ವ್ಯಾಲೆಂಟನ್ಸ್ ಡೇ’ಗೆ ದುಡ್ಡು ಕೊಟ್ರೆ ಬಾಡಿಗೆಗೆ‌ ಸಿಗ್ತಾನಂತೆ ಬಾಯ್ ಫ್ರೆಂಡ್: ಆಫರ್ ಪೋಸ್ಟರ್ ವೈರಲ್..

ಜಪಾನ್​, ಕೊರಿಯ ಸೇರಿದಂತೆ ಕೆಲ ದೇಶಗಳಲ್ಲಿ ಬಾಡಿಗೆ ಬಾಯ್​ಫ್ರೆಂಡ್​ ಮತ್ತು ಬಾಡಿಗೆ ಗರ್ಲ್​ಫ್ರೆಂಡ್​​ ಸಿಗುತ್ತಾರೆ ಎಂಬ ಕುರಿತು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಇದು ವಿದೇಶಿ ಸಂಸ್ಕೃತಿಯಾಗಿದ್ದು. ಇದನ್ನು ಭಾರತೀಯರು ಕಟುವಾಗಿ ವಿರೋಧಿಸುತ್ತಾರೆ. ಇದೆಲ್ಲದರ ನಡುವೆ ಇದೀಗ ಬೆಂಗಳೂರಿನಲ್ಲಿ ವ್ಯಾಲೆಂಟೈನ್ಸ್​​ ಡೇಗೆ ಬಾಯ್​ ಫ್ರೆಂಡ್​ ಬೇಕಾ? ಎಂಬ ಪೋಸ್ಟರ್​ ನ್ನು‌ ಕಿಡಿಗೇಡಿಗಳು ಅಂಟಿಸಿದ್ದಾರೆ. ಇದಕ್ಕೆ ಸಾರ್ವಜನಿಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ.

ಇಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆ.. ಬೆಂಗಳೂರು ನಗರ ಈ ಬಾರಿ ವಿಚಿತ್ರ ಆಚರಣೆಗೆ ಸಜ್ಜಾಗಿದೆ. ಕೇವಲ 389 ರೂ. ‌ಕೊಟ್ರೆ ಸಾಕು ಒಂದು ದಿನದ ಪ್ರಿಯತಮ ಸಿಗ್ತಾನಂತೆ. ಹೀಗೆಂದು ಇದೀಗ ಬೆಂಗಳೂರಿನ ಜಯನಗರ ಭಾಗದಲ್ಲಿ ಪೋಸ್ಟರ್ ವೈರಲ್ ಆಗುತ್ತಿದೆ. ಕಿಡಿಗೇಡಿಗಳು ಗೋಡೆಗೆ ಈ ರೀತಿಯಾಗ ಪೋಸ್ಟರ್ ಅಂಟಿಸಿದ್ದಾರೆ.

“RENT A BOY FRIEND ONLY 389/ SCAN ME” ಎಂದು ಪೋಸ್ಟರ್ ನ್ನು ಕಿಡಿಗೇಡಿಗಳು ಗೋಡೆಗೆ ಅಂಟಿಸಿದ್ದಾರೆ.

ಈ ಪೋಸ್ಟರ್ ನೋಡಿದ‌ ಕೆಲವರಿಂದ ಬಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *