ಶಂಕುಸ್ಥಾಪನೆ ಆಗಿ 10 ವರ್ಷವಾದರೂ ಇಎಸ್ಐ ಆಸ್ಪತ್ರೆ ಕಟ್ಟಡ ಕಾಮಗಾರಿ ಅಪೂರ್ಣ; ವಿಧಾನಸಭಾ ಕಲಾಪದಲ್ಲಿ ಆಸ್ಪತ್ರೆ ಆರಂಭಕ್ಕೆ ತೊಡಕಿನ ಬಗ್ಗೆ ಕಾರ್ಮಿಕ ಸಚಿವರಿಗೆ ಪ್ರಶ್ನಿಸಿದ ಶಾಸಕ ಧೀರಜ್‌ಮುನಿರಾಜ್: ಶೀಘ್ರವಾಗಿ ಆಸ್ಪತ್ರೆ ಆರಂಭಕ್ಕೆ ಮನವಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಕಾರ್ಮಿಕರ(ಇಎಸ್ಐ) ಆಸ್ಪತ್ರೆ.

2013ರ ಜೂನ್ 9ರಂದು 76.88 ಕೋಟಿ ವೆಚ್ಚದ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರುತ್ತದೆ. ಶಂಕುಸ್ಥಾಪನೆ ಆಗಿ 10ವರ್ಷಗಳು ಕಳೆದರೂ ಸೇವೆಗೆ ಸಿದ್ಧವಾಗದ ಇಎಸ್ಐ ಆಸ್ಪತ್ರೆ.

ತಾಲೂಕಿನಲ್ಲಿ ಏಷ್ಯಾದ ಎರಡನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶವಿದೆ ಇಲ್ಲಿನ ಕಾರ್ಖಾನೆಗಳಲ್ಲಿ ಲಕ್ಷಾಂತರ ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ತುರ್ತು ಚಿಕಿತ್ಸೆಗಾಗಿ ಬೆಂಗಳೂರಿನ ರಾಜಾಜಿನಗರಕ್ಕೆ ಕರೆದೊಯ್ಯಲಾಗುತ್ತದೆ. ಇದು ರೋಗಿಗಳಿಗೆ ಸಾಕಷ್ಟು ಸಮಸ್ಯೆಗೆ ಕಾರಣವಾಗುತ್ತಿತ್ತು. ಇದರಿಂದ ದೊಡ್ಡಬಳ್ಳಾಪುರದಲ್ಲಿ ಇಎಸ್ ಐ ಆಸ್ಪತ್ರೆ ಸೇವೆ ಆರಂಭವಾದರೆ ಸಾವಿರಾರು ಕಾರ್ಮಿಕರಿಗೆ ಉಪಕಾರಿಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದ್ದರಿಂದ ಇಲ್ಲಿ ಆಸ್ಪತ್ರೆಗೆ ಶಂಕುಸ್ಥಾಪನೆ ನಡೆಸಲಾಯಿತು. ಆದರೆ ಕಾರ್ಮಿಕರ ಸೇವೆಗೆ ಸಿಗದ ಇಎಸ್ಐ ಆಸ್ಪತ್ರೆ. ಸೇವೆ ವಿಳಂಬ ಹಿನ್ನೆಲೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್‌ ಮುನಿರಾಜ್ ಅವರು ವಿಧಾನಸಭಾ ಕಲಾಪದಲ್ಲಿ ಆಸ್ಪತ್ರೆ ಆರಂಭಿಸುವದಕ್ಕೆ ತೊಡಕೇನು ಎಂದು ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರಿಗೆ ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಇ.ಎಸ್.ಐ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದಿಲ್ಲ ಆದ್ದರಿಂದ ಪ್ರಾರಂಭ ಮಾಡಲು ಸಾಧ್ಯವಾಗಿರುವುದಿಲ್ಲ. ಶೇಕಡ 95ರಷ್ಟು ಕಾಮಗಾರಿಯು ಪೂರ್ಣಗೊಂಡಿದ್ದು, ವಿದ್ಯುತ್ ಸಂಪರ್ಕ ಕಾಮಗಾರಿ ಬಾಕಿ ಇರುತ್ತದೆ.

ಕೇಂದ್ರ ಸರ್ಕಾರದ ಕಾರಾವಿ ನಿಗದಮದವರು ಕಟ್ಟಡ ನಿರ್ಮಾಣದ ಕಾರ್ಯವನ್ನು ಪ್ರಾರಂಭಿಸಿದ್ದು, ಕೆಲಸವು ಪ್ರಗತಿಯಲ್ಲಿದೆ. ಕಾರಾವಿ ನಿಗಮವು ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸಿದ ನಂತರ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು ಎಂದು ಕಾರ್ಮಿಕ ಸಚಿವರು ಉತ್ತರಿಸಿದರು.

ನಂತರ ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಎಲೆಕ್ಟ್ರಿಕಲ್ ಕಾಮಗಾರಿಗೆ ಸಂಬಂಧಿಸಿದಂತೆ ಬೆಸ್ಕಾಂಗೆ ಪಾವತಿಸಬೇಕಾದ ಮೊತ್ತವನ್ನು ಪಾವತಿಸಲಾಗಿದ್ದು, ಕಾಮಗಾರಿ ನಡೆಸಲು ಬಾಕಿಯಿದೆ. ಈ ಕಾಮಗಾರಿಗಳನ್ನು ತಕ್ಷಣದಲ್ಲಿ ಪೂರ್ಣಗೊಳಿಸಲು ಬೆಸ್ಕಾಂಗೆ ಸೂಚಿಸುವುದು. ನೀರಿನ ಸಂಪರ್ಕಕ್ಕಾಗಿ ಬೋರ್‌ವೆಲ್‌ಗೆ ವಾಟರ್ ಬೋಡ್‌ಗೆ ಪಾವತಿಸಬೇಕಾದ ಮೊತ್ತವನ್ನು ಪಾವತಿಸಲಾಗಿದ್ದು, ಕಾಮಗಾರಿ ನಡೆಸಲು ಬಾಕಿಯಿದೆ. ಈ ಕಾಮಗಾರಿಗಳನ್ನು ತಕ್ಷಣದಲ್ಲಿ ಪೂರ್ಣಗೊಳಿಸಲು ಸಂಬಂಧ ಪಟ್ಟ ಇಲಾಖೆಗೆ ಸೂಚಿಸುವುದು.

ಈ ಆಸ್ಪತ್ರೆಯ ತಕ್ಷಣದಲ್ಲಿ ಆರಂಭಿಸುವ ಅವಶ್ಯಕತೆಯಿರುತ್ತದೆ. ಕಾಮಗಾರಿ ವಿಳಂಬಕ್ಕೆ ಕಾರಣಗಳನ್ನು ನೀಡದೆ ಅತಿಶೀಘ್ರದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ತಕ್ಷಣದಲ್ಲಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಸದನದಲ್ಲಿ ಮನವಿ ಮಾಡಿದ ಶಾಸಕ ಧೀರಜ್ ಮುನಿರಾಜ್.

Leave a Reply

Your email address will not be published. Required fields are marked *