
ವಡ್ಡೆ ವೆಂಕಟೇಶುಲು ಎಂಬ ವ್ಯಕ್ತಿ ತೆಲುಗು ದೇಶಂ ಪಕ್ಷದಲ್ಲಿ ತಿರುಗಾಡುತ್ತಿದ್ದಾಗ ಆತನ ತಾಯಿ ವಡ್ಡೆ ಸುಂಕಮ್ಮ (45) ತನ್ನ ಮಗನಿಗೆ ತಾನು ವೈಎಸ್‌ಆರ್‌ಸಿಪಿ ಪಕ್ಷಕ್ಕೆ ಮತ ಹಾಕಿರುವುದಾಗಿ ಹೇಳಿದ್ದರಿಂದ ಕೋಪಗೊಂಡು ಮದ್ಯ ಸೇವಿಸಿ ಮನೆಗೆ ಬಂದು ಜಗಳವಾಡಿದ್ದಾನೆ. ನಂತರ ಕಬ್ಬಿಣದ ಸುತ್ತಿಗೆಯಿಂದ ಬಡಿದು ತಾಯಿಯನ್ನು ಕೊಂದಿದ್ದಾನೆ.
ಈ ಕುರಿತು ಮಾಹಿತಿ ಪಡೆದ ಕಂಬದೂರು ಪೊಲೀಸರು, ಕೊಲೆ ನಡೆದ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ವಡ್ಡೆ ವೆಂಕಟೇಶಲುಗಾಗಿ ಪೊಲೀಸರು ಬಲೆ ಬೀಸಿದ್ದಾರೆ.