2023ನೇ ಕರ್ನಾಟಕ ರಾಜ್ಯದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ಧೀರಜ್‌ಮುನಿರಾಜ್ ಅವರಿಗೆ ಬೆಂಬಲವನ್ನು ನೀಡಿ, ಗೆಲುವಿಗೆ ಕಾರಣಕರ್ತರಾದ ತಾಲ್ಲೂಕಿನ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ತಾಲ್ಲೂಕಿನ ಮಹಾ ಜನತೆಗೆ ಕೃತಜ್ಞತೆಯ ಸಲ್ಲಿಸುವ ಸಲುವಾಗಿ ಜೂನ್ 9ರ ಶುಕ್ರವಾರ ಬೆಳಗ್ಗೆ 10:30ಕ್ಕೆ ನಗರದ ಡಿಕ್ರಾಸ್ ಬಳಿಯ ಶಾಸಕ ಧೀರಜ್‌ಮುನಿರಾಜ್ ಅವರ ಮನೆ ಮುಂಭಾಗ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ವೇಳೆ ಶಾಸಕ ಧೀರಜ್ ಮುನಿರಾಜ್ ರವರ ತಂದೆಯವರಾದ ಪಿ.ಮುನಿರಾಜ್ ರವರ 62ನೇ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಶಾಸಕ ಧೀರಜ್‌ಮುನಿರಾಜ್ ಅವರು ಎಲ್ಲರಿಗೂ ಆದರದ ಸ್ವಾಗತಬಯಸಿದ್ದಾರೆ.