ಶಕುನಿ ಪಾತ್ರದಾರಿಯಾಗಿ ಅಭಿನಯ ಮಾಡುತ್ತಿದ್ದ ವೇಳೆ ಅಸ್ವಸ್ಥ: ವೇದಿಕೆಯಲ್ಲಿಯೇ ಕುಸಿದು ಬಿದ್ದು ಉಸಿರು ಚೆಲ್ಲಿದ ಕಲಾವಿದ

ದೇವನಹಳ್ಳಿ ತಾಲೂಕಿನ 28ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ, ನಿವೃತ್ತ ಉಪನ್ಯಾಸಕರು, ಸಾಹಿತಿ, ಕಲಾವಿದರೂ ಆಗಿದ್ದ ಅರದೇಶಹಳ್ಳಿಯ ಎನ್.ಮುನಿಕೆಂಪಣ್ಣ(72) ನವರು ಪೌರಾಣಿಕ ನಾಟಕ ಕುರುಕ್ಷೇತ್ರದಲ್ಲಿ ಶಕುನಿ ಪಾತ್ರ ನಿರ್ವಹಿಸುವ ವೇಳೆ ಕುಸಿದುಬಿದ್ದು ಸಾವನಪ್ಪಿದ್ದಾರೆ.

ಈ ಘಟನೆ ಯಲಹಂಕ ಬಳಿಯ ಸಾತನೂರು ಗ್ರಾಮದಲ್ಲಿ ಸಂಭವಿಸಿದೆ‌‌.

ಅರದೇಶನಹಳ್ಳಿ ಗ್ರಾಮದ ಮುನಿಕೆಂಪಣ್ಣ ಅವರು ಯಲಹಂಕದಲ್ಲಿ ನೆಲೆಸಿದ್ದರು. ಕಳೆದ ರಾತ್ರಿ ಸಾತನೂರು ಗ್ರಾಮದಲ್ಲಿ ನಡೆದ ಕುರುಕ್ಷೇತ್ರ ಪೌರಾಣಿಕ ನಾಟಕದಲ್ಲಿ ಶಕುನಿ ಪಾತ್ರದಾರಿಯಾಗಿ ಅಭಿನಯ ಮಾಡುತ್ತಿದ್ದ ವೇಳೆ, ವೇದಿಕೆಯಲ್ಲಿಯೇ ಕುಸಿದು ಬಿದ್ದು ಉಸಿರು ಚೆಲ್ಲಿದ್ದಾರೆ.

ಮೃತರು ಮಡದಿ, ಇಬ್ಬರು ಪುತ್ರರನ್ನು ಅಗಲಿದ್ದು, ಇಂದು ಮಧ್ಯಾಹ್ನ 3 ಗಂಟೆ ಅಂತ್ಯಕ್ರಿಯೆ ಅರದೇಶನಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *