ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಕೋಲಾರ: ಸುಳ್ಳು ಹೇಳಿಕೊಂಡೆ ಜನತೆಯನ್ನು ಯಾಮಾರಿಸುವ ಜೆಡಿಎಸ್, ಬಿಜೆಪಿ ಮತ್ತು ವರ್ತೂರ್ ಪಕ್ಷಗಳನ್ನು ಯಾವುದೇ ಕಾರಣಕ್ಕೂ ನಂಬಬಾರದು ಚುನಾವಣೆಯ ಪೂರ್ವದಲ್ಲಿ ಹೇಳಿದಂತೆ ಮಾಡುವ, ಮಾಡಿದಂತೆ ಹೇಳುವ ಕಾಂಗ್ರೆಸ್ ಪಕ್ಷವನ್ನು ಮಾತ್ರವೇ ಬೆಂಬಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ತಾಲೂಕಿನ ವೇಮಗಲ್ ನಲ್ಲಿ ಶನಿವಾರ ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದ ಜನತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಕ್ಕೆ ಅಧಿಕಾರ ಕೊಟ್ಟಾಗ ಅಭಿವೃದ್ಧಿಗೆ ಒತ್ತು ನೀಡದೆ ಜಾತಿ ಧರ್ಮಗಳ ಮಧ್ಯೆ ಗಲಾಟೆಗಳಿಗೆ ಸೀಮಿತವಾಗಿತ್ತು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಾಗ ಹಾಳು ಮಾಡದೆ ಮನೆ ಮನೆಗೆ ಸೌಲಭ್ಯ ಒದಗಿಸಿದೆ ಕಾಂಗ್ರೆಸ್ ಪಕ್ಷವು ಬಡವರ ದಲಿತರ ಮಹಿಳೆಯರ ಪರವಾಗಿದ್ದು ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾವು ಕಾಂಗ್ರೆಸ್ ಪಕ್ಷದ ಮೇಲೆ ಇರಬೇಕಾಗಿದೆ ಎಂದರು.

ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಮಾದರಿ ಜಿಲ್ಲೆಯಾಗುವಂತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ವೇಮಗಲ್ ಭಾಗದಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಐದು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ, ಮೆಡಿಕಲ್ ಕಾಲೇಜು, ಎಪಿಎಂಸಿಗೆ ನೂರು ಎಕರೆ ಜಾಗ, ರಿಂಗ್ ರಸ್ತೆ, ಮೂರು ಸಾವಿರ ವೆಚ್ಚದ ರಸ್ತೆ ಸೇರಿದಂತೆ ಅಭಿವೃದ್ಧಿಗೆ ಕೆಲಸ ಪ್ರಾರಂಭವಾಗಿದೆ ಮುಂದೆಯೂ ಸಹ ವೇಮಗಲ್ ತಾಲೂಕು ಕೇಂದ್ರವಾಗಿ ಮಾಡಲಾಗುತ್ತದೆ ನಿಮ್ಮ ಋಣ ನಮ್ಮ ಮೇಲಿದೆ ಅದನ್ನು ತೀರಿಸುವುದು ಕೂಡ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ಕಂದಾಯ ಸಚಿವ ಸಿ.ಬಿ‌ ಕೃಷ್ಣಬೈರೇಗೌಡ ಮಾತನಾಡಿ ಈ ಭಾಗದಲ್ಲಿ ಹುಟ್ಟಿ ಬೆಳೆದಿರುವುದರಿಂದ ಜನರ ಋಣದಲ್ಲಿ ನಾನು ಇದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ, ಎಂಎಲ್ಸಿ ಕಾಂಗ್ರೆಸ್‌ ನವರು ಇದ್ದು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಇದು ಅಭಿವೃದ್ಧಿಗೆ ಪೂರಕವಾಗಲಿದೆ ಮೊದಲ ಹಂತದಲ್ಲಿ ಕೈಗಾರಿಕೆ ಸ್ಥಾಪನೆಯಾದ ನಂತರ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿತು ಮೊದಲ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಬೆಳೆಸಬೇಕು ಎಂದು ಉದ್ದೇಶದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ ಎಂದರು

ಈಗಾಗಲೇ ಈ ಭಾಗದಲ್ಲಿ ಯೋಜನಾ ಪ್ರಾಧಿಕಾರ ಘೋಷಣೆ ಮಾಡಿದೆ ಎಚ್.ಕ್ರಾಸ್, ವೇಮಗಲ್ ನರಾಸಪುರ ಮಾಲೂರು, ಕೋಲಾರ ಹೆದ್ದಾರಿ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಇದಕ್ಕೆ ೩೨೦೦ ಕೋಟಿಯನ್ನು ಸರ್ಕಾರ ಮೀಸಲಿರಿಸಿದೆ. ಇದು ವಾಣಿಜ್ಯ ಅಭಿವೃದ್ಧಿಗೆ ಸಹಕಾರವಾಗುತ್ತದೆ ಸ್ಥಳೀಯ ಜನ ಗಂಭೀರವಾಗಿ ಅಲೋಚನೆ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗಲ್ಲಿಸುವ ಮೂಲಕ ಅಧಿಕಾರಕ್ಕೆ ತರಬೇಕು ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ನಿಟ್ಟಿನಲ್ಲಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.

ಈ ಭಾಗದಲ್ಲಿ ನಮ್ಮ ತಂದೆಯವರ ಕಾಲದಿಂದ ನಮಗೆ ಶಕ್ತಿ ತುಂಬಿದ್ದಾರೆ ಇಲ್ಲಿ ಹಕ್ಕು ಪತ್ರ ವಿತರಣೆ ಮಾಡಿರುವವರಿಗೆ ಪಕ್ಕ ಖಾತೆ ಮಾಡದೆ ಇದ್ದು, ಮಾಡಿಸಿಕೊಡಲು ಜವಾಬ್ದಾರಿ ನೀಡಿದ್ದು ಈಡೇರಿಸಲಾಗುವುದು, ಕಾನೂನು ತೊಡಲು ಬಾರದಂತೆ ಸೂರಿಗೆ ಗ್ಯಾರೆಂಟಿ ನೀಡಲಾಗುವುದು ಎಂದು ಭರವಸೆ ನೀಡಿದರು ಮಣ್ಣಿನ ಋಣದಲ್ಲಿ ಬದುಕಿರುವುದರಿಂದ ಎಂದಿಗೂ ಸದಾ ನಿಮ್ಮೊಂದಿಗೆ ಇರುತ್ತೆವೆ ಎಂದರು

ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರ್ಯ ಪೂರ್ವದಿಂದ ತನ್ನದೇ ಸಾಧನೆಗಳನ್ನು ದೇಶಕ್ಕೆ ಕೊಡುಗೆ ಕೊಟ್ಟಿದೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರನ್ನು ಪ್ರಶ್ನೆ ಮಾಡಬೇಕು ಜನರನ್ನು ಯಾಮಾರಿಸಿದ್ದು ಆಗಿದೆ ಅವರ ಆಟ ಚುನಾವಣೆಯಲ್ಲಿ ನಡೆಯಲ್ಲ ಅಂತ ಹೆಚ್ ಕ್ರಾಸ್ ನಲ್ಲಿ ಟೋಕನ್ ಕೊಟ್ಟು ಜನರನ್ನು ಮತ್ತೊಮ್ಮೆ ಯಾಮಾರಿಸಲು ಹೊರಟಿದ್ದಾರೆ ಜನ ಸ್ವಾಭಿಮಾನದಿಂದ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಎಲ್ಲಾ ಜಾತಿ ಧರ್ಮಗಳಿಗೂ ಸಮಾಜಿಕ ನ್ಯಾಯದ ಅಡಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ 17 ವಾರ್ಡ್ ಗಳಲ್ಲಿ ಪರಿಶಿಷ್ಟ ಜಾತಿ 5, ಹಿಂದುಳಿದ ವರ್ಗಕ್ಕೆ 5, ವಕ್ಕಲಿಗ 4, ಪರಿಶಿಷ್ಟ ಪಂಗಡ 1, ಮುಸ್ಲಿಂ1 ಲಿಂಗಾಯತ 1 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದರು,

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಲೋಕಸಭಾ ಪರಾಜಿತ ಅಭ್ಯರ್ಥಿ ಕೆ.ವಿ ಗೌತಮ್ ಮಾತನಾಡಿದರು.

ವೇದಿಕೆಯಲ್ಲಿ ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿಯ 17 ವಾರ್ಡ್ ಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು, ಮುಖಂಡರಾದ ಚಂಜಿಮಲೆ ರಮೇಶ್ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ವೈ ಶಿವಕುಮಾರ್, ಮುನಿಯಪ್ಪ, ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!