ಶ್ರೀ ಕೊಂಗಾಡಿಯಪ್ಪ ಕಾನೂನು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ನಾಡು, ನುಡಿ ವಿಚಾರದಲ್ಲಿ ಅಭಿಮಾನ ಇರಬೇಕು. ಕನ್ನಡವನ್ನು  ಬಳಸುವ ಮೂಲಕ ಕನ್ನಡ ಉಳಿಸಿ, ಬೆಳೆಸಲು ಮಾತ್ರ ಸಾಧ್ಯ ಎಂದು ಶ್ರೀ ಕೊಂಗಾಡಿಯಪ್ಪ ಪದವಿ ಕಾಲೇಜಿನ ಪ್ರಾಂಶುಪಾಲ ಪಂಚಾಕ್ಷರಯ್ಯ ತಿಳಿಸಿದರು.

ದೊಡ್ಡಬಳ್ಳಾಪುರ ತಾಲೂಕಿನ ಪ್ರತಿಷ್ಠಿತ ಶ್ರೀ ಕೊಂಗಾಡಿಯಪ್ಪ ಕಾನೂನು ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡಿಗರ ಅವಿರತ ಹೋರಾಟದ ಫಲ‌ವಾಗಿ ಕರ್ನಾಟಕ ಏಕೀಕರಣದ ಕನಸು ನನಸಾಯಿತು. ಭವ್ಯ ಪರಂಪರೆಯನ್ನು ಹೊಂದಿರುವ ಕನ್ನಡ ನಾಡಿನ ಇತಿಹಾಸ, ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಬಗ್ಗೆ ಕನ್ನಡಿಗರ  ಅಭಿಮಾನ ಹೊಂದಬೇಕಾಗಿದೆ. ಕನ್ನಡಿಗರಿಗೆ    ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡಿಗರು ಧ್ವನಿ ಎತ್ತಬೇಕಾಗಿದೆ ಎಂದರು.

ನಂತರ ಶ್ರೀ ಕೊಂಗಾಡಿಯಪ್ಪ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್ ರೆಡ್ಡಿ ಮಾತನಾಡಿ, ಕುವೆಂಪು ರಚಿಸಿರುವ ನಾಡಗೀತೆಗೆ ನೂರು ವರ್ಷ ತುಂಬಿದ ಸಂಭ್ರಮವನ್ನು ರಾಜ್ಯದ ಶಾಲಾ ಕಾಲೇಜು, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆಚರಿಸಬೇಕಾಗಿದೆ ಎಂದರು.

ಈ ವೇಳೆ ಕಾನೂನು ಪದವಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು..

Ramesh Babu

Journalist

Recent Posts

ಡಿಮೆನ್ಸಿಯಾ ಆರೈಕೆಗೆ ನೈಟಿಂಗೇಲ್ಸ್ ಸ್ಮೃತಿ ಗ್ರಾಮ ಲೋಕಾರ್ಪಣೆ

ದೊಡ್ಡಬಳ್ಳಾಪುರ: ಡಿಮೆನ್ಸಿಯಾದಿಂದ ಬಳಲುತ್ತಿರುವ ಅಸಹಾಯಕ ಹಿರಿಯ ನಾಗರಿಕರಿಗೆ ಗೌರವಯುತ, ಸುರಕ್ಷಿತ ಹಾಗೂ ಗುಣಮಟ್ಟದ ಆರೈಕೆ ಒದಗಿಸುವ ಉದ್ದೇಶದಿಂದ ತಾಲೂಕಿನ ತಿರುಮಗೊಂಡನಹಳ್ಳಿ…

1 hour ago

ಬುಡಸಮೇತ ಧರೆಗುರುಳಿದ ಬೃಹತ್ ಮರ: ವಾಹನಗಳು ಜಖಂ

ದೊಡ್ಡಬಳ್ಳಾಪುರ: ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ (ಟಿಬಿ ವೃತ್ತ) ಸಮೀಪದ ಪ್ರವಾಸಿ ಮಂದಿರದ ಬಳಿ ಬೃಹತ್ ಮರವೊಂದು ಬುಡಸಮೇತ ಧರೆಗುರುಳಿದ…

17 hours ago

ಪತ್ನಿ ಸೇರಿ ಒಂದೇ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಕೊಂದ ಪತಿ!: ಮೃತದೇಹಗಳನ್ನು ನಂದಿಬೆಟ್ಟದ ಸುತ್ತಮುತ್ತ ಎಸೆದ ಆರೋಪ

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು…

1 day ago

ಬದುಕಿನ ನಶ್ವರತೆಯ ನೆರಳಲ್ಲಿ ನೆಮ್ಮದಿಯ ಹುಡುಕಾಟ…….

ಬದುಕೆಂಬ ಕಟ್ಟಡದ ಒಳಗೆ ನಿಂತು........ ಇದು ನಿರಾಶಾವಾದವಲ್ಲ ಅಥವಾ ವೈರಾಗ್ಯವೂ ಅಲ್ಲ. ಬದುಕಿನ ನಶ್ವರತೆಯ ನೆರಳಲ್ಲಿ ನೆಮ್ಮದಿಯ ಹುಡುಕಾಟ............ ಇತ್ತೀಚೆಗೆ…

1 day ago

ನಾಳೆ ದೊಡ್ಡಬಳ್ಳಾಪುರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ವಿದ್ಯುತ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 6ರಂದು (ಶುಕ್ರವಾರ) ಬೆಳಿಗ್ಗೆ…

2 days ago

ನ.28 ಕ್ಕೆ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ

2027-28ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಯಲಿರುವ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST-2027) ಯು ನವೆಂಬರ್…

2 days ago