ಇಂದು ನಾಡಿನೆಲ್ಲಡೆ ಅದ್ಧೂರಿಯಾಗಿ ನಡೆದ ಶ್ರೀರಾಮ ನವಮಿ ಆಚರಣೆ. ಶ್ರೀರಾಮ ನವಮಿಯ ಹಬ್ಬದ ಪ್ರಯುಕ್ತ ಕರುನಾಡ ವಿಜಯ ಸೇನೆಯ ವತಿಯಿಂದ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ್ ರವರ ನೇತೃತ್ವದಲ್ಲಿ ಭಕ್ತಾಧಿಗಳಿಗೆ ಪಾನಕ ಹೆಸರಬೇಳೆ ಹಾಗೂ ಮಜ್ಜಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ವಿನಯ್ ಆರಾಧ್ಯ, ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷರಾದ ಕವಿತಮ್ಮ, ತಾಲ್ಲೂಕು ಕಾರ್ಮಿಕ ಘಟಕದ ಅಧ್ಯಕ್ಷರಾದ ಮಧುಸೂಧನ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಕುಮಾರ್ ಹಾಗೂ ಎಲ್ಲಾ ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.