ಶಾಸಕರೇ ನಮ್ಮ ಪಾರ್ಟಿಯ ಬಗ್ಗೆ ಮಾತಾಡೋದು ಬಿಡಿ. ನಮ್ಮ ಪಕ್ಷದಲ್ಲಿ ಫಾರ್ಮಾನು ಹೊರಡಿಸಲು ಹೈಕಮಾಂಡ್ ಇದ್ದಾರೆ. ನಿವೇನು ನಮಗೆ ಪಾಠ ಹೇಳೋದಕ್ಕೆ ಬರಬೇಡಿ. ತಾಲೂಕಿನ ಅಭಿವೃದ್ಧಿ ಕಡೆಗೆ ಗಮನ ಕೊಡಿ ಸಾಕು ಎಂದು ಪರೋಕ್ಷವಾಗಿ ಶಾಸಕ ಧೀರಜ್ ಮುನಿರಾಜ್ ವಿರುದ್ಧ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಗುಡುಗಿದರು.
ನಮ್ಮ ಪಕ್ಷದ ಆತಂರಿಕ ವಿಷಯ ಬೇಡ ಶಾಸಕರೇ ನಿಮಗೆ. ನಮ್ಮ ತಾಲೂಕಿನ ಆಡಳಿತ ಯಂತ್ರ ಅಂದರೆ ತಾಲೂಕು ಕಚೇರಿ ಹಾಗೂ ಎಸಿ ಕಚೇರಿಯ ಆಡಳಿತ ವ್ಯವಸ್ಥೆ ಪರಿಶೀಲಿಸಲು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಬಂದಿದ್ದರು. ಸಚಿವರು ಬಂದು ತಾಲೂಕಿನ ಆಡಳಿತ ಬಗ್ಗೆ ಗಮನಿಸಿದ್ದಾರೆ. ತಾಲೂಕಿನಲ್ಲಿ ಶಾಸಕರು ಏನು ಮಾಡುತ್ತಿದ್ದಾರೆ. ಸಚಿವರು ಬಂದು ತಾಲೂಕಿನ ಆಡಳಿತ ಯಂತ್ರದ ಬಗ್ಗೆ ಗಮನಿಸಬೇಕಾ…? ಶಾಸಕರು ಏನು ಮಾಡುತ್ತಿದ್ದಾರೆ…? ತಾಲೂಕಿನ ಆಡಳಿತ ಯಂತ್ರ ಕುಸಿದಿದೆ….. ಇದು ತಾಲೂಕಿನ ದೌರ್ಭಾಗ್ಯ… ಎಂದು ಕಿಡಿಕಾರಿದ್ದಾರೆ.
ರೈತರಿಗೆ ಸಾಗುವಳಿ ಚೀಟಿ ಸಿಗುತ್ತಿಲ್ಲ. ತಾಲೂಕು ಆಫೀಸ್ ನಲ್ಲಿ ಸಾಗುವಳಿ ಚೀಟಿ ಪಡೆಯಲು ಲಕ್ಷ ಲಕ್ಷ ಹಣ ಕೇಳುತ್ತಿದ್ದಾರೆ… ನಿಜವಾದ ರೈತರು ಬೋರ್ ವೆಲ್ ಭಾಗ್ಯ ಸಿಗುತ್ತಿಲ್ಲ. ತಾಲೂಕಿನ ಆಡಳಿತ ವ್ಯವಸ್ಥೆ ಬಗ್ಗೆ ಮಾಜಿ ಶಾಸಕರನ್ನ, ಸಾರ್ವಜನಿಕರನ್ನ ಕೇಳೋದಕ್ಕೆ ಆಗುತ್ತಾ…..? ತಾಲೂಕಿನ ಸಂಪೂರ್ಣ ಜವಾಬ್ದಾರಿ ಶಾಸಕರ ಮೇಲೆ ಇರುತ್ತದೆ. ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಶಾಸಕರ ಗಮನಕ್ಕೆ ಬರುವುದಿಲ್ಲವೇ…? ಭ್ರಷ್ಟ, ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ಮಾನ್ಯ ಶಾಸಕಕರೇ ನಿವುನ್ನೂ ರಾಜಕೀಯಕ್ಕೆ ಹೊಸಬರು. ಇನ್ನೂ ಮೂರು ವರ್ಷವಿದೆ ಇನ್ನಾದರೂ ತಾಲೂಕನ್ನು ಅಭಿವೃದ್ಧಿ ಮಾಡುವುದಕ್ಕೆ ಶ್ರಮಿಸಿ ಎಂದು ಹೇಳಿದರು.
ಎಂಪಿ ಚುನಾವಣೆಯಲ್ಲಿ ನಾವೇನು ಕಾಂಗ್ರೆಸ್ ಗೆ ಸರ್ಪೋಟ್ ಮಾಡಿದ್ವಾ…? ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಎನ್ ಡಿಎ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇವೆ. ನಾನು ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರಕ್ಕೆ ಮಾತನಾಡಿದ ಅವರು, ಅದು ವದಂತಿಯಾಗಿಯೇ ಉಳಿಯಲಿ ಎಂದು ಹೇಳಿದರು.
ಅದೇರೀತಿ 2028ರ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧಿಸುವುದು ಶತಸಿದ್ಧ ಎಂದು ಎಸ್.ಎಂ. ಹರೀಶ್ ಗೌಡರು ಘೋಷಣೆ ಮಾಡಿದ್ದು, ಚುನಾವಣಿಗೆ ಇನ್ನೂ 3 ವರ್ಷಗಳಿದ್ದು ಈಗಿನಿಂದಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಭಟ್ಕಳದ ಹೆಬಳೆ ತೆಂಗಿನಗುಂಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ಭಾನುವಾರ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ…
ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…
ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…
"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…
ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…