ಅಮಾಯಕ ಯುವಕ ಅಮರ್ ಶೆಟ್ಟಿ (31) ನಿಧನಕ್ಕೆ ಕಾರಣವಾದ ಭಾಗ್ಯ ಕ್ಲಿನಿಕ್ ನ್ನು ಆರೋಗ್ಯ ಇಲಾಖಾಧಿಕಾರಿಗಳು ಬೀಗ ಜಡಿದು ಬಂದ್ ಮಾಡಿದ್ದಾರೆ.
ಆ.18ರಂದು ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಅಮರ್ ಶೆಟ್ಟಿ (31) ಬಲಿಯಾಗಿರುವ ಘಟನೆ ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ನಡೆದಿತ್ತು.
ಅಮರ ಸಾವಿಗೆ ವೈದ್ಯನ ಬೇಜವಾಬ್ದಾರಿ ಎಂದು ಕುಟುಂಬಸ್ಥರ ಆರೋಪ ಹಾಗೂ ದೂರಿನ ಅನ್ವಯ ಮಾಗಡಿ ರಸ್ತೆಯಲ್ಲಿರುವ ಭಾಗ್ಯ ಕ್ಲಿನಿಕ್ ನ್ನು ಆರೋಗ್ಯ ಇಲಾಖಾಧಿಕಾರಿಗಳು ಸೀಜ್ ಮಾಡಿದ್ದಾರೆ.
ಜ್ವರ ಇದ್ದ ಹಿನ್ನೆಲೆ ಆ.13ರಂದು ಚಿಕಿತ್ಸೆಗಾಗಿ ಮಾಗಡಿ ರಸ್ತೆಯ ಭಾಗ್ಯ ಕ್ಲಿನಿಕ್ ಗೆ ಹೋಗಿದ್ದ ಅಮರ್. ಈ ವೇಳೆ ಜ್ವರಕ್ಕೆ ಇಂಜೆಕ್ಷನ್ ಕೊಟ್ಟಿದ್ದ ವೈದ್ಯ.
ಇಂಜೆಕ್ಷನ್ ಅಡ್ಡ ಪರಿಣಾಮದಿಂದ ಮಲ್ಟಿ ಆರ್ಗನ್ ಡ್ಯಾಮೇಜ್ ಆಗಿದ್ದರಿಂದ ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಮರ್ ಶೆಟ್ಟಿ. ಚಿಕಿತ್ಸೆ ಫಲಿಸದೆ ಅಮರ್ ಶೆಟ್ಟಿ ಮೃತಪಟ್ಟಿದ್ದರು.
ದುಬೈನಲ್ಲಿದ್ದ ಯುವಕ ಅಮರ್ ಕಳೆದ 1 ವರ್ಷದ ಹಿಂದೆ ಬೆಂಗಳೂರಿಗೆ ಬಂದು ಹೋಟೆಲ್ ಬಿಸಿನೆಸ್ ನಡೆಸುತ್ತಿದ್ದ. ಸದ್ಯ ಭಾಗ್ಯ ಕ್ಲಿನಿಕ್ ವೈದ್ಯನ ಮೇಲೆ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಮರ್ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ಆರೋಗ್ಯ ಸಚಿವ, ಆರೋಗ್ಯ ಆಯುಕ್ತ, ಜಿಲ್ಲಾದಿಕಾರಿಗೆ ದೂರು ನೀಡಿದ್ದ ಅಮರ್ ಸ್ನೇಹಿತರು ಹಾಗೂ ಕುಟುಂಬಸ್ಥರು.