ಪಿ.ಎ. ಮುರುಳಿ ಅವರನ್ನ ಶೃಂಗೇರಿ ಮಠದ ನೂತನ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಶ್ರೀಗಳು ನೇಮಕ ಮಾಡಿದ್ದಾರೆ. 1986 ರಲ್ಲಿ ಶೃಂಗೇರಿ ಜಗದ್ಗುರು ಅಭಿನವ ವಿದ್ಯಾತೀರ್ಥ ಶ್ರೀಗಳಿಂದ ಗೌರಿ ಶಂಕರ್ ಅವರು ಮಠದ ಆಡಳಿತಾಧಿಕಾರಿಯಾಗಿ ಈ ಹಿಂದೆ ನೇಮಕಗೊಂಡಿದ್ದರು.
38 ವರ್ಷ ಗೌರಿ ಶಂಕರ್ ಅವರು ಮಠದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಮುರುಳಿ ಅವರಿಗೆ ಮುಖ್ಯ ಸಲಹೆಗಾರರಾಗಿ ಗೌರಿ ಶಂಕರ್ ಅವರು ಮುಂದುವರೆಯಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಫೆಬ್ರವರಿ 12ಕ್ಕೆ ಮಠದಲ್ಲಿ ಗೌರಿ ಶಂಕರ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.
ಫೆಬ್ರವರಿ 12ಕ್ಕೆ ಕಿರಿಯ ಶ್ರೀ ವಿಧುಶೇಖರ ಶ್ರೀಗಳು ಸನ್ಯಾಸ ಸ್ವೀಕರಿಸಿ 9 ವರ್ಷ ಆಗುವುದರಿಂದ ಆ ದಿನದಂದು ಗೌರಿ ಶಂಕರ್ ಸಮರ್ಪಿತ ಸೇವೆಗೆ ಅಭಿನಂದನಾ ಸಮಾರಂಭ ಕೂಡ ನಡೆಯಲಿದೆ.