ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್ ತಿಮ್ಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನ ಮಾಡಿದ ವ್ಯಕ್ತಿಯ ಗಡಿಪಾರಿಗೆ ಆಗ್ರಹಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟ ಇಂದು ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯ ಕರೆದಿರುವ ಬಂದ್ ಗೆ ಕುಶಾಲನಗರದಲ್ಲಿ ಬಹುತೇಕ ಅಂಗಡಿಗಳು ಬೆಳಿಗ್ಗೆ 7.30 ತನಕ ತೆರೆದಿರಲಿಲ್ಲ.
ಹಾಲು ಮಾರಾಟ ಕೇಂದ್ರ ಮತ್ತು ಪತ್ರಿಕೆ ವಿತರಣಾ ಮಳಿಗೆ ,ಪೆಟ್ರೋಲ್ ಬಂಕ್ ಮಾತ್ರ ತೆರೆದಿರುವ ದೃಶ್ಯ ಕಂಡು ಬಂತು. ಲಾರಿ ಮಾಲೀಕರ ಮತ್ತು ಚಾಲಕರ ಸಂಘ ಬಂದ್ ಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ.