ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ವರ್ಷದ ಮೊದಲ ಪಂದ್ಯದಲ್ಲಿ 2 ರನ್ ಗಳ ರೋಚಕ ಗೆಲುವು ಸಾಧಿಸುವ ಮೂಲಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಭಾರತ ತಂಡ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ, ಪಾದಾರ್ಪಣೆ ಪಂದ್ಯವಾಡಿದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (7) ಹಾಗೂ ಸಂಜು ಸ್ಯಾಮ್‌ಸನ್ (5) ಬೇಗನೆ ನಿರ್ಗಮಿಸಿದರು, ಮಧ್ಯಮ ಕ್ರಮಾಂಕದಲ್ಲಿ ಡೆತ್ ಓವರ್ ನಲ್ಲಿ ದೀಪಕ್ ಹೂಡ 41(23) ಮತ್ತು ಅಕ್ಷರ್ ಪಟೇಲ್ 31(20) ಇವರ ಆಕರ್ಷಕ ಅರ್ಧ ಶತಕದ ನೆರವಿನಿಂದ 20 ಓವರ್ ಗೆ 5 ವಿಕೆಟ್ ನಷ್ಟಕ್ಕೆ 162 ಟಾರ್ಗೆಟ್ ನೀಡಿತು.
ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪ್ರವಾಸಿ ಶ್ರೀಲಂಕಾಗೆ ಚೊಚ್ಚಲ ಪಂದ್ಯವಾಡಿದ ಶಿವಂ ಮಾವಿ ಆರಂಭಿಕ ಆಘಾತ ನೀಡಿದರು, ಆರಂಭಿಕಾದ ಪಥುಮ್ ನಿಸಾಂಕ(1), ಭಾನುಕಾ ರಾಜಪಕ್ಸೆ(10), ಧನಂಜಯ ಡಿ ಸಿಲ್ವಾ(8), ಚರಿತ್ ಅಸಲಂಕಾ(12), ಬೇಗನೆ ಪೆಲಿಯನ್ ಸೇರಿದರು.
ನಂತರ ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ನಾಯಕ ದಸುನ್ ಶಾನಕ 45(27) ಮೂರು ಸಿಕ್ಸ್ ರ್ ಮತ್ತು ಮೂರು ಬೌಂಡರಿ ಸ್ಪೋಟಕ ಬ್ಯಾಟಿಂಗ್ ಇಂದ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಕೊನೆಯ 6 ಎಸೆತಕ್ಕೆ 12 ರನ್ ಬೇಕಾಗಿದ್ದಾಗ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ ಭಾರತಕ್ಕೆ ಗೆಲುವು ತಂದು ಕೊಟ್ಟರು
ಉತ್ತಮ ಬ್ಯಾಟಿಂಗ್ ಮಾಡಿದ ದೀಪಕ್ ಹೂಡಾ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು, ಪದಾರ್ಪಣೆ ಪಂದ್ಯವಾಡಿದ ಬೌಲರ್ ಶಿವಂ ಮಾವಿ ನಾಲ್ಕು ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದರು.