
ವೈದ್ಯರ ನಿರ್ಲಕ್ಷ್ಯ 2 ತಿಂಗಳ ಹಸುಗೂಸು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ನಗರದ ಮಾನಸ ಆಸ್ಪತ್ರೆ ಬಳಿ ನಿನ್ನೆ ರಾತ್ರಿ ಸುಮಾರು 8 ಗಂಟೆಯಲ್ಲಿ ನಡೆದಿದೆ.

ಹೊಸಹಳ್ಳಿ ಮೂಲದ ಗಣೇಶ್ ಹಾಗೂ ಗೀತಾ ದಂಪತಿಗೆ ಜನಿಸಿದ ಯೋಕ್ಷಿತ್ (2 ತಿಂಗಳು) ಮೃತಪಟ್ಟ ಮಗು.

ಭಾನುವಾರದಂದು ಮಗುವಿಗೆ ಕಫಾ ಇದೆ ಎಂದು ಮಾನಸ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಿನ್ನೆ ರಾತ್ರಿ (ಮಂಗಳವಾರ) ಮಗುವಿಗೆ ತುಂಬಾ ಸೀರಿಯಸ್ ಆಗಿದೆ ಎಂದು ಸಾವನ್ನಪ್ಪಿರುವ ಮಗುವನ್ನು ಆಂಬ್ಯುಲೆನ್ಸ್ ಮೂಲಕ ಬೇರೆ ಆಸ್ಪತ್ರೆಗೆ ರವಾನಿಸಲು ಮಾನಸ ಆಸ್ಪತ್ರೆ ವೈದ್ಯರು ಮುಂದಾಗಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ನೇರ ಕಾರಣ. ಮಗು ಬದುಕಿದ್ದಾಗಲೇ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದರೆ ನಾವು ಕರೆದುಕೊಂಡು ಹೋಗುತ್ತಿದ್ದೇವು. ಆದರೆ, ಮಗುವಿಗೆ ಒಮ್ಮೆಲೆ ನಾಲ್ಕು ರೀತಿಯ ಚುಚ್ಚುಮದ್ದು, ಔಷಧಿಗಳನ್ನು ನೀಡಿದ ಪರಿಣಾಮ ಮಗುವಿಗೆ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…