ಶಿವಣ್ಣ ನಿವಾಸಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಭೇಟಿ ನೀಡಿದ್ದಾರೆ. ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆಯ ನಂತರ ಮೊದಲ ಬಾರಿಗೆ ಯಶ್ ದಂಪತಿ ಭೇಟಿ ಕೊಟ್ಟು ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ನಟ ಶಿವರಾಜ್ ಕುಮಾರ್ ಅವರು ಅಮೆರಿಕಾಗೆ ಚಿಕಿತ್ಸೆಗಾಗಿ ಹೋಗಿದ್ದರು. ಒಂದು ತಿಂಗಳ ಬಳಿಕ ಅಮೆರಿಕದಿಂದ ಬೆಂಗಳೂರಿಗೆ ವಾಪಸ್ ಆಗಿದ್ದರು. ಇದಾದ ಬಳಿಕ ಅಮೆರಿಕಾದಿಂದ ವಾಪಸ್ ಆದ ಬಳಿಕ ಶಿವಣ್ಣ ಅವರನ್ನು ಭೇಟಿಯಾಗಲು ಸಿಎಂ ಸಿದ್ದರಾಮಯ್ಯ, ನಟ ಕಿಚ್ಚ ಸುದೀಪ್ ಅವರು ಕೂಡ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದರು.
ಇದೀಗ ಅಮೆರಿಕಾಗೆ ಹೋಗಿ ಬಂದಿದ್ದ ನಟ ಶಿವಣ್ಣ ಅವರ ಆರೋಗ್ಯ ವಿಚಾರಿಸಲು ಖುದ್ದು ಯಶ್ ಮತ್ತು ರಾಧಿಕಾ ಪಂಡಿತ್ ಭೇಟಿ ನೀಡಿದ್ದಾರೆ.
ಇನ್ನೂ, ಶಿವಣ್ಣ ಅವರು ಚಿಕಿತ್ಸೆ ಪಡೆದು ವಾಪಸ್ ಆಗಿದ್ದ ಸಂದರ್ಭದಲ್ಲಿ ನಟ ಯಶ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಈಗ ಎಲ್ಲ ಕೆಲಸಕ್ಕೆ ಬ್ರೇಕ್ ಹಾಕಿ ಶಿವಣ್ಣರ ಆರೋಗ್ಯ ವಿಚಾರಿಸಿದ್ದಾರೆ.