ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಬಲಿಯಾಗಿರುವ ಘಟನೆ ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ನಡೆದಿದೆ. ಅಮರ್ ಶೆಟ್ಟಿ (31) ಮೃತಪಟ್ಟ ಯುವಕ.
ಜ್ವರ ಇದ್ದ ಹಿನ್ನೆಲೆ ಆ.13ರಂದು ಚಿಕಿತ್ಸೆಗಾಗಿ ಮಾಗಡಿ ರಸ್ತೆಯ ಭಾಗ್ಯ ಕ್ಲಿನಿಕ್ ಗೆ ಹೋಗಿದ್ದ ಅಮರ್. ಈ ವೇಳೆ ಜ್ವರಕ್ಕೆ ಇಂಜೆಕ್ಷನ್ ಕೊಟ್ಟಿದ್ದ ವೈದ್ಯ.
ಇಂಜೆಕ್ಷನ್ ಅಡ್ಡ ಪರಿಣಾಮದಿಂದ ಮಲ್ಟಿ ಆರ್ಗನ್ ಡ್ಯಾಮೇಜ್ ಆಗಿದ್ದರಿಂದ ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಮರ್ ಶೆಟ್ಟಿ. ಚಿಕಿತ್ಸೆ ಫಲಿಸದೆ ನಿನ್ನೆ ಅಮರ್ ಶೆಟ್ಟಿ ಮೃತಪಟ್ಟಿದ್ದಾರೆ.
ದುಬೈನಲ್ಲಿದ್ದ ಯುವಕ ಅಮರ್ ಕಳೆದ 1 ವರ್ಷದ ಹಿಂದೆ ಬೆಂಗಳೂರಿಗೆ ಬಂದು ಹೊಟೇಲ್ ಬಿಸಿನೆಸ್ ನಡೆಸುತ್ತಿದ್ದ. ಸದ್ಯ ಭಾಗ್ಯ ಕ್ಲಿನಿಕ್ ವೈದ್ಯನ ಮೇಲೆ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.