ತಾಲೂಕಿನ ತೂಬಗೆರೆ ಹೋಬಳಿಯ ತುರುವನಹಳ್ಳಿ ಗ್ರಾಮದಲ್ಲಿ ಸಿದ್ದಲಿಂಗಪ್ಪ ಎಂಬವರಿಗೆ ಸೇರಿದ ದನದ ಕೊಟ್ಟಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದಿದೆ.
ಇಂದು ಮಧ್ಯಾಹ್ನ ನೋಡ ನೋಡುತ್ತಲೇ ತೆಂಗಿನ ಗರಿಗಳ ಹೊದಿಕೆಯಿಂದ ನಿರ್ಮಾಣ ಮಾಡಿದ್ದ ದನದ ಕೊಟ್ಟಿಗೆ ಹೊತ್ತಿ ಉರಿದಿದೆ ಬೆಂಕಿಯ ಕೆನ್ನಾಲಿಗೆಗೆ ದನದ ಕೊಟ್ಟಿಗೆ ಸಂಪೂರ್ಣವಾಗಿ ಭಸ್ಮವಾಗಿದೆ.
ಅವಗಡ ಸಂಭವಿಸಿದ ಸಮಯದಲ್ಲಿ ದನದ ಕೊಟ್ಟಿಗೆ ಒಳಗಡೆ ಯಾವುದೇ ಜಾನುವಾರುಗಳಾಗಲಿ ಹಾಗೂ ಮಾಲೀಕರಾಗಲಿ ಇಲ್ಲದೆ ಇರುವುದರ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.