ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ

ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗಳ ಆದೇಶದಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆ ನಡೆಸುವ ಸಂಬಂಧ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಮಾಡಲು ನಮೂನೆ-19 ರಲ್ಲಿ ಮತದಾರರ ಪಟ್ಟಿಯ ಸೇರ್ಪಡೆಗೆ ಅರ್ಜಿ ಸಲ್ಲಿಸಲು ನವೆಂಬರ್ 06 ಕೊನೆಯ ದಿನವಾಗಿದೆ.

ಮತದಾರರು ತಮ್ಮ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 25 ರಿಂದ ಡಿಸೆಂಬರ್ 10 ವರೆಗೆ ಕಾಲಾವಕಾಶವಿದೆ. ಡಿಸೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು.

ಜಿಲ್ಲೆಯಲ್ಲಿ ನಮೂನೆ-19ರ ಅರ್ಜಿಗಳನ್ನು ಸ್ವೀಕರಿಸುವವರು:

*ದೊಡ್ಡಬಳ್ಳಾಪುರ ತಾಲ್ಲೂಕು*
ಕ್ಷೇತ್ರ ಶಿಕ್ಷಣಾಧಿಕಾರಿ, ಬಿ.ಇ.ಓ ಕಚೇರಿ, ಮುಕ್ತಾಂಬಿಕ ರಸ್ತೆ, ವಡ್ಡರಪೇಟೆ, ಕಚೇರಿ ದೂರವಾಣಿ ಸಂಖ್ಯೆ 080-27622208, ಮೊಬೈಲ್ ನಂ: 9480695013.
ತಹಶೀಲ್ದಾರ್ (ಗ್ರೇಡ್-2), ತಾಲ್ಲೂಕು ಆಡಳಿತ ಸೌಧ, ತಾಲ್ಲೂಕು ಕಚೇರಿ ರಸ್ತೆ ದೊಡ್ಡಬಳ್ಳಾಪುರ ಕಚೇರಿ ದೂರವಾಣಿ ಸಂಖ್ಯೆ 080-27622002, ಮೊಬೈಲ್ ನಂ: 9448346792

*ದೇವನಹಳ್ಳಿ ತಾಲ್ಲೂಕು*
ಕ್ಷೇತ್ರ ಶಿಕ್ಷಣಾಧಿಕಾರಿ, ಬಿ.ಇ.ಓ ಕಚೇರಿ, ಬಿ.ಬಿ ರಸ್ತೆ ಗುರು ಭವನ, ದೇವನಹಳ್ಳಿ ಕಚೇರಿ ದೂರವಾಣಿ ಸಂಖ್ಯೆ 080-27682384, ಮೊಬೈಲ್ ನಂ: 9480695012
ತಹಶೀಲ್ದಾರ್ (ಗ್ರೇಡ್-2), ತಾಲ್ಲೂಕು ಆಡಳಿತ ಸೌಧ. ಬಿ.ಬಿ. ರಸ್ತೆ, ದೇವನಹಳ್ಳಿ ಕಚೇರಿ ದೂರವಾಣಿ ಸಂಖ್ಯೆ 080-22122999, ಮೊಬೈಲ್ ನಂ:6363263117

*ಹೊಸಕೋಟೆ ತಾಲ್ಲೂಕು*
ಕ್ಷೇತ್ರ ಶಿಕ್ಷಣಾಧಿಕಾರಿ, ಬಿ.ಇ.ಓ ಕಛೇರಿ. ಮಿಷನ್ ಆಸ್ಪತ್ರೆ ರಸ್ತೆ, ಬೈರೇಗೌಡ ಪೆಟ್ರೋಲ್ ಬಂಕ್ ಹತ್ತಿರ ಹೊಸಕೋಟೆ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ: 080-27931311 ಮೊಬೈಲ್ ನಂ: 9480695014
ತಹಶೀಲ್ದಾರ್ (ಗ್ರೇಡ್-2), ತಾಲ್ಲೂಕು ಆಡಳಿತ ಸೌಧ, ಹಳೆ ಬಸ್ ನಿಲ್ದಾಣ ಹತ್ತಿರ ಹೊಸಕೋಟೆ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ: 080-27931237,ಮೊಬೈಲ್ ನಂ:9845637542

*ನೆಲಮಂಗಲ ತಾಲ್ಲೂಕು*
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ಓ ಕಛೇರಿ, ಗುರು ಭವನ, ನೆಲಮಂಗಲ ಬಸ್ ನಿಲ್ದಾಣ ಹತ್ತಿರ, ನೆಲಮಂಗಲ ಮೊಬೈಲ್ ನಂ: 9480695015
ತಹಶೀಲ್ದಾರ್ (ಗ್ರೇಡ್-2), ತಾಲ್ಲೂಕು ಆಡಳಿತ ಸೌಧ, ಬಿ ಹೆಚ್ ರಸ್ತೆ, ನೆಲಮಂಗಲ ಕಚೇರಿ ದೂರವಾಣಿ ಸಂಖ್ಯೆ:080-27722126, ಮೊಬೈಲ್ ನಂ: 8147397189

*ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ನೋಂದಾಯಿಸಲು ಮಾನದಂಡಗಳು*

ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ಸಾಮಾನ್ಯ ನಿವಾಸಿ ಆಗಿರಬೇಕು (ಈ ಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳು ಒಳಗೊಂಡಿರುತ್ತದೆ)
ಅರ್ಹತಾ ದಿನಾಂಕ ಹಿಂದಿನ 6 ವರ್ಷಗಳ ಅವಧಿಯ ಪೈಕಿ ಕನಿಷ್ಟ 3 ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಹೊಂದಿರುವ/ಮಾನ್ಯತೆ ಹೊಂದಿರುವುದಾಗಿ ಘೋಷಿಸಲ್ಪಟ್ಟಿರುವ ಸೆಕೆಂಡರಿ ಶಾಲೆಗಿಂತ ಕಡಿಮೆ ಇಲ್ಲದ ಯಾವುದೇ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ವೃತ್ತಿಯಲ್ಲಿ ಕಾರ್ಯ ನಿರ್ವಹಿಸಿರಬೇಕು.

ಸೆಕೆಂಡರಿ ಶಾಲೆ ಅಂದರೆ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿನ ಪ್ರೌಢಶಾಲೆ ವಿಭಾಗದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿರಬೇಕು.
ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಖಾಯಂ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಹಾಗೂ ಪಾರ್ಟ್ ಟೈಂ’ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಲ್ಲಿ ನೋಂದಣಿಗೆ ಅವಕಾಶವಿರುವುದಿಲ್ಲ.

ಅರ್ಜಿದಾರರು ಮೇಲೆ ತಿಳಿಸಿರುವ ಅವಧಿಯಲ್ಲಿ ಶಿಕ್ಷಕ ವೃತ್ತಿಯಲ್ಲಿ ತೊಡಗಿರುವ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಂದ ದೃಢೀಕೃತ ದಾಖಲೆ/ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಮತದಾರರ ಪಟ್ಟಿ ನೋಂದಣಿಗೆ ಅರ್ಜಿದಾರರ ವಾಸಸ್ಥಳವು ಅರ್ಹತೆಯಾಗಿದ್ದು, ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಯ ಸ್ಥಳವು ಪರಿಗಣಿಸಲ್ಪಡುವುದಿಲ್ಲ.
ಮತದಾರರ ಪಟ್ಟಿ ಸೇರ್ಪಡೆಗೆ ಕನ್ನಡ ಅಥವಾ ಅಂಗ್ಲ ಭಾಷೆಯ ನಮೂನೆ-19 ರಲ್ಲಿ ಅರ್ಜಿ ಸಲ್ಲಿಸಬಹುದು
ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗುವುದರಿಂದ ಅರ್ಜಿದಾರರು 2 ಇತ್ತೀಚಿನ ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಇಲಾಖಾ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಮಾನದಂಡಗಳಡಿಯಲ್ಲಿ ಅರ್ಹತೆ ಹೊಂದಿರುವ ಶಿಕ್ಷಕರಿಂದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!