ಶ್ರದ್ಧಾಭಕ್ತಿಯಿಂದ ನಡೆದ ಶ್ರೀಮುತ್ಯಾಲಮ್ಮದೇವಿ ರಥೋತ್ಸವ

ದೊಡ್ಡಬಳ್ಳಾಪುರ ಶಾಂತಿನಗರದ ಶ್ರೀಮುತ್ಯಾಲಮ್ಮ ಸೇವಾ ದತ್ತಿ ನೇತೃತ್ವದಲ್ಲಿ ಮಂಗಳವಾರ ನಾಡದೇವತೆ ಶ್ರೀಮುತ್ಯಾಲಮ್ಮದೇವಿ ರಥೋತ್ಸವ ಬಹಳ ವಿಜೃಂಬಣೆಯಿಂದ ನಡೆಯಿತು.

ಶ್ರೀಮುತ್ಯಾಲಮ್ಮದೇವಿ ರಥೋತ್ಸವ ಹಿನ್ನೆಲೆ ದೇವಾಲಯವನ್ನು ವಿವಿಧ ಪುಷ್ಪಗಳು, ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು. ದೇವತೆಗೆ ವಿವಿಧ ಹೋಮ, ಹವನ, ಪೂಜೆ ಪುನಸ್ಕಾರಗಳನ್ನು ಅದ್ಧೂರಿಯಾಗಿ, ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ರಥೋತ್ಸವದಲ್ಲಿ ವೀರಗಾಸೆ, ಡೊಳ್ಳು ಕುಣಿತ, ತಮಟೆ ಮುಂತಾದ ಕಲಾತಂಡಗಳು ಭಾಗವಹಿಸಿ ನೋಡುಗರ ಕಣ್ಮನ ಸೆಳೆಯಿತು.

ಇದಷ್ಟೇ ಅಲ್ಲದೆ ತಾಲ್ಲೂಕಿನ ದರ್ಗಾಜೋಗಿಹಳ್ಳಿ, ರೋಜಿಪುರ, ನಾಗಸಂದ್ರ ಗ್ರಾಮಗಳಿಂದಲ್ಲೂ ಮುತ್ಯಾಲಮ್ಮ ಜಾತ್ರೆಗೆ ಮಂಗಳವಾರ ಸಂಜೆ ಕುರ್ಜುಗಳಲ್ಲಿ ಆಯಾ ಗ್ರಾಮದ ದೇವರುಗಳನ್ನು ಪ್ರತಿಷ್ಠಾಪಿಸಿಕೊಂಡು ಹೂವಿನ ಆರತಿಗಳೊಂದಿಗೆ ಆಗಮಿಸಿದವು.

 

ಕುರುಬರಹಳ್ಳಿ, ಕೊಡಿಗೇಹಳ್ಳಿ, ರೋಜಿಪುರ ಸೇರಿದಂತೆ ನಗರ ಹಾಗೂ ತಾಲ್ಲೂಕಿನ ಗ್ರಾಮಸ್ಥರಿಂದಲು ಹೂವಿನ ಆರತಿ ಉತ್ಸವ ನಡೆಯಿತು. ಈ ವೇಳೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವತೆಯ ದರ್ಶನ ಪಡೆದು ಪುನೀತರಾದರು.

ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಜನ ಭಕ್ತರಿಗೆ ದೇವಾಲಯದ ವತಿಯಿಂದ ಪ್ರಸಾದ ವಿತರಿಸಲಾಯಿತು. ಬುಧವಾರ ಹಗಲು ಪರಿಷೆ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!