ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಶಾವಂತಗೇರಾ ಗ್ರಾಮ ಪಂಚಾಯತಿ ಹೆಸರಿಗೆ ಮಾತ್ರ. 2014-15 ರಲ್ಲಿ ಮರುವಿಂಗಡಣೆ ಪ್ರಕಾರ ಶಾವಂತಗೇರಾ ಗ್ರಾಮ ಪಂಚಾಯತಿಯಾಗಿದೆ.
ಈ ಪಂಚಾಯಿತಿಯಲ್ಲಿ ಆಡಳಿತ ಅಧಿಕಾರಿಯಾದ ಬಸವರಾಜ ಹಟ್ಟಿ, ಎಡಿ ಅಣ್ಣರಾವ್, ಮತ್ತು ಪ್ರಭಾರಿ ಪಿಡಿಓ ಶಂಶುದ್ದೀನ್ ಇನ್ನೂಳಿದ ಅಧಿಕಾರಿಳದ್ದೇ ದರ್ಬಾರ್ ಆಗಿದೆ ಎಂದು ಇಲ್ಲಿನ ಸ್ಥಳೀಯರು ಹಾಗೂ ಬಹುಜನ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ನರಸಣ್ಣಗೌಡ ಬಿ.ಗಣೇಕಲ್ ಆರೋಪಿಸಿದ್ದಾರೆ…
ಮೊದಲು ಹಿರೇಬೂದುರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಯಾಗಿತ್ತು, ಹೇಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿದ್ದ ಮದರಕಲ್ ಗ್ರಾಮವೂ ಶಾವಂತಗೇರಾ ಗ್ರಾಮ ಪಂಚಾಯತಿಗೆ ಸೇರಿಸಿಕೊಂಡಿರುವ ಸಮಸ್ಯೆಯಿಂದ ಮದರಕಲ್ ಗ್ರಾಮದ ಪ್ರಭಾವಿ ಮುಖಂಡರು ಕೋರ್ಟ್ ಮೊರೆ ಹೋಗಿದ್ದರಿಂದ ಹೇಮನಾಳ ಮತ್ತು ಶಾವಂತಗೇರಾ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದಿರುವುದಿಲ್ಲ.
ಸದ್ಯ ಶಾವಂತಗೇರಾ ಗ್ರಾಮ ಪಂಚಾಯತಿ ಸಮಸ್ಯೆಗಳ ಆಗರವಾಗಿದೆ. ಅದರಲ್ಲಿ ಗ್ರಾಮ ಪಂಚಾಯತಿ ಇರುವುದು ಮೂಲಭೂತ ಸಮಸ್ಯೆಗಳಾದ ಬೆಳಕು, ನೀರು, ವಸತಿ ಪೂರೈಸಲು. ಆದರೆ, ಶಾವಂತಗೇರಾ ಗ್ರಾಮ ಪಂಚಾಯತಿಯಲ್ಲಿ ಚುನಾಯಿತ ಸದಸ್ಯರು ಇರಲಾರದಿಂದ “ಬೆಕ್ಕು ಇಲ್ಲದ ಮನೆಯಲ್ಲಿ ಇಲಿಚಾಮಟ ಲಾಗ ಹೊಡೆದಂತೆ” ಎಂಬ ಗಾದೆಯಂತೆ ಇಒ ಮತ್ತು ಪಿಡಿಒಗಳ ಚೆಲ್ಲಾಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2023-24ನೇ ಸಾಲಿನಲ್ಲಿ ವಸತಿ ಯೋಜನೆ ಅಡಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 30, ಬಸವ 80, ಪಿಎಮ್ಆರ್ ವೈಯ್ 372 ಸಮೀಕ್ಷೆ ಪಟ್ಟಿಯಲ್ಲಿ ವಸತಿಗಳು ಮಂಜೂರಾಗಿವೆ. ಆದರೆ, ಅಭಿವೃದ್ಧಿ ಅಧಿಕಾರಿ ಶಂಶುದ್ಧೀನ್ ಅವರು ರಾಜಕೀಯ ವ್ಯಕ್ತಿಗಳ ಗುಲಾಮ ಅಥವಾ ಗುಮಾಸ್ತರಾಗಿ ಕೆಲಸ ಮಾಡಿ, ರಾಜಕೀಯ ಪ್ರಭಾವಿಗಳ ಸಂಬಂಧಕರಿಗೆ ಮನೆಗಳು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಆಡಳಿತಾಧಿಕಾರಿಯಾದ ಬಸವರಾಜ ಹಟ್ಟಿ ಮತ್ತು ಪಿಡಿಓ ಶಂಶುದ್ಧೀನ್ ಅವರು ಮನೆಗಳು ಹಾಕುತ್ತೇವೆಂದು 20 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ಹಣ ವಸೂಲಿ ಮಾಡಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಅದಕ್ಕಾಗಿ ಪಿಡಿಓ ಮತ್ತು ಇಓ ರವರು ಪಂಚಾಯತ್ ರಾಜ್ಯ ಕಾಯ್ದೆ 111 ಆಕ್ಟ್ ಪ್ರಕಾರ ಕಾರ್ಯನಿರ್ವಹಸುತ್ತಿಲ್ಲ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.