
ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ ಇಂದು ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಲಾಯಿತು.
ಬಿಜೆಪಿ ಯುವ ಮುಖಂಡ ಹಾಗೂ ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಹರೀಶ್ ರೆಡ್ಡಿ ನೇತೃತ್ವದಲ್ಲಿ ಹಲವಾರು ಕನ್ನಡ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳ ಹೋರಾಟಗಾರರು ಪಾದಯಾತ್ರೆಗೆ ಸಾಥ್ ನೀಡಿದ್ದರು.
ಬೆಂಗಳೂರಿನ ಕೊಳಚೆ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡದೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿರೋದನ್ನ ವಿರೋಧಿಸಿ ಪಾದಯಾತ್ರೆ ನಡೆಸಲಾಯಿತು. ಚಿಕ್ಕಬಳ್ಳಾಪುರ ನಗರದ ಶನಿಮಹಾತ್ಮ ದೇವಾಲಯದಿಂದ ನೂರಾರು ಜನ ಹೋರಾಟಗಾರರೊಂದಿಗೆ ಬಿ.ಬಿ. ರಸ್ತೆಯಲ್ಲಿ ಪಾದಯಾತ್ರೆ ನಡೆಸಲಾಯಿತು.
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ಶುದ್ಧ ಕುಡಿಯುವ ನೀರು ಕೊಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲಿನ ಶಾಸಕರು ಹೊರ ಜಿಲ್ಲೆಗಳಲ್ಲಿ ಹೋಗಿ ತೊಡೆ ತಟ್ಟುತ್ತಾರೆ ಅದೇ ಪೌರುಷವನ್ನು ನಮ್ಮ ಜಿಲ್ಲೆಯ ಕೆಲಸಗಳ ಮೇಲೆ ನೋಡಿಸಿದರೆ ನಮ್ಮ ಜಿಲ್ಲೆ ನಮ್ಮ ಜಿಲ್ಲೆಯ ಜನ ನೆಮ್ಮದಿಯಾಗಿರುತ್ತಾರೆ. ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಪಾದಯಾತ್ರೆಯ ಉದ್ದಗಲಕ್ಕೂ ಮಹಿಳೆಯರು ಬಿಂದಿಗೆಗಳನ್ನು ತಲೆಯ ಮೇಲೆ ಹೊತ್ತು ಸಾಗುತ್ತಿರುವ ಎಲ್ಲರ ಕಣ್ಮನ ಸೆಳೆಯುತ್ತಿತ್ತು. ಇನ್ನು ಪಾದಯಾತ್ರೆಯ ಬಳಿಕ ಎಸಿ ಅಶ್ವಿನ್ ಗೆ ಹೋರಾಟಗಾರರು ಮನವಿ ಸಲ್ಲಿಸಿದರು.