ಮುನಿರತ್ನ ಭ್ರಷ್ಟಚಾರಿ ಅನ್ನೊದು ಗೊತ್ತಿತ್ತು. ಆದರೆ ವಿಕೃತ ಮನಸ್ಸಿನ ಸೆಕ್ಸ್ ರಾಕೇಟ್ ನಡೆಸುತ್ತಾನೆ ಅಂತ ಈಗ ಗೊತ್ತಾಯಿತು. ದುರುದ್ದೇಶ ಪೂರ್ವಕವಾಗಿ ಏಡ್ಸ್ ಪೀಡಿತ ಮಹಿಳೆಯರನ್ನು ಬಿಟ್ಟು ದಂಧೆ ಮಾಡಿದ್ದು ದುರಂತ. ಅಧಿಕಾರಿಗಳು, ರಾಜಕಾರಣಿಗಳು ಅವರ ಅಧಿಕಾರ ದುರುಪಯೋಗ ಕಂಡುಬಂದಿದೆ. ಪೊಲೀಸ್ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ದುರ್ಬಳಕೆ ಆಗಿದೆ. ಹನಿಟ್ರ್ಯಾಪ್ ಗೆ ಒಳಗಾದವರಿಗೆ ಬ್ಲಾಕ್ ಮೇಲ್ ಮಾಡಿ ಅವರ ಮೂಲಕ ಟ್ರ್ಯಾಪ್ ಮಾಡಿಸಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಶಾಸಕ ಮುನಿರತ್ನ ವಿಚಾರವಾಗಿ ಮಾತನಾಡಿದ್ದಾರೆ.
ಶಾಸಕ ಮುನಿರತ್ನ ಅವರನ್ನ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮುನಿರತ್ನ ಕಳಪೆ ಕೆಲಸ ಮಾಡಿ ಭ್ರಷ್ಟಾಚಾರ ಮಾಡೋದು ಗೊತ್ತಿತ್ತು. ವ್ಯವಸ್ಥಿತವಾದ ಹನಿಟ್ರ್ಯಾಫ್ ನಡೆಸುತ್ತಿದ್ದರು ಅನ್ನೋ ಅಘಾತಕಾರಿ ಅಂಶ ಬಯಲಾಗಿದೆ. ಹೆಣ್ಣು ಮಕ್ಕಳನ್ನ ಬಳಸಿಕೊಂಡು ಸರ್ಕಾರಿ ಅಧಿಕಾರಿಗಳನ್ನ ಟ್ರ್ಯಾಪ್ ಮಾಡಿದ್ದಾರೆ. ಅವರ ಮೂಲಕ ಕೆಲ ರಾಜಕಾರಣಿಗಳನ್ನ ಟ್ರ್ಯಾಪ್ ಮಾಡಿದ್ದಾರೆ. ರಾಜಕೀಯವಾಗಿ ಅಧಿಕಾರ ದುರಪಯೋಗಕ್ಕೆ ಬಳಸಿಕೊಳ್ಳುತ್ತಿದ್ದರು. ಉದ್ದೇಶಪೂರ್ವಕವಾಗಿ ಏಡ್ಸ್ ಇರುವವರನ್ನು ಕರೆದುಕೊಂಡು ಬಂದು ಏಡ್ಸ್ ಹಂಚಿದ್ದಾರೆ. ಈ ವಿಚಾರವಾಗಿ ದೂರುಗಳಿಂದ ಕೇಳಿಬಂದಿದೆ. ದೂರು ಕೊಟ್ಟಿರೋದು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆ ಸಂತ್ರಸ್ಥೆ. ನೀರಲ್ಲಿ ಮಾತ್ರೆ ಹಾಕಿ ನಗ್ನವಾಗಿ ಸೆರೆಹಿಡಿದು ಬ್ಲಾಕ್ ಮೇಲ್ ಮಾಡಿದ್ದಾರೆ. ಪೊಲೀಸ್ ಹಾಗೂ ಇತರೆ ಇಲಾಖೆ ಅಧಿಕಾರಿಗಳನ್ನ ಬ್ಲಾಕ್ ಮೇಲ್ ಮಾಡಿ ಕೆಲಸ ಮಾಡಿಸಿಕೊಂಡಿದ್ದಾರೆ. ಕೃತ್ಯಗಳಿಗೆ ಪೊಲೀಸ್ ವಾಹನಗಳನ್ನ ಸಹ ಬಳಸಿದ್ದಾರೆ. ಬಿಜೆಪಿಯವರು ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಕುಮಾರಸ್ವಾಮಿ, ಆರ್ ಅಶೋಕ್ ಖಂಡಿಸಿದ್ದೀರಾ..? ಬಿಜೆಪಿ ಕಾರ್ಯಕರ್ತೆ ಮೇಲೆ ಅತ್ಯಾಚಾರ ಮಾಡಿದ್ರೂ ಬಾಯಿ ಮುಚ್ಚಿಕೊಂಡಿದ್ದಾರೆ.. ಅವರ ಸಪೋರ್ಟ್ ಇಲ್ಲದೆ ಇದೆಲ್ಲಾ ನಡೆಯುತ್ತಾ…? ಒಂದು ಕಡೆ ಒಕ್ಕಲಿಗರಿಗೆ ಅವಮಾನ ದಲಿತರಿಗೆ ಅವಹೇಳನ, ಇನ್ನೊಂದು ಕಡೆ ಹನಿಟ್ರ್ಯಾಪ್. ಬಿಜೆಪಿಯವರು ಹಾಗೂ ಕುಮಾರಸ್ವಾಮಿ ಅವರು ನಾಚಿಕೆ ಮಾನ ಮರ್ಯಾದೆ ಇಲ್ಲದೆ ಅವರ ಪರವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಕ್ಕಲಿಗರಿಗೆ ಅವಹೇಳನವಾದಾಗ ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ಈ ಹಿಂದೆ ಹೋರಾಟ ನಡೆದಿದೆ. ಶಾಸಕ ಮುನಿರತ್ನ ನಡೆಗೆ ಸಮುದಾಯ ಎಚ್ಚೆತ್ತುಕೊಳ್ಳಬೇಕು. ಮುನಿರತ್ನ ವಿಚಾರದಲ್ಲಿ ಸಮುದಾಯದಿಂದ ಖಂಡನೆ ಮಾಡಬೇಕಿದೆ. ಸಮುದಾಯದ ಎಲ್ಲರೂ ನಿರ್ಮಲಾನಂದನಾಥ ಶ್ರೀಗಳಿಗೆ ಗೌರವ ಕೊಡ್ತೀವಿ. ಈಗ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಖಂಡನಾ ಸಭೆ ಆಗಬೇಕಿದೆ. ಇಡೀ ಸಮುದಾಯದ ಗೌರವಕ್ಕೆ ಚ್ಯುತಿ ತಂದಿದೆ. ನಾವು ಧ್ವನಿ ಎತ್ತಬೇಕು. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ನಿರ್ಮಲಾನಂದನಾಥ ಶ್ರೀಗಳಿಗಿದೆ. ಒಕ್ಕಲಿಗ ಶಾಸಕರು, ಸಚಿವರುಗಳು ಸ್ವಾಮೀಜಿ ಜೊತೆ ಮಾತನಾಡಿದ್ದೇವೆ. ಒಕ್ಕಲಿಗರು ದಲಿತರ ಸ್ವಾಭಿಮಾನಕ್ಕೆ ಮುನಿರತ್ನ ಧಕ್ಕೆ ತಂದಿದ್ದಾನೆ. ಎಲ್ಲರ ಅಭಿಪ್ರಾಯ ಶ್ರೀಗಳ ಗಮನಕ್ಕೆ ತರ್ತೇವೆ. ಮುಂದಿನ ನಡೆ ಶ್ರೀಗಳಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಪರವಾನಗಿ ಭೂ ಮಾಪಕರು ಎರಡು ತಿಂಗಳಿಂದ ಮುಷ್ಕರ ಹೂಡಿರುವುದರಿಂದ ಭೂ ಮಾಪನ ಇಲಾಖೆಯ…
ಕೇಂದ್ರ ಸರ್ಕಾರ ಕಳೆದ ಒಂದು ದಶಕದಿಂದ ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಬರುತ್ತಿದೆ ಎಂದು…
ಆಶಾ ಭೋಸ್ಲೆ..... ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ...... ಶಬ್ದ…
Effektives Schreiben von Hausarbeiten Das Schreiben von Hausarbeiten kann für viele Studierende eine große Herausforderung…
ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ವರಿಷ್ಠರು ಯಾವುದೇ…
ಹೆಣ್ಣಿನ ಹಿತರಕ್ಷಣೆಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಲಾಗಿದೆ..ಈ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವರದಕ್ಷಿಣೆ ನಿಷೇಧ ಕಾಯ್ದೆ, ಮಕ್ಕಳ…