ಸೈಬರ್ ಕಳ್ಳರ ಹಾವಳಿ ಶುರುವಾಗಿದ್ದು, ಕೋಟಿ ಕೋಟಿ ಹಣ ಬರುತ್ತದೆ ಎಂದು ಯಾಮಾರಿದರೆ ಅಕೌಂಟ್ ನಲ್ಲಿರುವ ಎಲ್ಲಾ ಹಣ ಲೂಟಿ ಮಾಡುತ್ತಾರೆ.
+92 ನಂಬರ್ ಬಳಸಿ ಫೇಕ್ ಮೆಸೇಜ್ ಮಾಡುವ ಸೈಬರ್ ಕಳ್ಳರು. ಪ್ರತಿಷ್ಠಿತ ಬ್ಯಾಂಕ್ ಗಳ ಹೆಸರಲ್ಲಿ ಫೇಕ್ ಚೆಕ್ ಗಳು ಹರಿದಾಡುತ್ತಿವೆ. ಅದೇ ರೀತಿ ಜನರಿಗೆ ಫೋನ್ ಮಾಡಿ ಖಾಸಗಿ ರಿಯಾಲಿಟಿ ಶೋ ಗಳ ಹೆಸರು ಮತ್ತು ವರ್ಚುವಲ್ ನಂಬರ್ ಗಳನ್ನು ಬಳಸಿ ಸುಲಿಗೆಗೆ ಇಳಿದಿರುವ ಹ್ಯಾಕರ್ಸ್.
ಯಾಮಾರಿದರೆ ಪರ್ಸನಲ್ ಡೀಟೆಲ್ಸ್ ಪಡೆದು ಸೈಲೆಂಟ್ ಆಗಿ ಅಕೌಂಟ್ ನಲ್ಲಿರುವ ಹಣ ದೋಚುತ್ತಾರೆ. ಒಂದು ವೇಳೆ ಮೋಸ ಹೋದರೆ ಮೋಸ ಮಾಡಿರುವವರ ಸುಳಿವು ಸಿಗುವುದಿಲ್ಲ. ಎಲ್ಲಿಂದ, ಯಾರು ,ಹೇಗೆ ಹ್ಯಾಕ್ ಮಾಡಿದರು ಎಂಬುವುದರ ಬಗ್ಗೆ ಯಾರಿಗೂ ತಿಳಿಯುವುದಿಲ್ಲ. ಏಕೆಂದರೆ ಅವರು ಮೋಸ ಮಾಡೋದು ವರ್ಚುವಲ್ ನಂಬರ್ ಗಳಿಂದ, ಆ ನಂಬರ್ ಗೆ ವಿಳಾಸ ಇರೋದಿಲ್ಲ, ಇದನ್ನು ಯಾರು ಮಾಡಿದ್ದಾರೆ ಪತ್ತೆ ಹಚ್ವುವುದಕ್ಕೆ ಆಗೋದಿಲ್ಲ.
ಆದ್ದರಿಂದ ಫೇಕ್ ನಂಬರ್ ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ಸೆಕ್ಯುರಿಟಿ ಎಕ್ಸ್ಪರ್ಟ್ ಗಳಿಂದ ಸೂಚನೆ ನೀಡಲಾಗಿದೆ.