ಅಯ್ಯಪ್ಪ ಮಾಲೆ ಧರಿಸಿ ತಂದೆಯೊಂದಿಗೆ ಪುಟ್ಟ ಬಾಲಕ ಶಬರಿಮಲೆಗೆ ದೇವರ ದರ್ಶನಕ್ಕೆಂದು ಬಂದಿದ್ದು, ಮಾಲಾಧಾರಿ ಪುಟ್ಟ ಬಾಲಕ ನೂಕುನುಗ್ಗಲಿನಲ್ಲಿ ತಂದೆಯಿಂದ ಬೇರ್ಪಟ್ಟಿದ್ದಾನೆ. ತಂದೆ ಕಾಣದ ಹಿನ್ನೆಲೆ ತನ್ನ ಕಣ್ಣೀರಿಡುತ್ತಾ, ಅಪ್ಪಾ… ಎಲ್ಲಿದ್ದೀಯಾ, ಬೇಗ ಬಾ ಅಪ್ಪಾ… ಎಂದು ಪುಟ್ಟ ಬಾಲಕ ಜೋರಾಗಿ ಕೂಗಾಡುತ್ತಿರುವ ವಿಡಿಯೊ ವೈರಲ್ ಆಗಿದೆ.
ಕಳೆದ ಕೆಲವು ದಿನಗಳಿಂದ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ವಿಪರೀತ ಜನದಟ್ಟನೆಯ ಕಾರಣದಿಂದ ಅನೇಕ ಯಾತ್ರಾರ್ಥಿಗಳು ಶಬರಿಮಲೆ ದೇವಸ್ಥಾನಕ್ಕೆ ಬಂದು ಅಯ್ಯಪ್ಪ ದೇವರ ದರ್ಶನವನ್ನು ಪಡೆಯದೆ, ಪಂದಳಂನಿಂದ ಹಿಂದಿರುಗಿದ್ದಾರೆ ಎನ್ನಲಾಗಿದೆ.