ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಸೀತಾ ಶ್ರೀರಾಮ ಲಕ್ಷ್ಮಣ ಆಂಜನೇಯ ಸ್ವಾಮಿ ಸಮೇತ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿಟ್ಟು, ಶ್ರೀ ಸ್ವಾಮಿಯವರ ಮೆರವಣಿಗೆಯನ್ನು ನಗರದ ಪ್ರಮುಖ ರಸ್ತೆ, ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಶ್ರೀ ಪ್ರಸನ್ನ ಬಿಸಿಲು ಆಂಜನೇಯ ಸ್ವಾಮಿ ದೇವಾಲಯ ಅರಳು ಮಲ್ಲಿಗೆ ಬಾಗಿಲು, ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ವೃತ್ತ ತೇರಿನ ಬೀದಿ ಇಲ್ಲಿಂದ ಹೊರಟ ಬೆಳ್ಳಿರಥ ರಂಗಪ್ಪ ಸರ್ಕಲ್ ಸೇರಿದಂತೆ ಇತರೆ ಪ್ರಮುಖ ರಸ್ತೆ ಬೀದಿಗಳಲ್ಲಿ ಸಾಗಿತು.
ಬೆಳ್ಳಿರಥದಲ್ಲಿರುವ ಸೀತಾ ಶ್ರೀರಾಮ ಲಕ್ಷ್ಮಣ ಆಂಜನೇಯ ಸ್ವಾಮಿಯವರನ್ನು ಜನ ಕಣ್ತುಂಬಿಕೊಂಡು ದೇವರ ಕೃಪೆಗೆ ಪಾತ್ರರಾದರು.
ಇಂದು ನಾಡಿನೆಲ್ಲೆಡೆ ಶ್ರೀ ರಾಮನವಮಿ ಸಂಭ್ರಮ ಸಡಗರ ಮನೆ ಮಾಡಿತ್ತು. ಶ್ರೀ ರಾಮನವಮಿ ಅಂಗವಾಗಿ ಶ್ರೀರಾಮ ಹಾಗೂ ಆಂಜನೇಯ ದೇಗುಲಗಳು ಸೇರಿದಂತೆ ವಿವಿದೆಡೆಗಳಲ್ಲಿ ಭಾನುವಾರ ಸಂಭ್ರಮ, ಸಡಗರ ಹಾಗೂ ಶ್ರದ್ಧ ಭಕ್ತಿಯಿಂದ ಪೂಜೆ ಪುನಸ್ಕಾರಗಳು, ಎಲ್ಲೆಲ್ಲೂ ಶ್ರೀ ರಾಮನಾಮಗಳು ಮೊಳಗಿದವು.