಂದೆಯು ಸಮಾಜ ಸೇವೆಯನ್ನು ಮುಂದುವರಿಸಬೇಕೆಂದು ಕೋರುತ್ತೇನೆ ಎಂದರು.
ಈ ಪ್ರಶಸ್ತಿಯನ್ನು ಪಡೆಯಲು ಜಿ.ಎನ್ ರಂಗಪ್ಪನವರು ಅರ್ಹರಿದ್ದಾರೆ. ಸಮಾಜ ಸೇವೆಯ ಜೊತೆಗೆ ಪ್ರಾಣಿಪಕ್ಷಿಗಳ ಸೇವೆಯನ್ನು ಮಾಡುತ್ತಿದ್ದಾರೆ. ಊರುಗಳಲ್ಲಿ ಸ್ವಚ್ಛತೆ ಕಾಪಾಡುವುದು, ಜನರ ಆರೋಗ್ಯದ ಕಾಳಜಿ ವಹಿಸುವುದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆದ್ದರಿಂದ ಇವರ ಈ ಸಾಧನೆಗಳಿಗಾಗಿ ಇನ್ನಷ್ಟು ಪ್ರಸ್ತಿಗಳು ಲಭಿಸಲಿ ಎಂದು ಕೋರಿದರು.
ಈ ವೇಳೆ ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ, ಭೂ ಮಂಜೂರಾತಿ ಸಮಿತಿ ಸದಸ್ಯ ಗಂಗಸಂದ್ರ ಜಿ.ಕೆ.ಶ್ರೀಧರ್, ಯುವ ಕಾಂಗ್ರೆಸ್ ಸಮಿತಿಯ ತಾ.ಪ್ರ.ಕಾ ಶಿವಕುಮಾರ್ ಆರ್.ವಿ, ತಾಲೂಕಿನ ಕೃಷಿಕ ಸಮಾಜದ ಅಧ್ಯಕ್ಷ ಮುರುಳಿಧರ್.ಆರ್ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.