ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಸಮೀಪ ನಿಂತಿದ್ದ ವೃದ್ಧರೋರ್ವರ ಪಾದದ ಮೇಲೆ KSRTC ಬಸ್ ಚಕ್ರ ಹರಿದ ಪರಿಣಾಮ, ವೃದ್ಧನ ಕಾಲಿಗೆ ತೀವ್ರವಾಗಿ ಪೆಟ್ಟಾಗಿರುವ ಘಟನೆ ಇಂದು ಸಂಜೆ ನಡೆದಿದೆ ಎನ್ನಲಾಗಿದೆ.
ಗಾಯಗೊಂಡಿರುವ ವೃದ್ಧರನ್ನು ಚಿಕ್ಕಬೆಳವಂಗಲ ನಿವಾಸಿ ನಿವೃತ್ತ ಶಿಕ್ಷಕ ಶಿವಕುಮಾರ್ (81 ವರ್ಷ) ಎನ್ನಲಾಗಿದ್ದು, ಚಿಕ್ಕಬೆಳವಂಗಲಕ್ಕೆ ತೆರಳಲು ಬಸ್ಸಿಗಾಗಿ ಕಾಯುವ ವೇಳೆ ನೆಲಮಂಗಲ ಮಾರ್ಗದಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ವೇಳೆ ಮುಂದಿನ ಚಕ್ರ ಪಾದದ ಮೇಲೆ ಹರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಾಳು ಶಿವಕುಮಾರ್ ಅವರಿಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.